Lok Sabha Election 2024: ದೇಶಾದ್ಯಂತ ‘ಮನೆ ಮನೆಗೆ ಕಾಂಗ್ರೆಸ್‌ ಗ್ಯಾರಂಟಿ’ ಕಾರ್ಡ್‌: ಅಭಿಯಾನ ಶುರು

5 ನ್ಯಾಯ 5 ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸಲು ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ. ದೇಶದ ಎಲ್ಲ 8 ಕೋಟಿ ಮನೆಗಳಿಗೂ ಇದನ್ನು ತಲುಪಿಸುತ್ತೇವೆ. ನಮ್ಮ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ತಿಳಿಸುತ್ತೇವೆ ಎಂದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 

Nationwide Ghar Ghar Congress Guarantee Card  Campaign Begins grg

ನವದೆಹಲಿ(ಏ.04):  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಜನತೆಗೆ ‘5 ನ್ಯಾಯ 25 ಗ್ಯಾರಂಟಿ’ (ಪಂಚ ನ್ಯಾಯ ಪಚ್ಚೀಸ್‌ ಗ್ಯಾರಂಟಿ) ಘೋಷಣೆ ಮಾಡಿರುವ ಕಾಂಗ್ರೆಸ್‌, ಆ ಭರವಸೆಯನ್ನು ದೇಶದ ಎಲ್ಲ ಮನೆಗೂ ಮುಟ್ಟಿಸಲು ‘ಮನೆ ಮನೆಗೆ ಗ್ಯಾರಂಟಿ’ (ಘರ್‌ ಘರ್‌ ಗ್ಯಾರಂಟಿ) ಅಭಿಯಾನಕ್ಕೆ ಚಾಲನೆ ನೀಡಿದೆ.

ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಈ ಅಭಿಯಾನವನ್ನು ಉದ್ಘಾಟಿಸಿ, ಜನರಿಗೆ ‘ಗ್ಯಾರಂಟಿ ಕಾರ್ಡ್‌’ಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ಅವರು, 5 ನ್ಯಾಯ 5 ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸಲು ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದೇವೆ. ದೇಶದ ಎಲ್ಲ 8 ಕೋಟಿ ಮನೆಗಳಿಗೂ ಇದನ್ನು ತಲುಪಿಸುತ್ತೇವೆ. ನಮ್ಮ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂದು ತಿಳಿಸುತ್ತೇವೆ ಎಂದರು.

ಮಂಡ್ಯ ಸ್ಪರ್ಧೆ ಬಿಟ್ಟು ಬಿಜೆಪಿ ಬೆಂಬಲಿಸುತ್ತಿರುವ ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವರ್ ಖಂಡ್ರೆ

ನಮ್ಮ ಸರ್ಕಾರ ಯಾವತ್ತಿಗೂ ಜನರ ಪರ ಕೆಲಸ ಮಾಡುವ ಕಾರಣ ಗ್ಯಾರಂಟಿಯನ್ನು ನೀಡುತ್ತಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೋದಿ ಕೀ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವು ಜನತೆಗೆ ತಲುಪುವುದೇ ಇಲ್ಲ. ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಆದರೆ ಜನರಿಗೆ ಅದು ಸಿಗಲೇ ಇಲ್ಲ. ನಾವು ಏನು ಭರವಸೆ ನೀಡುತ್ತೇವೆಯೋ ಅದನ್ನು ಈಡೇರಿಸುತ್ತೇವೆ ಎಂದು ದೇಶಕ್ಕೆ ಹೇಳುತ್ತೇವೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios