ಶಾಸಕರು ಸಚಿವ ಸ್ಥಾನ ಅಪೇಕ್ಷೆ ಪಡೋದ್ರಲ್ಲಿ ಯಾವುದೇ ತಪ್ಪಿಲ್ಲ: ಕಟೀಲ್‌

ರಾಜಕಾರಣದಲ್ಲಿ ಅಪೇಕ್ಷೆ ಮತ್ತು ಗುರಿ ಇರಲೇ ಬೇಕು| ಸಚಿವ ಸ್ಥಾನ ಕೊಡೋದು ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು| ನಮ್ಮಲ್ಲಿ ಯಾವುದೇ ನಾಯಕತ್ವದ ಚರ್ಚೆಗಳು ಆಗಿಲ್ಲ| ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ| ನಾಯಕತ್ವ ಬದಲಾವಣೆ ಬಗ್ಗೆ ಯಾರೂ ಪ್ರಶ್ನೆ ಎತ್ತಿಲ್ಲ ಎಂದ ನಳಿನ್‌ ಕುಮಾರ್‌ ಕಟೀಲ್‌| 
 

Nalinkumar Kateel Talks Over Cabinet Expansion grg

ಮಂಗಳೂರು(ನ.28): ಶಾಸಕರ ಮಧ್ಯೆ ಯಾವುದೇ ಗೊಂದಲ ಇಲ್ಲ, ಸಚಿವ ಸ್ಥಾನದ ಬಗ್ಗೆ ಗೊಂದಲಗಳಿಲ್ಲ. ಶಾಸಕರು ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಅದನ್ನ ನಿರ್ಧರಿಸಲು ಸಿಎಂ ಬಿ.ಎಸ್‌. ಯಡಿಯೂರಪ್ಪನವರು ಸ್ವತಂತ್ರರಾಗಿದ್ದಾರೆ. ಅಪೇಕ್ಷಿತರನ್ನು ಮಂತ್ರಿ ಮಾಡೋದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಇಂದು(ಶನಿವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಅಪೇಕ್ಷೆ ಮತ್ತು ಗುರಿ ಇರಲೇ ಬೇಕು. ಸಚಿವ ಸ್ಥಾನ ಕೊಡೋದು ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು. ನಮ್ಮಲ್ಲಿ ಯಾವುದೇ ನಾಯಕತ್ವದ ಚರ್ಚೆಗಳು ಆಗಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಯಾರೂ ಪ್ರಶ್ನೆ ಎತ್ತಿಲ್ಲ ಎಂದು ತಿಳಿಸಿದ್ದಾರೆ. 

ನಿಮ್ಮನ್ನ ನಂಬಿದ್ರೆ ಏನೂ ಸಿಗಲ್ಲ! ಕೈ ಕೊಟ್ಟು ಬಂದ ವಲಸಿಗ ಶಾಸಕರಲ್ಲಿ ಅತೃಪ್ತಿ ಸ್ಫೋಟ!

ಕಳೆದ 4 ತಿಂಗಳಿನಿಂದ ನಾಯಕತ್ವದ ಬದಲಾವಣೆ ಇಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇನೆ. ದೆಹಲಿ ಮಟ್ಟದಲ್ಲೂ ಯಾರೂ ಈ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಶಾಸಕರಾಗಲೀ, ಸಂಸದರಾಗಲೀ ಯಾರಾದರೂ ಇದನ್ನ ಹೇಳಿದ್ದಾರಾ ಎಂದು ಮಾಧ್ಯಮದವರಿಗೆ ಕಟೀಲ್‌ ಪ್ರಶ್ನಸಿದ್ದಾರೆ. 
 

Latest Videos
Follow Us:
Download App:
  • android
  • ios