ಪ್ರಧಾನಿ ಮೋದಿಗೆ ತಿವಿದ ಸಿಎಂ ಸಿದ್ದರಾಮಯ್ಯಗೆ ಖಡಕ್ ಪ್ರತ್ಯುತ್ತರ ಕೊಟ್ಟ ನಮೋ ಬ್ರಿಗೇಡ್!
ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟದ ಬಾಂಬೆ ಸಭೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮೂಲಕ ತಿವಿದಿದ್ದ ಸಿಎಂ ಸಿದ್ದರಾಮಯ್ಯಗೆ ನಮೋ ಬ್ರಿಗೇಡ್ ಖಡಕ್ ಪ್ರತ್ತುತ್ತರ ನೀಡಿದೆ.

ಬೆಂಗಳೂರು (ಸೆ.05): ಕಳೆದ ಮೂರು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಇಂಡಿ ಒಕ್ಕೂಟದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿಗೆ ನಡುಕ ಉಂಟಾಗಿದೆ. ಮೋದಿ ಅಂಡ್ ಕಂಪನಿ ಮುಳುಗುತ್ತಿದೆ ಎಂದು ಟ್ವೀಟ್ ಮೂಲಕ ತಿವಿದಿದ್ದರು. ಈ ಟ್ವೀಟ್‌ಗಳನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ನಮೋ ಬ್ರಿಗೇಡ್ ವತಿಯಿಂದ ಪ್ರತ್ಯುತ್ತರವನ್ನು ನೀಡಿದೆ. ಅದರ ಪೂರ್ಣ ವಿವರ ಇಲ್ಲಿದೆ ನೋಡಿ..
ಸಿದ್ದರಾಮಯ್ಯ ಅವರು ತಮ್ಮ ಖಾತೆಯ ಟ್ವೀಟ್‌ನ ಮೂಲಕ ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀವೊಂದಷ್ಟು ಪ್ರಶ್ನೆಗಳನ್ನು ಕೇಳಿರುವಿರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲಾಗದೇ ಅವರು ಓಡಿಹೋಗುತ್ತಾರೆ ಎಂದೂ ಅದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ಮೋದಿಯವರ ಸಾಧನೆ ಕಣ್ಣೆದುರು ನಿಚ್ಚಳವಾಗಿರುವಾಗ ಅದನ್ನು ಕಾಣಲಾಗದ ನಮ್ಮ ಕುರುಡತನಕ್ಕೆ ಅನುಕಂಪವಿರಬೇಕೇ ಹೊರತು ಉತ್ತರಿಸದಿರುವ ಮೋದಿಯವರ ಕುರಿತಂತೆ ಅಲ್ಲ. ನೀವು ಕೇಳಿರುವ ಅತ್ಯಂತ ಬಾಲಿಶವಾದ ಪ್ರಶ್ನೆಗಳಿಗೆ ಸ್ವಲ್ಪಮಟ್ಟಿಗೆ ಪ್ರಜ್ಞೆಯಿರುವ ಯಾವನು ಬೇಕಾದರೂ ಉತ್ತರಿಸಬಲ್ಲ. ಮೋದಿ ಕಣ್ಣಿಗೆ ರಾಚುವಂತೆ ವಿಕಾಸದ ಹಬ್ಬ ನಡೆಸಿಬಿಟ್ಟಿದ್ದಾರೆ. ಅದರ ಫಲಾನುಭವಿ ನೀವೂ ಕೂಡ ಆಗಿದ್ದೀರಿ ಎನ್ನುವುದನ್ನು ಮರೆಯಬೇಡಿ.
