Naragunda CC Patil Election Results 2023: ನರಗುಂದದಲ್ಲಿ ಸಿಸಿ ಪಾಟೀಲ್‌ಗೆ ಗೆಲುವಿನ ಕುಂದ!
ರೈತ ಬಂಡಾಯಕ್ಕೆ ಹೆಸರಾಗಿದ್ದ, 80ರ ದಶಕದ ಕರ್ನಾಟಕದ ರೈತ ಚಳವಳಿಯ ಮೂಲ ಸ್ಥಾನವಾದ ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಅವರು 72154 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ನರಗುಂದ (ಮೇ.13): ರೈತ ಬಂಡಾಯಕ್ಕೆ ಹೆಸರಾಗಿದ್ದ, 80ರ ದಶಕದ ಕರ್ನಾಟಕದ ರೈತ ಚಳವಳಿಯ ಮೂಲ ಸ್ಥಾನವಾದ ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ್ ಅವರು 72154 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ.ಆರ್.ಯಾವಗಲ್ಲ ಅವರು 70520 ಮತಗಳನ್ನು ಗಳಿಸಿದ್ದರು. ನರಗುಂದ ಕ್ಷೇತ್ರ ಲಿಂಗಾಯತ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಪಂಚಮಸಾಲಿ ಸಮುದಾಯ ಒಟ್ಟು ಮತದಾರರ ಪೈಕಿ 37%ರಷ್ಟು ಪಾಲು ಹೊಂದಿತ್ತು. ನರಗುಂದ ಕ್ಷೇತ್ರದಲ್ಲಿ ಪುರುಷ ಮತದಾರರು-94605, ಮಹಿಳಾ ಮತದಾರರು-91926, ಇತರೆ-7, ಒಟ್ಟು-186538 ಮತದಾರರಿದ್ದರು. ಇನ್ನು 2018 ರಲ್ಲಿ ಸಿ.ಸಿ.ಪಾಟೀಲ್ ಅವರು ಬಿಜೆಪಿಯಿಂದ 1,43,422 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಯುವಕರಿಗೆ ಜಾಗ ಬಿಟ್ಟು ಕೊಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಈ ಹಿಂದೆ ತಿಳಿಸಿದ್ದಾರೆ. ಈ ಚುನಾವಣೆಯೇ ನನ್ನ ಕಡೆ ಚುನಾವಣೆ. ಆದರೆ ಸಕ್ರಿಯ ರಾಜಕಾರಣದಲ್ಲಿದ್ದು, ಯುವಕರಿಗೆ ಮಾರ್ಗದರ್ಶನ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ನಾನು ಶಾಸಕನಾಗಿ, ಸಚಿವನಾಗಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ, ಕ್ಷೇತ್ರದ ಜನತೆಯು ಮಾಡಿರುವ ಉಪಕಾರ ಮರೆಯಲ್ಲ ಎಂದರು.
Karnataka Election 2023 Live: ಬಹುಮತದ ಸರಕಾರಕ್ಕೆ ಮತ ಹಾಕಿದ ಕನ್ನಡಿಗರು
ರಾಜ್ಯ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದ ಜನತೆ ಮೆಚ್ಚಿ 125ರಿಂದ 135 ಬಿಜೆಪಿ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ. ಮತ್ತೊಮ್ಮೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಪಾಟೀಲ ಹೇಳಿದರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.