ಪೂರ್ಣಾವಧಿಗೆ ಮತ್ತೆ ಮೋದಿಯೇ ಪ್ರಧಾನಿ: ಅಮಿತ್ ಶಾ
ಮೋದಿಯವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಪ್ರಧಾನಿ ಮೋದಿಯವರೇ ದೇಶವನ್ನು ಮುನ್ನಡೆಸುತ್ತಾರೆ, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸ್ಪಷ್ಟಪಡಿಸಿದ ಅಮಿತ್ ಶಾ
ನವದೆಹಲಿ(ಮೇ.12): ಪ್ರಧಾನಿ ನರೇಂದ್ರ ಮೋದಿ ಅವರಿಗೆ 2025ರಲ್ಲಿ 75 ತುಂಬಲಿದ್ದು, ಪ್ರಧಾನಿ ಹುದ್ದೆಯನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಟ್ಟುಕೊಡಲಿದ್ದಾರೆ ಎಂಬ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಹೇಳಿಕೆಯನ್ನು ಖುದ್ದು ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ತಳ್ಳಿಹಾಕಿದ್ದಾರೆ. ‘ಮತ್ತೆ ಪೂರ್ಣಾವಧಿಗೆ ಮೋದಿಯೇ ಪ್ರಧಾನಿ’ ಎಂದು ಅವರಿಬ್ಬರೂ ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾ, ‘ಕೇಜ್ರಿವಾಲ್ ಅವರು ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ. ಆದರೆ ಕೇಜ್ರಿವಾಲ್ ಆ್ಯಂಡ್ ಕಂಪನಿ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ನಾನು ಹೇಳಲು ಬಯಸುತ್ತೇನೆ, ಬಿಜೆಪಿಯ ಸಂವಿಧಾನದಲ್ಲಿ ಅಂತಹ ಯಾವುದೇ (75 ವರ್ಷಕ್ಕೆ ನಿವೃತ್ತಿ) ಉಲ್ಲೇಖ ಇಲ್ಲ. ಮೋದಿಯವರು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಭವಿಷ್ಯದಲ್ಲಿ ಪ್ರಧಾನಿ ಮೋದಿಯವರೇ ದೇಶವನ್ನು ಮುನ್ನಡೆಸುತ್ತಾರೆ, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ, ಯೋಗಿ ಬದಿಗೆ ಸರಿಸಿ ಅಮಿತ್ ಶಾ ಪಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್!c
ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮಾಡಿ, ‘ಕೇಜ್ರಿವಾಲ್ ಅವರು ಬಿಜೆಪಿ ಬಗ್ಗೆ ಹೇಳಿರುವ ಆಧಾರರಹಿತ ಮಾತುಗಳು ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿ ಸಾಧಿಸಲಿವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಅದ್ಭುತ ಗೆಲುವು ಕಾಣಲಿದೆ. ಮೋದಿ ಅವರೇ ಬಾರಿಗೆ ಪ್ರಧಾನಿಯಾಗುತ್ತಾರೆ ಮತ್ತು ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಇದರಲ್ಲಿ ಬಿಜೆಪಿ, ಎನ್‌ಡಿಎನಲ್ಲಿ ಸಂದೇಹವಿಲ್ಲ’ ಎಂದಿದ್ದಾರೆ.