ಮೈಸೂರು ಮೇಯರ್‌ಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್, ಮೇಯರ್ ಸ್ಥಾನಕ್ಕೂ ಕಂಟಕ

* ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು
* ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈಕೋರ್ಟ್​ ಆದೇಶ
* ಈ ಮೂಲಕ  ಜಿಲ್ಲಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದ ಹೈಕೋರ್ಟ್

Mysuru City Corporation mayor rukmini-madhegowda membership-canceled By High Court rbj

ಮೈಸೂರು, (ಮೇ.26): ಚುನಾವಣೆ ವೇಳೆ ಸೂಕ್ತ ಆದಾಯ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆಯ 36 ನೇ ವಾರ್ಡ್ ಸದಸ್ಯೆ ಹಾಗೂ ಹಾಲಿ ಮೇಯರ್‌ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಮೈಸೂರು ಮಹಾನಗರ ಪಾಲಿಕೆಯ  ಮೇಯರ್ ಆಗಿರುವ ರುಕ್ಮಿಣಿ ಮಾದೇಗೌಡ ಅವರ ಮಹಾನಗರ ಪಾಲಿಕೆ ಸದಸ್ಯತ್ವ ರದ್ದು ಮಾಡಿ ಹೈಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಹೈ ಕೋರ್ಟ್​ ಜಿಲ್ಲಾ ನ್ಯಾಯಾಲಯದ ಆದೇಶವನ್ನೇ ಎತ್ತಿ ಹಿಡಿದಿದೆ.

ಮೊದಲ ದಿನವೇ ಮೈಸೂರು ಮೇಯರ್‌ಗೆ ಸಂಕಷ್ಟ : ಕಳೆದುಕೊಳ್ತಾರಾ ಪಟ್ಟ..?

ಇನ್ನು ರುಕ್ಮಿಣಿ ಮಾದೇಗೌಡ ವಿರುದ್ಧ ಸೋಲು ಕಂಡಿರುವ ರಜನಿ ಅಣ್ಣಯ್ಯಗೆ ಗೆಲುವು ಎಂದು ಕನ್ಸಿಡರ್‌ ಮಾಡಲು ಸಾಧ್ಯವಿಲ್ಲ, ನೇರವಾಗಿ ಮತ್ತೆ ಚುನಾವಣೆ ಹೋಗಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ.

ಪಾಲಿಕೆ ಸದಸ್ಯತ್ವ ರದ್ದಾಗಿರುವುದರಿಂದ ಮೇಯರ್ ಸ್ಥಾನಕ್ಕೂ ಕಂಟಕ ಎದುರಾಗಿದ್ದು, ಹೈ ಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವವರೆಗೂ ಅವರಿಗೆ ಮೇಯರ್​ ಅಧಿಕಾರವಿರುವುದಿಲ್ಲ.

Latest Videos
Follow Us:
Download App:
  • android
  • ios