Asianet Suvarna News Asianet Suvarna News

ಕೃಷಿ ಸಾಲಕ್ಕೆ ಕೇಂದ್ರದಿಂದ ಬಂಪರ್‌: ಹೆಚ್ಚುವರಿ ಶೇ.1.5 ಬಡ್ಡಿ ಸಬ್ಸಿಡಿ

3 ಲಕ್ಷ ರೂವರೆಗಿನ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ಶೇ.1.5ರಷ್ಟುಬಡ್ಡಿ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ರೈತರಿಗೆ ಶೇ.4ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲು ಬ್ಯಾಂಕುಗಳಿಗೆ ಅನುಕೂಲವಾಗಲಿದೆ. 

central govt give extra 1.5 rate subsidy for agriculture loan akb
Author
Bangalore, First Published Aug 18, 2022, 9:32 AM IST

ನವದೆಹಲಿ: 3 ಲಕ್ಷ ರು.ವರೆಗಿನ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಹಣಕಾಸು ಸಂಸ್ಥೆಗಳಿಗೆ ಹೆಚ್ಚುವರಿ ಶೇ.1.5ರಷ್ಟು ಬಡ್ಡಿ ಸಬ್ಸಿಡಿ ವಿತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಕೃಷಿ ವಲಯಕ್ಕೆ ಸಾಲದ ಸರಾಗ ಹರಿವಿಗೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಗೂ ಹೆಚ್ಚುವರಿಯಾಗಿ ಶೇ.1.5ರಷ್ಟುಬಡ್ಡಿ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ.

ಈ ಯೋಜನೆ ಅನ್ವಯ 3 ಲಕ್ಷ ರು.ವರೆಗೆ ಅಲ್ಪಾವಧಿ ಕೃಷಿ ಸಾಲ ಪಡೆಯುವ ರೈತರು ಶೇ.7ರಷ್ಟುಬಡ್ಡಿ ಪಾವತಿಸಬೇಕಾಗುತ್ತದೆ. ಆದರೆ ಕಾಲಮಿತಿಯಲ್ಲಿ ಹಣ ಪಾವತಿಸಿದರೆ ಶೇ.3ರಷ್ಟುಬಡ್ಡಿ ರಿಯಾಯಿತಿ ಸಿಗುತ್ತದೆ. ಅಂದರೆ ರೈತರಿಗೆ ಶೇ.4ರ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಕೃಷಿ ಸಾಲಕ್ಕೆ ಕೇಂದ್ರದಿಂದ ಬಂಪರ್‌: ಹೆಚ್ಚುವರಿ ಶೇ.1.5 ಬಡ್ಡಿ ಸಬ್ಸಿಡಿ

ಆದರೆ ಇತ್ತೀಚಿನ ದಿನಗಳಲ್ಲಿ ಬಡ್ಡಿದರ ಹೆಚ್ಚಾದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಗಳಿಗೆ ಶೆ.1.5ರಷ್ಟುಬಡ್ಡಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಸಬ್ಸಿಡಿಯು, ಸರ್ಕಾರಿ, ಖಾಸಗಿ, ಸಣ್ಣ ಹಣಕಾಸು ಬ್ಯಾಂಕ್‌ಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು ಮತ್ತು ಕಂಪ್ಯೂಟರೀಕೃತ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೂ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಯೋಜನೆ ಜಾರಿಗೆ 2022-23 ರಿಂದ 2024-25 ಅವಧಿಗೆ ಹೆಚ್ಚುವರಿ 34856 ಕೋಟಿ ರು. ಬಜೆಟ್‌ ಅನುದಾಗ ಬೇಕಾಗಲಿದೆ ಎಂದು ಸರ್ಕಾರ ಹೇಳಿದೆ.

10 ವರ್ಷ ಬಡ್ಡಿ ರಿಯಾಯ್ತಿ ಪಡೆದ ರೈತರಿಗೆ ಸಬ್ಸಿಡಿ ಕೃಷಿ ಸಾಲ ಇಲ್ಲ

Follow Us:
Download App:
  • android
  • ios