Asianet Suvarna News Asianet Suvarna News

Modi Scheme: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ನಾಗಮಾರಪಳ್ಳಿ ಪುಸ್ತಕ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂರಕ್ಕೂ ಹೆಚ್ಚು ಜನಪರ ಯೋಜನೆಗಳ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಹೊರತರಲಾಗಿರುವ ‘ನವ ಭಾರತಕ್ಕಾಗಿ ಹೊಸ ಯೋಜನೆಗಳು’ ಮತ್ತು ‘ನ್ಯೂ ಸ್ಕೀಮ್ಸ್‌ ಫಾರ್‌ ನ್ಯೂ ಇಂಡಿಯಾ’ ಎಂಬ ಎರಡು ಪುಸ್ತಕಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಿಡುಗಡೆಗೊಳಿಸಿದ್ದಾರೆ.

Nagmarapalli book about Modi scheme rav
Author
Bengaluru, First Published Aug 22, 2022, 6:50 AM IST

ಬೆಂಗಳೂರು (ಆ.22) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂರಕ್ಕೂ ಹೆಚ್ಚು ಜನಪರ ಯೋಜನೆಗಳ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಹೊರತರಲಾಗಿರುವ ‘ನವ ಭಾರತಕ್ಕಾಗಿ ಹೊಸ ಯೋಜನೆಗಳು’ ಮತ್ತು ‘ನ್ಯೂ ಸ್ಕೀಮ್ಸ್‌ ಫಾರ್‌ ನ್ಯೂ ಇಂಡಿಯಾ’ ಎಂಬ ಎರಡು ಪುಸ್ತಕಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಿಡುಗಡೆಗೊಳಿಸಿದ್ದಾರೆ.

ಕೃಷಿ ಸಾಲಕ್ಕೆ ಕೇಂದ್ರದಿಂದ ಬಂಪರ್‌: ಹೆಚ್ಚುವರಿ ಶೇ.1.5 ಬಡ್ಡಿ ಸಬ್ಸಿಡಿ

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್‌ ನಾಗಮಾರಪಳ್ಳಿ(Suryakanth Nagamarapalli) ಅವರು ಈ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಭಾನುವಾರ ಬೆಂಗಳೂರಿ(Bengaluru)ನಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಟೀಲ್‌, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಮತ್ತು ಇನ್ನಿತರರಿಂದ ಮಾಹಿತಿ ಪಡೆದು ಹೊರತಂದಿರುವ ಈ ಪುಸ್ತಕ ವಿವಿಧ ಯೋಜನೆಗಳಿಗೆ ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಕೆಯ ಕಾರ್ಯವಿಧಾನವನ್ನು ಒಳಗೊಂಡಂತೆ ಪೂರ್ಣ ವಿವರಗಳನ್ನು ಒಳಗೊಂಡಿದ್ದು, ದೇಶದ ಪ್ರತಿ ನಾಗರಿಕನ ಮನೆಗೂ ತಲುಪಬೇಕು. ಪ್ರಧಾನಿಯವರ ಪ್ರತಿಯೊಬ್ಬರ ಸಶಕ್ತೀಕರಣದ ಕನಸು ಎಲ್ಲರಿಗೂ ತಲುಪಲು ಇದು ಸಹಾಯಕ ಎಂದರು.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ,, ಉಜ್ವಲಾ, ಉಜಾಲಾ, ಮುದ್ರಾ, ಸ್ಕಿಲ್‌ ಇಂಡಿಯಾ, ಜನ ಔಷಧಿ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ, ಸ್ವಚ್ಛ ಭಾರತ್‌, ಮೇಕ್‌ ಇನ್‌ ಇಂಡಿಯಾ, ಸುರಕ್ಷಿತ ಮಾತೃತ್ವ, ಬೇಟಿ-ಬಚಾವೋ ಬೇಟಿ-ಪಡಾವೋ, ಡಿಜಿಟಲ್‌ ಇಂಡಿಯಾ, ಖೇಲೋ ಇಂಡಿಯಾ, ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಧನ ಯೋಜನೆ, ಸಮರ್ಥ ಯೋಜನೆ, ರಾಷ್ಟ್ರೀಯ ವಯೋಶ್ರೀ ಯೋಜನೆ, ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಪ್ರಧಾನ ಮಂತ್ರಿ ಕೃಷಿ ಕಲ್ಯಾಣ ಅಭಿಯಾನ, ಮಣ್ಣಿನ ಆರೋಗ್ಯ ಕಾರ್ಡ್‌ ಯೋಜನೆ ಸೇರಿದಂತೆ 100ಕ್ಕೂ ಹೆಚ್ಚು ಯೋಜನೆಗಳ ವಿವರವಿದ್ದು, ಸಮಾಜದ ಪ್ರತಿಯೊಂದು ವರ್ಗಕ್ಕೆ ತಲುಪಲು ಇದು ನೆರವಾಗಲಿದೆ ಎಂದರು.

Saryu Canal Project: ಯುಪಿಯ ಲಕ್ಷಾಂತರ ರೈತರಿಗೆ ಪಿಎಂ ಮೋದಿ ಗಿಫ್ಟ್, ಅಟಲ್ ಕನಸು ನನಸು!

ಈ ವೇಳೆ ಮಾತನಾಡಿದ ಸೂರ್ಯಕಾಂತ್‌ ನಾಗಮಾರಪಳ್ಳಿ, ಸ್ಕೀಮ್‌ ವೆಬ್‌ ಪುಟಗಳಿಗಾಗಿ ನಾವು ಕ್ಯೂಆರ್‌ ಕೋಡ್‌ಗಳನ್ನು ನೀಡಿದ್ದೇವೆ. ಇವನ್ನು ಸ್ಕ್ಯಾ‌ನ್‌ ಮಾಡುವ ಮೂಲಕ ನೇರವಾಗಿ ಆಯಾ ವೆಬ್‌ ಪುಟಕ್ಕೆ ಭೇಟಿ ನೀಡಿ ಆಯಾ ಯೋಜನೆಗಳ ಮಾಹಿತಿ ಪಡೆಯುವ ಜೊತೆಗೆ ಅರ್ಜಿಯನ್ನೂ ಸಲ್ಲಿಸಬಹುದು ಎಂದು ತಿಳಿಸಿದರು.

ಬೀದರ್‌ ಉತ್ತರ ಕ್ಷೇತ್ರದ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸುಮಾರು 20,000ಕ್ಕೂ ಹೆಚ್ಚು ಮನೆಗಳಿಗೆ ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು, ಗುರುಪಾದಪ್ಪ ನಾಗಮಾರಪಳ್ಳಿ ¶ೌಂಡೇಶನ್‌ನ ಸದಸ್ಯರು ಈ ಪುಸ್ತಕದ ಪ್ರತಿಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು. ಇದೇ ಸಂದರ್ಭ ಪಕ್ಷದ ಹಾಸನ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್‌, ಸಕಲೇಶಪುರದ ಮುಖಂಡ ನಾರ್ವೆ ಸೋಮಶೇಖರ್‌, ಮುಖಂಡರಾದ ಲಲ್ಲೇಶ್‌ ರೆಡ್ಡಿ, ನೆ.ಲ.ನರೇಂದ್ರಬಾಬು ಉಪಸ್ಥಿತರಿದ್ದರು.

ಫಸಲ್‌ ಬಿಮಾ ನೋಂದಣಿ: ಬಿಡಿಸಿಸಿ ಬ್ಯಾಂಕ್‌ ದೇಶಕ್ಕೆ ಪ್ರಥಮ:

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನೆಚ್ಚಿನ ಯೋಜನೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ 2022-23ನೇ ಸಾಲಿನ ಬೆಳೆ ವಿಮೆ ನೋಂದಣಿ ಮಾಡುವಲ್ಲಿ ಬೀದರ್‌ ಡಿಸಿಸಿ ಬ್ಯಾಂಕ್‌ ಕಳೆದ ಐದು ವರ್ಷದಂತೆ ಈ ವರ್ಷವೂ ಸಹ ಮುಂಚೂಣಿಯಲ್ಲಿದ್ದು, ರಾಷ್ಟ್ರದಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.

ಜಿಲ್ಲೆಯಲ್ಲಿ ಸರಿಸುಮಾರು 2.58 ಲಕ್ಷ ರೈತರಿದ್ದು, ಈ ಪೈಕಿ ಸುಮಾರು 1.64 ಲಕ್ಷ ರೈತರು 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಸಾಲ ಪಡೆದಿರುತ್ತಾರೆ. ಬೆಳೆಸಾಲ ಪಡೆದ ಸುಮಾರು 1.35 ಲಕ್ಷ ರೈತರು ತಂತ್ರಾಂಶದಲ್ಲಿ ನೋಂದಾಯಿಸಿದ್ದಾರೆ. ಈ ಮುಂಗಾರು ಸಾಲಿನಲ್ಲಿ ಜಿಲ್ಲೆಯ ರೈತರು ಸರ್ಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು ಪಿಕೆಪಿಎಸ್‌ಗಳಲ್ಲಿ ಬೆಳೆ ವಿಮೆ ನೊಂದಣಿ ಮಾಡಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ನಮ್ಮ ಬ್ಯಾಂಕ್‌ ಮೂಲಕ ಬೆಳೆ ವಿಮೆ ರೈತರ ಪಾಲಿನ 64.53 ಕೋಟಿ ರು.ಗಳಷ್ಟುಪ್ರೀಮಿಯಂ ಮೊತ್ತವನ್ನು ವಿಮಾ ಕಂಪನಿಗೆ ಪಾವತಿಸಿದ್ದು, ಆಯಾ ವರ್ಷದ ಬೆಳೆ ನಷ್ಟದ ಸಂಬಂಧ ರೈತರ ಖಾತೆಗಳಿಗೆ 376.02 ಕೋಟಿ ರು.ಗಳಷ್ಟುವಿಮೆ ಮೊತ್ತ ನೇರವಾಗಿ ಪಾವತಿಯಾಗಿದೆ. ಈ ಸಾಧನೆಗೆ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಮಾರ್ಗ ದರ್ಶನ, ಕೃಷಿ ಇಲಾಖೆಯ ಸಹಯೋಗ ಕಾರಣ. ನೋಂದಣಿ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ ಡಿಸಿಸಿ ಬ್ಯಾಂಕ್‌ ಸಿಬ್ಬಂದಿ, ಅಧಿಕಾರಿಗಳು ಹಾಗೂ ಜಿಲ್ಲೆಯ ಪಿಕೆಪಿಎಸ್‌ಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮಕ್ಕೆ ಸೂರ್ಯಕಾಂತ್‌ ನಾಗಮಾರಪಳ್ಳಿ ಕೃತಜ್ಞತೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios