Asianet Suvarna News Asianet Suvarna News

ನನ್ನನ್ನೇಕೆ ಸೋಲಿಸಬೇಕು? ಕಾರಣ ಕೊಡಿ: ಸಿದ್ದುಗೆ ಪ್ರತಾಪ್‌ ಸವಾಲು

ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತ ಕೈ ಮುಗಿದು ಮುಖ್ಯ​ಮಂತ್ರಿ ಕೇಳಿದರೆ ಜನ ಒಪ್ಪುತ್ತಾರಾ? ಸಿದ್ದರಾಮಯ್ಯರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆ​ಯ​ಬಾ​ರ​ದು. ಅವರು, ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಿ​ರ​ಬೇ​ಕು ಅಷ್ಟೆ ಎಂದು ಕಿಡಿಕಾರಿದ ಪ್ರತಾಪ್‌ ಸಿಂಹ. 

Mysuru Kodagu BJP MP Pratap Simha Challenge to CM Siddaramaiah grg
Author
First Published Sep 3, 2023, 12:52 PM IST

ಮೈಸೂರು(ಸೆ.03):  ‘ನನ್ನನ್ನು ಜನ ಯಾಕೆ ಸೋಲಿಸಬೇಕು ಅಂತ ಮುಖ್ಯ​ಮಂತ್ರಿ ಐದತ್ತು ಕಾರಣಗಳನ್ನು ಕೊಡಲಿ. ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್‌ ಸಿಂಹನನ್ನು ಸೋಲಿಸಬೇಕು ಹೇಳಿ?’ ಎಂದು ಮುಖ್ಯ​ಮಂತ್ರಿ​ಗೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸವಾಲು ಹಾಕಿದ್ದಾರೆ.

ಪ್ರತಾಪ್‌ ಸಿಂಹನನ್ನು ಈ ಬಾರಿ ಸೋಲಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಸಂಸದ, ರಾಷ್ಟ್ರೀಯ ಹೆದ್ದಾರಿ ಮಾಡಿ​ಸಿದ್ದು ನನ್ನ ತಪ್ಪಾ? ಗ್ರೇಟರ್‌ ಮೈಸೂರು ಮಾಡಲು ಹೊರಟ್ಟಿದ್ದು, ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟ್ಟಿದ್ದು ತಪ್ಪಾ? ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್‌ ಸಿಂಹನನ್ನು ಸೋಲಿಸಬೇಕು ಹೇಳಿ ಎಂದು ತಿರು​ಗೇಟು ನೀಡಿ​ದ​ರು.

ಯುವನಿಧಿ ಯೋಜನೆ ಯಾವಾಗ ಜಾರಿಯಾಗುತ್ತೆ ಗೊತ್ತಾ?: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮುಖ್ಯ​ಮಂತ್ರಿ ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಅಂತ ಹೇಳಿದ್ದಾರೆಂಬುದು ನೋಡಿದೆ. ಮೈಸೂರಿನ ಕುವೆಂಪುನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಮುಖ್ಯ​ಮಂತ್ರಿ ಈ ರೀತಿ ಹೇಳಲು ಆಗಲ್ಲ. ಉದಯಗಿರಿಯಲ್ಲಿ ತಮ್ಮ ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಸಿದ್ದ​ರಾ​ಮ​ಯ್ಯ ಕರೆ ಕೊಟ್ಟಿದ್ದಾರೆ. ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಸಿದ್ದರಾಮಯ್ಯ ಇರೋದು ಎಂಬುದು ನನಗೆ ಗೊತ್ತು. ತಮ್ಮ ಬಾಂಧವರ ಮುಂದೆ ಕೈಮುಗಿದು ನನ್ನ ಸೋಲಿಸಿ ಅಂತ ಕೇಳುವ ದೈನಾಸಿ ಸ್ಥಿತಿ ಮುಖ್ಯ​ಮಂತ್ರಿಗೆ ಬರಬಾರದಿತ್ತು ಎಂದು ವ್ಯಂಗ್ಯವಾಡಿದರು.

ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಭರವಸೆ ನೀಡಲ್ಲ: ರಾಹುಲ್ ಗಾಂಧಿ

ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತ ಕೈ ಮುಗಿದು ಮುಖ್ಯ​ಮಂತ್ರಿ ಕೇಳಿದರೆ ಜನ ಒಪ್ಪುತ್ತಾರಾ? ಸಿದ್ದರಾಮಯ್ಯರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆ​ಯ​ಬಾ​ರ​ದು. ಅವರು, ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಿ​ರ​ಬೇ​ಕು ಅಷ್ಟೆ ಎಂದು ಕಿಡಿಕಾರಿದರು.

ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು, ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಯಾಯಿತು. ಇದಕ್ಕೆ ಯಾರು ಕಾರಣ ಎಂದು ಅವರು ಪ್ರಶ್ನಿಸಿದರು.

Follow Us:
Download App:
  • android
  • ios