Karnataka BJP President: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರೇ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಎಂದು ಸಿದ್ದಿವಿನಾಯಕನಿಗೆ ಪ್ರಾರ್ಥಿಸಿದ್ದಾರೆ. ಕಾಸರಗೋಡಿನ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ರಾಜ್ಯ ನಾಯಕತ್ವ ಬದಲಾವಣೆಯ ಕೂಗು ಇನ್ನೂ ಹಸಿರಾಗಿಯೇ ಇರುವಂತೆಯೇ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮತ್ತೆ ಆ ಪಕ್ಷದ ರಾಜ್ಯಾಧ್ಯಕ್ಷರಾಗಲಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇರಳ ದೇವಸ್ಥಾನದಲ್ಲಿ ಪ್ರಾರ್ಥಿಸಿ ಹಾರೈಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಗಡಿನಾಡು ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ನಳಿನ್ ಮತ್ತು ಡಿಕೆಶಿ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ, ಮಧೂರು ದೇವರ ಅನುಗ್ರಹದಿಂದ ನಳಿನ್ ಮತ್ತೆ ರಾಜ್ಯಾಧ್ಯಕ್ಷರಾಗಲಿ, ಮಾಜಿ ಆಗದೇ ಇರಲಿ ಎಂದು ಡಿಕೆ ಶಿವಕುಮಾರ್ ಭಾಷಣದಲ್ಲಿ ಹೇಳಿರುವ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿದೆ.
ಯಾಕೆ ಮುಷ್ಕರ ಮಾಡಲಿಲ್ಲ
ಲಾರಿ ಮಾಲೀಕರ ಸಂಘದವರು ಮುಷ್ಕರ ಕರೆದಿರೋ ಬಗ್ಗೆ ನನಗೆ ಮಾಹಿತಿ ಇಲ್ಲ, ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆದಾಗ ಯಾಕೆ ಮುಷ್ಕರ ಮಾಡಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್ ಸ್ಥಾನಕ್ಕೆ ತೀವ್ರ ಪೈಪೋಟಿ; 4 ಎಂಎಲ್‌ಸಿ ಹುದ್ದೆಗಾಗಿ 40 ಕಾಂಗ್ರೆಸ್ಸಿಗರಿಂದ ಲಾಬಿ!
ಎಸ್.ಕರಿಯಪ್ಪನವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಡೀಸೆಲ್ ಬೆಲೆ ಹೆಚ್ಚಳವಾದಾಗ ಮುಷ್ಕರ ಮಾಡಬಹುದಿತ್ತು. ಈಗ ಕೇವಲ ರಾಜಕೀಯಕ್ಕಾಗಿ ಮುಷ್ಕರ ಮಾಡಲು ಹೊರಟಿರುವುದು ಎಷ್ಟು ಸರಿ. ಈಗಲೂ ನಾನು ಎಲ್ಲಾ ಲಾರಿ ಮಾಲೀಕರಿಗೂ ಮನವಿ ಮಾಡುವುದೇನೆಂದರೆ, ರಾಜಕೀಯಕ್ಕೆ ಒಳಗಾಗಿ ಒತ್ತಡಕ್ಕೆ ಮಣಿದು ಮುಷ್ಕರ ಮಾಡಿದರೆ ನಿಮಗೇ ನಷ್ಟ ಆಗುತ್ತದೆ. ನೀವು ಸರ್ಕಾರದ ಜೊತೆ ಇರಬೇಕು.
ನಿಮ್ಮ ಬದುಕು ನೋಡಿ ಒಂದು ದಿನ ಮುಷ್ಕರ ಮಾಡಿದರೆ ಆ ನಷ್ಟ ಭರಿಸಲು ನಿಮ್ಮ ಕೈಯಲ್ಲಿ ಸಾಧ್ಯವಾಗುವುದಿಲ್ಲ. ಲಾರಿ ಇಎಂಐ, ಬಡ್ಡಿ, ಡ್ರೈವರ್‌ಸಂಬಳ ಇದೆಲ್ಲ ಹೊರೆ ಆಗುತ್ತದೆ. ಯಾವುದೇ ಮುಷ್ಕರ ಮಾಡಬೇಡಿ ಎಂದು ಲಾರಿ ಮಾಲೀಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ: ಡಿಕೆಶಿ ಅಕ್ರಮದ ಬಗ್ಗೆ ಟನ್‌ಗಟ್ಟಲೇ ಸಾಕ್ಷಿ ನನ್ನ ಬಳಿಯಿವೆ- ಹೆಚ್‌ಡಿಕೆ; ಎಷ್ಟೇ ಟನ್ ದಾಖಲೆ ಇದ್ರೂ ಬಿಡುಗಡೆ ಮಾಡಲಿ -ಡಿಕೆಶಿ!