ವಕ್ಫ್ ಬೋರ್ಡ್ ರದ್ದತಿಗೆ ಪತ್ರ: ಕಾನೂನಿನ ಲೋಪದೋಷ ಎತ್ತಿ ತೋರಿಸಿದ ಯತ್ನಾಳ್
ನಿಮ್ಮ ಮೊದಲ ಪ್ರಶ್ನೆ ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಮಹತ್ವದ ಮೂರನೆಯ ಸಭೆಯ ಕುರಿತಂತೆ ಇದೆ. ಅದರ ಬಗ್ಗೆ ಕೊಚ್ಚಿಕೊಳ್ಳುವುದು ನಿಮಗೇ ಬಿಟ್ಟಿದ್ದು. ಆದರೆ ವಾಸ್ತವ ಸಂಗತಿ ನಾಡಿನ ಮುಂದೆ ನಗ್ನವಾಗಿ ನಿಂತಿದೆ. ಇಂಡಿ ಕೂಟಕ್ಕೆ ಒಮ್ಮತದ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಒಮ್ಮತದ ಸೀಟು ಹಂಚಿಕೆ ಇಲ್ಲ, 'ಆದಷ್ಟೂ ಒಮ್ಮತ' ಎಂಬುದಷ್ಟೇ ಸಿಕ್ಕಿದ್ದಷ್ಟೇ ಸೀರುಂಡೆ ಎನ್ನುವಂತಿದೆ. ಒಮ್ಮತದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಲ್ಲ. ಅಷ್ಟೂ ಜನಕ್ಕೂ ಚುನಾವಣೆಯಲ್ಲಿ ಕಾದಾಡಲು ಒಂದೇ ಗುರುತು ಇಲ್ಲ. ಕೊನೆಗೆ, ಒಮ್ಮತದ ಲೋಗೊ ರಚನೆ ಕೂಡ ಸಾಧ್ಯವಾಗಲಿಲ್ಲ.
ಹೀಗೆ ಪ್ರತೀ ಹಂತದಲ್ಲೂ ಮುಗ್ಗರಿಸಿ ಬೀಳುತ್ತಿರುವ ತಾವುಗಳು ಬಲವಾಗಿ ಬೇರೂರಿರುವ ಮೋದಿಯನ್ನು ಅಪಹಾಸ್ಯ ಮಾಡುವುದು ಅಚ್ಚರಿ ಎನಿಸುತ್ತದೆ. ಇಷ್ಟಕ್ಕೂ ಬಿಜೆಪಿಗೆ ನಡುಕ ಶುರುವಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಒಬ್ಬ ವ್ಯಕ್ತಿಯನ್ನು ಉರುಳಿಸಲು ನಿಮ್ಮೊಳಗೇ ಕಿತ್ತಾಡುವ ನೀವೆಲ್ಲರೂ ಒಟ್ಟಾಗಿದ್ದೀರೆಂದರೆ ನಡುಕ ಯಾರಿಗೆ ಎಂದು ನಿಮಗೇ ಅರಿವಾಗುವುದಿಲ್ಲವೇ? ರಾಹುಲ್ ಕ್ರಿಯಾತ್ಮಕ ಸಲಹೆ ನೀಡುತ್ತಾರೆ ಎಂದಿದ್ದೀರಿ. ರಾಹುಲ್ ಏನೆಂಬುದನ್ನು ಜನ ಮರೆತಿದ್ದಾರೆಂಬ ಭ್ರಮೆಯ ಕಾರಣಕ್ಕೆ ಹುಟ್ಟಿಕೊಂಡ ಕಲ್ಪನೆಯಿದು ಎಂದು ಕಿಡಿಕಾರಿದೆ.
ರಫೇಲ್‌ನಲ್ಲಿ ಮೋಸವಾಗಿದೆ ಎಂದು ಕಳೆದ ಚುನಾವಣೆಯುದ್ದಕ್ಕೂ ರಾಹುಲ್ ಹೇಳುತ್ತಾ ಬಂದಿದ್ದನ್ನು ಸುಪ್ರೀಂಕೋರ್ಟು ವಿಚಾರಣೆಗೆ ತೆಗೆದುಕೊಂಡು ಸುಳ್ಳೆಂದಿತಲ್ಲದೇ ಈ ಕುರಿತಂತೆ ಆತ ಕೋರ್ಟಿನ ವಿರುದ್ಧ ತಂಟೆ ಮಾಡಲು ಹೋಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದು ಮರೆತಿದೆಯೇನು? ಕೈಲಾಸ ಯಾತ್ರೆಯ ಹೊತ್ತಲ್ಲಿ ಚೀನಾದ ಮಂತ್ರಿಗಳನ್ನು ಭೇಟಿಮಾಡಿ ಉದ್ಯೋಗ ಸೃಷ್ಟಿಯ ಕುರಿತಂತೆ ಮಾತಾಡಿದ್ದೇನೆ ಎಂದು ಹೇಳಿದ ರಾಹುಲ್‌ನ ಮಾತು ಯಾರೂ ಮರೆತಿಲ್ಲ. ಶತ್ರು ರಾಷ್ಟ್ರವೊಂದರ ಮಂತ್ರಿಗಳೊಂದಿಗೆ ಕೈಲಾಸ ಯಾತ್ರೆಯಲ್ಲಿರುವ ರಾಹುಲ್‌ಗೇನು ಮಾತುಕತೆ? ಇಷ್ಟಕ್ಕೂ ಚೀನಾದ ಮಂತ್ರಿಗಳು ರಾಹುಲ್‌ನನ್ನು ಮಾತನಾಡಿಸಲು ಕೈಲಾಸದ ದಿಕ್ಕಿಗೆ ಬಂದಿದ್ದರೆಂದರೆ ಅದೆಂತಹ ಘನಿಷ್ಠ ಸಂಬಂಧ ಪ್ಲೀಸ್ ಉತ್ತರಿಸಿ ಎಂದು ಬ್ರಿಗೇಡ್ ಕೇಳಿದೆ.
ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್ ಮೆಂಡನ್ ಆತ್ಮಹತ್ಯೆ
2005-06ರಲ್ಲಿ ಸ್ವತಃ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಹೊತ್ತಲ್ಲಿ ಪಕ್ಷವೇ ನಡೆಸುವ ರಾಜೀವ್ ಗಾಂಧೀ ಫೌಂಡೇಶನ್‌ಗೆ ಚೀನಾದ ರಾಯಭಾರಿ ಕಛೇರಿಯಿಂದ 1.35 ಕೋಟಿ ಹಣ ಬಂದಿತ್ತಲ್ಲ, ಅದೇಕೆ? ಈ ಫೌಂಡೇಶನ್‌ಗೆ ವಿದೇಶಿ ಹಣ ಸ್ವೀಕರಿಸಲು ಇದ್ದ ಅನುಮತಿ ಈ ಕಾರಣಕ್ಕೆ ನಿರಾಕರಿಸಲ್ಪಟ್ಟಿದೆಯಲ್ಲ. ಹೋಗಲಿ, 2008ರಲ್ಲಿ ಕಾಂಗ್ರೆಸ್ ಮತ್ತು ಚೀನಾದ ಪಾರ್ಟಿಯೊಂದಿಗೆ ಒಪ್ಪಂದ ನಡೆದು ಅರ್ಧಗಂಟೆಯ ಗುಪ್ತ ಮಾತುಕತೆಯೂ ಜರುಗಿತಲ್ಲ, ಅದರ ವಿವರಗಳೇನೆಂದು ಬಾಯ್ಬಿಟ್ಟಿದ್ದೀರಾ? ಅದಾದ ನಂತರ ನಮ್ಮ ಮತ್ತು ಚೀನಿಯರ ವ್ಯಾಪಾರ ಸಂಬಂಧಗಳಲ್ಲಿ ವೃದ್ಧಿ ಕಂಡು ಚೀನಿಯರ ಲಾಭ ಹೆಚ್ಚಾಗಿದ್ದನ್ನು ಅಂಕಿ-ಅಂಶಗಳು ಸಾಬೀತುಪಡಿಸುತ್ತಿವೆಯಲ್ಲ, ಏಕೆ ಮುಚ್ಚಿಡುತ್ತೀರಿ?
