ಮಾ. 13 ರಂದು ಕೆಆರ್ ಪೇಟೆ(KR Pete)ಯಲ್ಲಿ ನಡೆಯುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ(Prajadhwani yatre) ಹಿನ್ನೆಲೆ ಇಂದು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಮಾಜಿ ಶಾಸಕ ಕೆಬಿ ಚಂದ್ರಶೇಖರ್ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಹೈಡ್ರಾಮವೇ ಸೃಷ್ಟಿಯಾಯಿತು. 

ಮಂಡ್ಯ (ಮಾ.6) : ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ಮೊದಲ ಬಾರಿಗೆ ಕಮಲ ಬಾವುಟ ಹಾರಿಸಿದ್ದ ಸಚಿವ ನಾರಾಯಣಗೌಡ ಇದೀಗ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎನ್ನುವ ಮಾತುಗಳು ಕೇಳಿಬರ್ತಿವೆ. ಈ ಹಿಂದೆ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ನಾರಾಯಣಗೌಡ ಈಗ ಕಾಂಗ್ರೆಸ್ ಮನೆ ಬಾಗಿಲು ತಟ್ಟಲು ಶುರುಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಕೆಆರ್ ಪೇಟೆ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಗೌಡ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾ ಕೈ ಮುಖಂಡರಿಗೆ ತರಾಟೆ ತೆಗೆದುಕೊಂಡರು.

ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್‌ಗೆ ಬಳೆ ನೀಡಿ ಕಾರ್ಯಕರ್ತರ ಆಕ್ರೋಶ

ಮಾ. 13 ರಂದು ಕೆಆರ್ ಪೇಟೆ(KR Pete)ಯಲ್ಲಿ ನಡೆಯುವ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ(Prajadhwani yatre) ಹಿನ್ನೆಲೆ ಇಂದು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಮಾಜಿ ಶಾಸಕ ಕೆಬಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಹಲವು ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಹೈಡ್ರಾಮವೇ ಸೃಷ್ಟಿಯಾಯಿತು. 

ಸಚಿವ ನಾರಾಯಣಗೌಡ ಕಾಂಗ್ರೆಸ್‌ ಅಭ್ಯರ್ಥಿ ಆಗ್ತಾರಾ?: ಎಚ್‌.ಡಿ.ರೇವಣ್ಣ ಜೆಡಿಎಸ್‌ ಅಭ್ಯರ್ಥಿಯಾಗುವ ಕುರಿತೂ ಗಾಳಿ ಸುದ್ದಿ

ನಾಯಕರ ವಿರುದ್ಧವೇ ಗುಡುಗಿದ ಕೆಆರ್ ಪೇಟೆ ಕೈ ಕಾರ್ಯಕರ್ತರು(Congress workers), ನಾರಾಯಣಗೌಡ()ರನ್ನ ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಒತ್ತಾಯಿಸಿದರು.‌ ನಾರಾಯಣಗೌಡ(KC Narayanagowda)ನ ವಿರುದ್ಧ ಇಷ್ಟು ವರ್ಷ ನಾವು ಹೋರಾಡಿದ್ದೇವೆ. ನಮ್ಮ ಕಾರ್ಯಕರ್ತರು ಅವನಿಂದ ಜೈಲಿಗೆ ಹೋಗಿದ್ದಾರೆ. ಈಗ ಅವನು ಪಕ್ಷಕ್ಕೆ ಬಂದ್ರೆ ಹೇಗ್ ಸೇರಿಸಿಕೊಳ್ಳುತ್ತೀರಾ? ಅವನು ದುಡ್ಡು ಕೊಡ್ತಾನೆ ಅಂತಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತೀರಾ. ನೀವೆಲ್ಲಾ ಗಂಡಸರಾ, ಬಳೆ ತೊಟ್ಟುಕೊಳ್ಳಿ. ಒಂದು ವೇಳೆ ಅವನನ್ನು ಸೇರಿಸಿಕೊಂಡರೆ ಕೆಆರ್ ಪೇಟೆಗೆ ಡಿಕೆ ಶಿವಕುಮಾರ್(DK Shivakumar) ಅಲ್ಲಾ ಯಾರೇ ಬಂದ್ರೂ ಕಲ್ಲಲ್ಲಿ‌ ಹೊಡೆಯುತ್ತೇವೆ ಎಂದು ಏಕವಚನದಲ್ಲಿ ಅವಾಜ್ ಹಾಕಿದ ಘಟನೆ ನಡೆದಿದೆ. ಬಳಿಕ ಅಲ್ಲೆ ಇದ್ದ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್‌ಗೆ ಬಳೆ ನೀಡಿದ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಮಂಡ್ಯ ಉಸ್ತುವಾರಿ ಕೊಟ್ರು ಬೇಡ: ಸಚಿವ ಕೆ.ಸಿ. ನಾರಾಯಣಗೌಡ