Asianet Suvarna News Asianet Suvarna News

ಕಾಂಗ್ರೆಸ್‌ ಭಯೋತ್ಪಾದಕರ ಪಕ್ಷ: ನಳಿನ್‌ಕುಮಾರ್‌ ಕಟೀಲ್‌

ಕಾಂಗ್ರೆಸ್‌ ಭಯೋತ್ಪಾದಕರ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು. ನಗರದಲ್ಲಿ ‘ಬಿಜೆಪಿ ಪೇಜ್‌ ಪ್ರಮುಖರ ಸಮಾವೇಶ’ದಲ್ಲಿ ಮಾತನಾಡಿ, ಪಿಎಫ್‌ಐ ಸಂಘನೆಯನ್ನು ನಿಷೇಧ ಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ. ಟಿಪ್ಪು ಭಕ್ತರು ಇರಬೇಕಾ, ಆಂಜನೇಯ ಭಕ್ತರು ಇರಬೇಕಾ ಮತದಾರರೇ ನಿರ್ಧರಿಸಲಿ ಎಂದರು. 

Nalin Kumar Kateel Slams On Congress At Gangavati gvd
Author
First Published Feb 16, 2023, 1:00 AM IST | Last Updated Feb 16, 2023, 1:00 AM IST

ಗಂಗಾವತಿ (ಫೆ.16): ಕಾಂಗ್ರೆಸ್‌ ಭಯೋತ್ಪಾದಕರ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಆರೋಪಿಸಿದರು. ನಗರದಲ್ಲಿ ‘ಬಿಜೆಪಿ ಪೇಜ್‌ ಪ್ರಮುಖರ ಸಮಾವೇಶ’ದಲ್ಲಿ ಮಾತನಾಡಿ, ಪಿಎಫ್‌ಐ ಸಂಘನೆಯನ್ನು ನಿಷೇಧ ಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ. ಟಿಪ್ಪು ಭಕ್ತರು ಇರಬೇಕಾ, ಆಂಜನೇಯ ಭಕ್ತರು ಇರಬೇಕಾ ಮತದಾರರೇ ನಿರ್ಧರಿಸಲಿ ಎಂದರು. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುತ್ತಿರಲಿಲ್ಲ. ಆದರೆ ಬಿಜೆಪಿ ನಾಯಕರು ಧ್ವಜ ಹಾರಿಸಿ ತೋರಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸವನ್ನು ಬಿಜೆಪಿಯವರು ಮಾಡಿದರು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲು ಕ್ಷೇತ್ರಕ್ಕಾಗಿ ಪರದಾಡುತ್ತಿದ್ದಾರೆ. ತಾಕತ್ತು ಇದ್ದರೆ ಸಿದ್ದರಾಮಣ್ಣ ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ಸವಾಲು ಹಾಕಿದರು. ಅಲ್ಲದೇ ನನ್ನ ಅಪ್ಪನ ಆಣೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಿಲ್ಲ. ಸಿದ್ದರಾಮಯ್ಯ ಮಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟುಆತಹತ್ಯೆ ಪ್ರಕರಣಗಳು ಜರುಗಿವೆ. ಆಗ ಅವರಿಗೆ ಕಣ್ಣೀರು ಬರಲಿಲ್ಲ ಎಂದರು. ಶಾಸಕ ಮುನವಳ್ಳಿ .2 ಸಾವಿರ ಕೋಟಿ ಅನುದಾನ ತಂದು ಕೆಲಸ ಮಾಡಿದ್ದಾರೆ. ಸಂಸದ ಕರಡಿ ಸಂಗಣ್ಣ ರೈಲು ಯೋಜನೆ ತಂದಿದ್ದಾರೆ ಎಂದು ಶ್ಲಾಘಿಸಿದರು.

ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಮಾತನಾಡಿ, ಮೋದಿಯ ಕೈ ಬಲಪಡಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದರು. ಸಚಿವ ಹಾಲಪ್ಪ ಆಚಾರ ಮಾತನಾಡಿ, ಗಂಗಾವತಿ ಕ್ಷೇತ್ರ ಸಾಕಷ್ಟುಅಭಿವೃದ್ಧಿಯಾಗಿದೆ. ಎಂಜಿನಿಯರಿಂಗ್‌ ಕಾಲೇಜು, ಕೃಷಿ ಕಾಲೇಜು ಸೇರಿದಂತೆ ಸಾಕಷ್ಟುಅಭಿವೃದ್ಧಿಯಾಗಿದೆ. ರಾಜ್ಯದ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಬೊಮ್ಮಾಯಿಯವರು 8 ಸಾವಿರ ಶಾಲಾ ಕೊಠಡಿಗಳನ್ನು ನೀಡಿದ್ದಾರೆ ಎಂದರು.

ಸಮಾವೇಶದಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕ ಬಸವರಾಜ ದಢೇಸೂಗೂರು, ಮಾಜಿ ಶಾಸಕ ಜಿ. ವೀರಪ್ಪ, ವಿರೂಪಾಕ್ಪಪ್ಪ ಸಿಂಗನಾಳ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ಎಚ್‌. ಗಿರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ತಿಪ್ಪೇರುದ್ರಸ್ವಾಮಿ, ಸಂತೋಷ ಕೆಲೋಜಿ, ಚೆನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಡಾ. ಅಮರಗುಂಡಪ್ಪ ಜೀಡಿ, ನಗರಸಭಾ ಸದಸ್ಯ ವಾಸುದೇವ ನವಲಿ, ಉಮೇಶ ಸಿಂಗನಾಳ ಸೇರಿದಂತೆ ಇತರರು ಇದ್ದರು.

ಚುನಾವಣೆ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ: ನಳಿನ್‌ಕುಮಾರ್‌ ಕಟೀಲ್‌

ಕಾರ್ಯಕರ್ತರ ಶ್ರಮದಿಂದ ಎರಡು ಬಾರಿ ಶಾಸಕನಾದೆ: ಕಾರ್ಯಕರ್ತರ ಶ್ರಮದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಲು ಕಾರಣ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ- ಮನೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು. ರಾಜ್ಯದ ಪ್ರಗತಿಗೆ ಪ್ರಧಾನಿ ಮೋದಿ, ಮುಖ್ರಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ಸಾಕಷ್ಟುಅನುದಾನ ನೀಡಿದ್ದಾರೆ. ಹೀಗಾಗಿ ರಾಜ್ಯ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದರು. ಅಲ್ಲದೇ ಬಿಜೆಪಿ ಸರ್ಕಾರದ ಸಾಧನೆ ಗಮನಿಸಿ ಬೇರೆ- ಬೇರೆ ಹಲವರು ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಪಕ್ಷ ಮತ್ತಷ್ಟುಬಲವರ್ಧನೆಯಾಗುತ್ತಿದೆ ಎಂದರು.

Latest Videos
Follow Us:
Download App:
  • android
  • ios