'ಮಹಾ' ಮೈತ್ರಿಗೆ ಶಿವ ಸೇನೆ ಹಿಂದೇಟು; BJPಗೆ ಠಾಕ್ರೆ ತಿರುಗೇಟು!

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗಿದೆ. 50-50 ಸೂತ್ರದ ಕುರಿತು ಮೌನಕ್ಕೆ ಶರಣಾಗಿರುವ ಬಿಜೆಪಿ ವಿರದ್ದ ಶಿವಸೇನೆ ವಾಗ್ದಾಳಿ ನಡೆಸಿದೆ. ನರೇಂದ್ರ ಮೋದಿ  ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿವಸೇನೆ ತಿರುಗೇಟು ನೀಡಿದೆ. ಈ ಮೂಲಕ ಮೈತ್ರಿಯಿಂದ ಹೊರನಡೆಯಲು ಸಜ್ಜಾಗಿದೆ.

Narendra modi policy reason behind economic slowdown Shiv sena attacks bjp

ಮುಂಬೈ(ಅ.28): ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಜೊತೆಯಾಗಿ ನೂತನ ಸರ್ಕಾರ ರಚಿಸಲು ಕಸರತ್ತು ಮುಂದುವರಿಸಿದೆ.  50-50 ಸೂತ್ರಕ್ಕೆ ಪಟ್ಟು ಹಿಡಿದಿರುವ ಶಿವ ಸೇನೆ ಲಿಖಿತ ಭರವಸೆ ನೀಡಲು ಆಗ್ರಹಿಸಿದೆ. ಶಿವ ಸೇನೆ ಬೇಡಿಕೆ ಕುರಿತು ಮೌನ ವಹಿಸಿರುವ ಬಿಜೆಪಿ ವಿರುದ್ಧ ಶಿವಸೇನೆ ಗರಂ ಆಗಿದೆ. ಇದೀಗ ಭಾರತದಲ್ಲಿ ಆರ್ಥಿಕ ಹಿಂಜರಿತಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣ ಎಂದು ಹರಿಹಾಯ್ದಿದ್ದಾರೆ. ಈ ಮೂಲಕ ಸೂತ್ರಕ್ಕೆ ಒಪ್ಪದಿದ್ದರೆ ಮೈತ್ರಿಗೆ ಸಿದ್ದರಿಲ್ಲ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!

ಕೇಂದ್ರ ಸರ್ಕಾರದ ಅಸಮರ್ಪಕ ನೀತಿಗಳಿಂದ ಭಾರತದ ಆರ್ಥಿಕತೆ ಕುಸಿದಿದೆ. ಡಿಮಾನಿಟೈಸೇಶನ್, GST(ತೆರಿಗೆ) ಸೇರಿದಂತೆ ಪ್ರಚಾರದ ನೀತಿಗಳು ಆರ್ಥಿಕತೆಗೆ ಸಹಕಾರಿಯಾಗಿಲ್ಲ. ಇದರಿಂದ ದೇಶದ ಆರ್ಥಿಕತೆ ತೀವ್ರ ಹೊಡೆತ ಬಿದ್ದಿದೆ ಎಂದು ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಬಾಡಿಗಾರ್ಡ್ ಶಿವಸೇನೆಗೆ ಸೇರ್ಪಡೆ

ಬಿಜಿಪೆ ಹಾಗೂ ಶಿವ ಸೇನಾ ಮೈತ್ರಿ ಸರ್ಕಾರದ ಸೀಟು ಹಂಚಿಕೆ ಹಾಗೂ 2.5 ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಶಿವಸೇನೆಗೆ ನೀಡಬೇಕು ಅನ್ನೋ ಬೇಡಿಕೆಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಯಾವುದೇ ಲಿಖಿತ ಭರವಸೆ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ. ಇದರಿಂದ ರೊಚ್ಚಿ ಗೆದ್ದಿರುವ ಶಿವಸೇನೆ, ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.

ಶಿವಸೇನೆಗೆ ಉಪಮುಖ್ಯಮಂತ್ರಿ ಪಟ್ಟ ನೀಡಲು ಬಿಜೆಪಿ ಮುಂದಾಗಿದೆ. ಆದರೆ ಈ ಸೂತ್ರಕ್ಕೆ ಶಿವ ಸೇನೆ ಒಪ್ಪಿಲ್ಲ. ಹೀಗಾಗಿ ಮೈತ್ರಿ ಸರ್ಕಾರದಲ್ಲಿ ಕಚ್ಚಾಟ ಆರಂಭಗೊಂಡಿದೆ. 50-50 ಸೂತ್ರ ಸಂಪೂರ್ಣ ಪಾಲಿಸದಿದ್ದರೆ ಬಿಜಿಪೆ ಜೊತೆ ಸೇರಲು ಶಿವ ಸೇನೆ ಹಿಂದೇಟು ಹಾಕಲಿದೆ. ಈಗಾಗಲೇ ಮಹಾರಾಷ್ಟ್ರ ಹಾಲಿ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಶಿವ ಸೇನಾ ಮುಖಂಡ ದಿವಾಕರ್ ರಾವೊಟೆ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಸರ್ಕಾರ ರಚನೆ ಮಾತುಕತೆಯಲ್ಲೇ ಬಿಜೆಪಿ ಹಾಗೂ ಶಿವ ಸೇನೆಯಲ್ಲಿ ಒಮ್ಮತ ಮೂಡಿಲ್ಲ. 

 

 

Latest Videos
Follow Us:
Download App:
  • android
  • ios