*  ಗಲಭೆಕೋರರಿಗೆ ಯುಪಿ ಮಾದರಿಯ ಕಾನೂನು ಸರಿಯಾದ ಉತ್ತರ: ಕಟೀಲ್‌*  ಎರಡು ದಿನದಲ್ಲಿ ನಾಲ್ಕು ಜಿಲ್ಲೆಯ ಕೋರ್ ಕಮೀಟಿ ಸಭೆ*   ಬಳ್ಳಾರಿ ವಿಭಾಗದ ಬಳ್ಳಾರಿ, ವಿಜಯನಗರ,ಕೊಪ್ಪಳ, ರಾಯಚೂರು ಸಭೆ 

ವರದಿ: ನರಸಿಂಹ ಮೂರ್ತಿ‌ ಕುಲಕರ್ಣಿ

ಬಳ್ಳಾರಿ(ಏ.19): ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Election) ಇನ್ನೊಂದೇ ವರ್ಷ ಬಾಕಿ ಇರುವಂತೆ ಬಿಜೆಪಿ ಪಕ್ಷವೂ ಫುಲ್ ಅಲರ್ಟ್ ಆಗಿದೆ. ಮೊನ್ನೆಯಷ್ಟೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿ ಮುಗಿಸಿದ ಬಿಜೆಪಿ ಇದೀಗ ಜಿಲ್ಲಾವಾರು ಕೋರ್ ಕಮೀಟಿ ಸಭೆ ಮತ್ತು ಸಮಾವೇಶ ಮಾಡಲು ಮುಂದಾಗಿದೆ. ಇದರ ಭಾಗವಾಗಿ ಇದೀಗ ಇಂದು(ಮಂಗಳವಾರ) ಮತ್ತು ನಾಳೆ(ಬುಧವಾರ) ಬಳ್ಳಾರಿ ವಿಭಾಗದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಕೋರ್ ಕಮೀಟಿ ಸಭೆಯನ್ನ ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ನಡೆಸುತ್ತಿದ್ದಾರೆ.

ರಾಜ್ಯ ಪ್ರವಾಸ ಮಾಡ್ತಿರೋ ನಾಯಕರು

ಒಂದು ಕಡೆ ಬಳ್ಳಾರಿಯಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬಳ್ಳಾರಿ ವಿಭಾಗದ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದ್ರೇ ಯಡಿಯೂರಪ್ಪ ನೇತೃತ್ವದ ತಂಡ ಬೆಳಗಾವಿಯಲ್ಲಿ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದ ತಂಡ ಮಂಗಳೂರು ವಿಭಾಗದಲ್ಲಿ ನಿರಂತರವಾಗಿ ಕೋರ್ ಕಮೀಟಿ ಮಾಡೋ ಮೂಲಕ ಪಕ್ಷ ಸಂಘಟನೆಗೆ ಮುಂದಾಗ್ತಿದ್ದಾರೆ.

ಕನ್ನಡ ವಿವಿ ಅಭಿವೃದ್ಧಿಗೆ 20 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಹೆಚ್ಚು ಸ್ಥಾನ ಗೆಲ್ಲಿಸೋದಕ್ಕೆ ಪಕ್ಷ ಸಂಘಟನೆ‌ ಮಾಡಲು ಕರೆ

ಬಳ್ಳಾರಿಯ(Ballari) ರಾಯಲ್ ಪೋರ್ಟ್ ಹೋಟೆಲ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಿದ ನಳಿನ್ ಕುಮಾರ್ ಕಟೀಲ್(Nalin Kumar Kateel) ಈ ಬಾರಿ ಕಲ್ಯಾಣ ಕರ್ನಾಟಕದ(Kalyana Karnataka) 40 ಕ್ಷೇತ್ರದಲ್ಲಿ ಅತಿ ಹೆಚ್ಚು ಶಾಸಕರನ್ನು ಗೆಲ್ಲಿಸೋ ಟಾರ್ಗೆಟ್ ನೀಡಿದ್ದಾರೆ. ಕಾರ್ಯಕಾರಿಣಿಯಲ್ಲಿ ವಿ. ಸೋಮಣ್ಣ, ತೇಜಸ್ವಿನಿ ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸೇರಿದಂತೆ ಹಲವು ಮುಖಂಡರು ಭಾಗಿದ್ದು ಭ್ರಷ್ಟಾಚಾರ ಆರೋಪ ಹೊತ್ತಿರೋ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾತ್ರ ಗೈರಾಗಿದ್ರು. ಕೋರ್‌ ಕಮೀಟಿ ಸಭೆಯಲ್ಲಿ ಇರೋ ಎಲ್ಲ ನಾಯಕರು ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರಿಗೆ ಪಾಠ ಮಾಡಿದ್ರು.. 

ಸಾರ್ವಜನಿಕ ಅಸ್ತಿ ಹಾನಿ‌ ಮಾಡಿದ್ರೇ ಉತ್ತರ ಪ್ರದೇಶದ ಕಾನೂನು

ಇನ್ನೂ ಕೋರ್ ಕಮೀಟಿ ಸಭೆ ಬಳಿಕ ಮಾತನಾಡಿದ ನಳಿನ್‌ ಕುಮಾರ್ ಕಟೀಲ್‌, ಕಾಂಗ್ರೆ(Congress) ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ಅಧಿಕಾರ ಇಲ್ಲದೇ ಇರೋ ರಾಜ್ಯದಲ್ಲಿ ಸಣ್ಣ ಪುಟ್ಟದನ್ನು ದೊಡ್ಡದು ಮಾಡುತ್ತಿದೆ.. ಕೆ.ಜೆ. ಹಳ್ಳಿ ಡಿಜೆ ಹಳ್ಳಿ ಘಟನೆ, ಶಿವಮೊಗ್ಗದಲ್ಲಿ ಇದೀಗ ಹುಬ್ಬಳ್ಳಿ ಘಟನೆಗೆ ಕುಮ್ಮಕ್ಕು ನೀಡ್ತಿದ್ದಾರೆಂದು ನೇರವಾಗಿ ಆರೋಪಿಸಿದ್ರು.. ಹೀಗಾಗಿ ಇನ್ನೂ ಮುಂದಕ್ಕೆ ಇಂತಹ ಘಟನೆ ನಡೆದ್ರೇ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ದಲ್ಲಿ ತೆಗೆದುಕೊಂಡ ನಿರ್ಧಾರ ತೆಗೆದುಕೊಳ್ಳಲಾಗತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಗಲಭೆ ಮಾಡೋರಿಗೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡೋರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದರು. 

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಡಾಕ್ಟರೇಟ್ ಪ್ರಧಾನ

ಪ್ರಚೋದನೆ ಮಾಡಿ ಮತ ಪಡೆಯೋದಿಲ್ಲ

ಬಿಜೆಪಿ(BJP) ಎಂದಿಗೂ ಪ್ರಚೋದನೆ ಮಾಡಿ ಮತ ಪಡೆಯೋರಲ್ಲ ಅಭಿವೃದ್ಧಿಯಿಂದ ಮತ ಕೇಳ್ತೇವೆ‌. ಹುಬ್ಬಳ್ಳಿ ಘಟನೆಯಲ್ಲಿ ಒಂದು ಸಾವಿರ ಜನರನ್ನು ಕ್ಷಣಾರ್ಧದಲ್ಲಿ ಸೇರಿಸಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಅದು ಒಂದು ಸಂಘಟನೆ ಅಥವಾ ಒಂದು ಸಮುದಾಯದಿಂದ ಸಾಧ್ಯವೆನ್ನುವ ಮೂಲಕ ಹುಬ್ಬಳ್ಳಿ ಘಟನೆಯ ಹಿಂದೆ ಕಾಣದ ಕೈಗಳಿವೆ ಎಂದು ಕುಟುಕಿದ್ರು.. ಪೊಲೀಸರ ಮೇಲೆ ಹಲ್ಲೆ ಮಾಡುವುದು, ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಮಾಡುವರಿಗೆ ಯುಪಿ ಹಾಗೂ ಎಂಪಿ ಮಾದರಿ ಉತ್ತಮವಾಗಿದೆ ಎಂದು ಕಟೀಲ್ ಹೇಳಿದ್ರು

ಸ್ವಾಮೀಜಿಯಿಂದ ಕಮೀಷನ್ ಆರೋಪ ವಿಚಾರ

ಸದ್ಯ ರಾಜ್ಯದಲ್ಲಿ ಕಮಿಷನ್ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಯಾಕಂದ್ರೇ ಈಶ್ವರಪ್ಪ ವಿಚಾರ ಹಸಿರಾಗಿರೋವಾಗಲೇ ಸ್ವಾಮೀಜಿಯೊಬ್ಬರು ಕಮೀಷನ್ ಕುರಿತು ಹೇಳಿರೋದು ಬಿಜೆಪಿಗೆ ಸಾಕಷ್ಟು ಮುಜುಗರವಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್ ಕಮಿಷನ್ ಕುರಿತು ಸ್ವಾಮಿಜಿಗಳು ಪೂರ್ಣ ಮಾಹಿತಿ ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಯಾವ ಆಧಾರದಲ್ಲಿ ಸ್ವಾಮಿಗಳು ಹೇಳಿದ್ದಾರೆ ಕಾದು ನೋಡೋಣವೆಂದ್ರು. ಇನ್ನೂ ಜನಾರ್ದನ ರೆಡ್ಡಿ ಪಕ್ಷಕ್ಕೆ ಕರೆದುಕೊಳ್ಳುವ ವಿಚಾರ ಶ್ರೀರಾಮುಲು, ಸೋಮಶೇಖರ್ ರೆಡ್ಡಿಗೆ ಬಿಟ್ಟ ವಿಚಾರವೆಂದು ಬಳ್ಳಾರಿ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.