ಚೀನಾ ಭಾರತದೊಳಕ್ಕೆ ನುಸುಳಿದೆ ಎಂದು ಪದೇ ಪದೇ ಆರೋಪಿಸುವ ರಾಹುಲ್ ಮೊನ್ನೆ ಲಡಾಕ್‌ನ ಹಳ್ಳಿಗಳು ಚೀನಿಯರ ತೆಕ್ಕೆಯಲ್ಲಿವೆ ಎಂದರೆ ಹೊರತು, ಯಾವ ಹಳ್ಳಿ ಎಂದು ಹೆಸರಿಸಲೇ ಇಲ್ಲವಲ್ಲ! 1965ರಲ್ಲಿ ನಾವು ಕಳೆದುಕೊಂಡ ಭೂ ಪ್ರದೇಶ, ಪಾಕಿಸ್ತಾನ ಚೀನಾಕ್ಕೆ ನಮ್ಮಿಂದ ಕಸಿದು ಕೊಡುಗೆಯಾಗಿ ಕೊಟ್ಟಿರುವ ಆಕ್ಸಾಯ್‌ಚಿನ್, ಇವೆಲ್ಲದರ ಹೊಣೆ ಹೊರುವುದು ಬಿಟ್ಟು ಚೀನಿಯರು ಒಳ ನುಸುಳಿದ್ದಾರೆಂಬ ಸುಳ್ಳು ಸುದ್ದಿಯನ್ನು ಪುರಾವೆಯಿಲ್ಲದೇ ಹಬ್ಬಿಸುತ್ತಿದ್ದೀರಲ್ಲ!
ಮೋದಿ ಇಸ್ರೋದ ವಿಜ್ಞಾನಿಗಳ ಸಾಧನೆಯನ್ನು ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದಿದ್ದೀರಿ. ಇಸ್ರೋದ ಮಾಜಿ ಅಧ್ಯಕ್ಷ ಮಾಧವ್ ನಾಯರ್, ಯುಪಿಎ ಅಧಿಕಾರದಲ್ಲಿದ್ದಾಗ ಇಸ್ರೋವನ್ನು ಕಡೆಗಣಿಸಿತ್ತೆಂದೂ ಮೋದಿ ಅದಕ್ಕೆ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟು ಬೆಳೆಸಿದರೆಂದು ಖಾಸಗಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ನುಡಿದಿದ್ದಾರೆ. ಅರ್ನಬ್ ಗೋಸ್ವಾಮಿಯೊಂದಿಗೆ ಮಾತನಾಡುತ್ತಾ, ಚಂದ್ರಯಾನ ಎಂದೋ ಮುಗಿಯಬೇಕಿದ್ದ ಯೋಜನೆಯಾಗಿತ್ತು. ಆದರೆ ಯುಪಿಎ-2ರಲ್ಲಿ ಇಡೀ ಯೋಜನೆಯನ್ನು ಮೂಲೆಗುಂಪಾಗಿಸಿದ್ದರಿಂದ ಭಾರತದ ಈ ವಿಕ್ರಮ ತಡವಾಯ್ತು ಎಂದಿದ್ದರು. ಇಷ್ಟಕ್ಕೂ ಮೊದಲ ಚಂದ್ರಯಾನಕ್ಕೆ ಹಸಿರು ನಕಾಶೆ ತೋರಿದ್ದು ಅಟಲ್ ಬಿಹಾರಿ ವಾಜಪೇಯಿಯವರಲ್ಲದೇ ಕಾಂಗ್ರೆಸ್ಸಿನ ಸರ್ಕಾರವಲ್ಲ. ಇತ್ತೀಚೆಗೆ ಇಸ್ರೋದ ಮಾಜಿ ವಿಜ್ಞಾನಿ ಡಾ.ವೈ.ಎಸ್ ರಾಜನ್ ಆದಿತ್ಯ ಯೋಜನೆ 2008ರಲ್ಲೇ ರೂಪುಗೊಂಡಿತ್ತು ಎಂದಿದ್ದಾರೆ. ಅದರರ್ಥ ನಿಮ್ಮ ಸರ್ಕಾರಗಳಿಂದ ಅದಕ್ಕೆ ಯಾವ ಬೆಂಬಲವೂ ಸಿಗದೇ ಮೂಲೆಗುಂಪಾಯ್ತು ಎಂತಲೇ ಅಲ್ಲವೇನು? ಇಸ್ರೊದ ಈ ವಿಕ್ರಮಕ್ಕೆ ಮೋದಿಯೇ ಬರಬೇಕಾಯ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ.