*  ಸಿದ್ದರಾಮಯ್ಯನವರ ಸರಣಿ ಟ್ವೀಟ್‌ಗೆ ಉತ್ತರ ನೀಡಬೇಕಾಗಿಲ್ಲ*  ಆಧಾರವಿಲ್ಲದ ಟ್ವೀಟ್‌ಗೆ ಉತ್ತರಿಸಬೇಕಾದ ಅಗತ್ಯವಿಲ್ಲ *  ಕಾಂಗ್ರೆಸಿಗರು ದೆಹಲಿ ಮತ್ತು ಇತರೆಡೆ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ

ಸೋಮವಾರಪೇಟೆ(ಜೂ.15): ಕಾಂಗ್ರೆಸ್‌ ಪಕ್ಷವು ಭ್ರಷ್ಟಾಚಾರವನ್ನು ಪ್ರಜಾಪ್ರಭುತ್ವದ ಅಂಗವೆಂದು ಭಾವಿಸಿದಂತಿದೆ. ಹೀಗಾದಲ್ಲಿ ಇದು ಪ್ರಜಾಪ್ರಭುತ್ವದ ಘನತೆಗೆ ಕಪ್ಪುಚುಕ್ಕೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಮಂಗಳವಾರ ಇಲ್ಲಿನ ಒಕ್ಕಲಿಗರ ಸಮಾಜದ ಸುವರ್ಣ ಮುಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಇ.ಡಿ.ವಿಚಾರಣೆಗೆ ಸಂಬಂಧಿಸಿದಂತೆ ಬಿಜೆಪಿ ದುರುಪಯೋಗ ಮಾಡಿಕೊಂಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗುಜರಾತ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರನ್ನು ಎಸ್‌ಐಟಿ ನಾಲ್ಕಾರು ಬಾರಿ ಕರೆಸಿ ಬೆಳಗ್ಗೆಯಿಂದ ಸಂಜೆಯವರೆಗೂ ವಿಚಾರಣೆ ಮಾಡಿದ್ದಾರೆ. ಅಮಿತ್‌ ಶಾ ಅವರನ್ನು ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಸಲು ತಂತ್ರವನ್ನು ಮಾಡಿದ್ದರು. ಜಾರಿ ನಿರ್ದೇಶನಾಲಯ ನೋಟಿಸ್‌ ನೀಡಿದ ಮಾತ್ರಕ್ಕೆ ಕಾಂಗ್ರೆಸಿಗರು ದೆಹಲಿ ಮತ್ತು ಇತರೆಡೆ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದರು.

ತಾಪಂ, ಜಿಪಂ ಚುನಾವಣೆ ಎದುರಿಸಲು ಸಜ್ಜಾಗಿ: ಸಚಿವ ಸುಧಾಕರ್‌

1942ರ ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭ ಆರ್‌ಎಸ್‌ಎಸ್‌ ಒಳಗೊಳಗೆ ಬ್ರಿಟಿಷರಿಗೆ ಬೆಂಬಲ ನೀಡಿದ್ದಾರೆಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿರುವ ಪ್ರಶ್ನೆಗೆ ಉತ್ತರಿಸಿದ ಸಂಸದ ಪ್ರತಾಪ್‌ ಸಿಂಹ, ಸಿದ್ದರಾಮಯ್ಯನವರ ಸರಣಿ ಟ್ವೀಟ್‌ಗೆ ಉತ್ತರ ನೀಡಬೇಕಾಗಿಲ್ಲ. ಅವರ ಆಧಾರವಿಲ್ಲದ ಟ್ವೀಟ್‌ಗೆ ಉತ್ತರಿಸಬೇಕಾದ ಅಗತ್ಯವಿಲ್ಲ ಎಂದರು.