ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂತ ಪರಿಸ್ಥಿತಿ ಬರಬಾರದಿತ್ತು: ನಳಿನ್ ಕುಮಾರ್ ಕಟೀಲ್
ದೊಡ್ಡ ನಾಯಕರಾಗಿರುವ ಸಿದ್ದರಾಮಯ್ಯಗೆ ವಿಧಾನಸಭಾ ಚುನಾವಣೆಗೆ ಕ್ಷೇತ್ರಗಳೇ ಸಿಗುತ್ತಿಲ್ಲ. ಇಂತಹವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ದಾವಣಗೆರೆ (ಮಾ.21): ದೊಡ್ಡ ನಾಯಕರಾಗಿರುವ ಸಿದ್ದರಾಮಯ್ಯಗೆ ವಿಧಾನಸಭಾ ಚುನಾವಣೆಗೆ ಕ್ಷೇತ್ರಗಳೇ ಸಿಗುತ್ತಿಲ್ಲ. ಇಂತಹವರಿಗೆ ಈ ರೀತಿಯ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವುದೇ ಸೂಕ್ತ, ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲ. ಇದು ಕಾಂಗ್ರೆಸ್ಸಿನ ಒಳ ಜಗಳ ಏನೆಂಬುದನ್ನು ತೋರಿಸುತ್ತದೆ ಎಂದ ಅವರು, ಒಂದಲ್ಲ, ಎರಡಲ್ಲ ಅನೇಕ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಹೆಸರು ಕೇಳಿ ಬಂದರೂ, ಯಾವುದೂ ಸುರಕ್ಷಿತವಲ್ಲವೆಂಬ ಮಾತು ಕಾಂಗ್ರೆಸ್ಸಿನಿಂದಲೇ ಕೇಳಿ ಬರುತ್ತಿದೆ ಎಂದು ಕುಟುಕಿದರಲ್ಲದೆ, ಉರಿಗೌಡ-ನಂಜೇಗೌಡರಂತಹ ವೀರ ಪುರುಷರ ಬಗ್ಗೆ ಸೂಕ್ತ ಚರ್ಚೆಯಾಗಬೇಕಿದೆ ಎಂದು ಇದೇ ವೇಳೆ ಪ್ರತಿಪಾದಿಸಿದರು.
ಕಾಂಗ್ರೆಸ್ ಮುಕ್ತ ಕರಾವಳಿ: ಕಳೆದ ಚುನಾವಣೆಯಲ್ಲಿ ಕರಾವಳಿಯಲ್ಲಿ ಒಂದೆರಡು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲದೇ ಕಾಂಗ್ರೆಸ್ ಮುಕ್ತ ಕರಾವಳಿ ಆಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳೀನಕುಮಾರ ಕಟೀಲ್ ಭವಿಷ್ಯ ನುಡಿದರು. ಭಟ್ಕಳದಲ್ಲಿ ಸೋಮವಾರ ವಿಜಯ ಸಂಕಲ್ಪ ಯಾತ್ರೆಗೂ ಪೂರ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ರಾಜ್ಯದಲ್ಲೇ ಮುಕ್ತವಾಗಲಿದೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಆರಂಭವಾದ ನಂತರ ಕಾಂಗ್ರೆಸ್ಸಿನ ಪ್ರಜಾಧ್ವನಿ, ಜೆಡಿಎಸ್ ನಿಂದ ಪಂಚರತ್ನ ಯಾತ್ರೆ ದಿಕ್ಕೆಟ್ಟು ಉಡುಗಿ ಹೋಗಿದೆ.
ಕಾಂಗ್ರೆಸ್‌ನಿಂದ ಸುಳ್ಳು ಗ್ಯಾರಂಟಿ ಕಾರ್ಡ್ ವಿತರಣೆ: ನಳಿನ್ ಕುಮಾರ್ ಕಟೀಲ್
ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲಿ ಮತ್ತೆ ಡಬ್ಬಲ್ ಎಂಜಿನ್ ಸರ್ಕಾರ ಬರಲಿದ್ದು, ಬಿಜೆಪಿಯ ಉತ್ತಮ ಯೋಜನೆಗಳು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಗತ್ತಿನಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವ, ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳು ಪಿಎಫ್‌ಐ ನಿಷೇಧ ಸೇರಿದಂತೆ ಹಲವು ದಿಟ್ಟನಿರ್ಧಾರಗಳಿಂದ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಸಿದ್ದರಾಮಯ್ಯ ಅವರು ಖರ್ಗೆ, ಪರಮೇಶ್ವರರನ್ನು ಈಗಾಗಲೇ ಮುಗಿಸಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಗಾದಿಯ ಪ್ರಬಲ ಆಕಾಂಕ್ಷಿ ಡಿ.ಕೆ. ಶಿವಕುಮಾರರನ್ನೂ ಮುಗಿಸಲಿದ್ದಾರೆ ಎಂದರು.
ಪಂಚರ್ ಆದ ಪಂಚರತ್ನ ಯಾತ್ರೆ: ಜೆಡಿಎಸ್‌ನ ಪಂಚರತ್ನ ಯಾತ್ರೆ ಪಂಚರ್ ಆಗಿದ್ದು, ಹಾಸನಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗೌಡರ ಕುಟುಂಬದಲ್ಲೇ ಕಲಹ ಉಂಟಾಗಿದೆ. ಜೆಡಿಎಸ್ ಕಳೆದ ಸಲ ಇದ್ದಷ್ಟೂಸ್ಥಾನವನ್ನು ಈ ಸಲ ಪಡೆಯುವುದು ಡೌಟು. ಕಾಂಗ್ರೆಸ್ ಎಲ್ಲ ಕಡೆ ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದು, ಇವರ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದೂ ಗ್ಯಾರಂಟಿ ಕಾರ್ಡ ಹಂಚಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಧನೆ, ಅಭಿವೃದ್ಧಿಯನ್ನು ಹಿಂದಿನ ಯಾವ ಸರ್ಕಾರದಿಂದಲೂ ಆಗಿಲ್ಲ. ಗ್ಯಾರಂಟಿ ಕಾರ್ಡ್ ಎನ್ನುವುದು ಕಾಂಗ್ರೆಸ್ಸಿನ ನಾಟಕ ಮತ್ತು ಪೊಳ್ಳು ಭರವಸೆ ಆಗಿದೆ. ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ಸಿಗೆ ಮಹತ್ವದ ಯೋಜನೆ ಕೊಡಲಾಗಲಿಲ್ಲ. ಇನ್ನು ವಿರೋಧಪಕ್ಷದಲ್ಲಿದ್ದು ಗ್ಯಾರಂಟಿ ಕಾರ್ಡ್ ಹಂಚಿದರೆ ಜನತೆ ನಂಬುವುದಿಲ್ಲ. ಜನತೆ ಇವರನ್ನು ತಿರಸ್ಕಾರ ಮಾಡಿದ್ದು, ಮತ್ತೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ಸಿಗರು ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ ಎಂದರು.
ರಾಹುಲ್ ಗಾಂಧಿ ಬಗ್ಗೆ ಟೀಕೆ: ನಳಿನ್ ಕಟೀಲ್‌ಗೆ ಕಾಂಗ್ರೆಸ್ ನೋಟಿಸ್
ಸತ್ಯಾಸತ್ಯತೆ ಹೊರಬರಲಿ: ಉರಿಗೌಡ, ನಂಜೇಗೌಡರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇವರಿಬ್ಬರ ಬಗ್ಗೆಯೂ ಚರ್ಚೆ ಆಗುತ್ತಿದ್ದು ಸತ್ಯಾಸತ್ಯತೆ ಹೊರಬರಲಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಇತಿಹಾಸ ತಜ್ಞನಲ್ಲ. ಸ್ಪಷ್ಟಆದೇಶ ಇನ್ನಷ್ಟೇ ಬರಬೇಕು ಎಂದ ಅವರು, ರಾಹುಲ್ ಗಾಂಧಿಯವರ ಯುವ ಕ್ರಾಂತಿ ಸಮಾವೇಶದ ಬಗ್ಗೆ ಮತ್ತು ಕ್ಷೇತ್ರ ಪರ್ಯಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಟೀಲ್, ರಾಹುಲ್ ಗಾಂಧಿ ಅವರು ಹತ್ತು ವರ್ಷದ ಹಿಂದೆಯೇ ಇಂತಹ ಯುವ ಸಮಾವೇಶ ಮಾಡಬೇಕಿತ್ತು. ಆದರೆ, ಅವರು ಇದೀಗ ರಿಟೈರ್ಡ್ ಮೂಡಲಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸಂಚಾರ ಮಾಡಬೇಕು. ಏಕೆಂದರೆ ಅವರು ಪ್ರಚಾರ ಮಾಡಿದ ಕಡೆ ಮತ್ತು ಹೋದ ಕಡೆಗಳಲ್ಲೆಲ್ಲಾ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು.