'ತಯಾರಿ ಆರಂಭಿಸೋಣ..ದೇಶಕ್ಕಾಗಿ.. ಮೋದಿಗಾಗಿ..' ಟಿಕೆಟ್ ಮಿಸ್ ಆದ ಬೆನ್ನಲ್ಲೇ ಪ್ರತಾಪ್ ಸಿಂಹ ಪೋಸ್ಟ್
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿಸಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ಯದವೀರ್ ಒಡೆಯರ್ ಗೆಲುವಿಗಾಗಿ ಫೇಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರು (ಮಾ.13): ಲೋಕಸಭೆ ಚುನಾವಣೆಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪಿಸಿಕೊಂಡಿರುವ ಪ್ರತಾಪ್ ಸಿಂಹ, ಯದುವೀರ್ ಒಡೆಯರ್ ಅವರ ಗೆಲುವಿಗಾಗಿ ಶ್ರಮ ಹಾಕುವುದಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಿಂದ ಟಿಕೆಟ್ ಪಡೆದುಕೊಂಡ ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಅವರ ಚಿತ್ರದೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರತಾಪ್ ಸಿಂಹ, ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಅಭಿನಂದನೆಗಳು. ಕೂಡಲೇ ತಯಾರಿ ಆರಂಭಿಸೋಣ. ಪ್ರಚಾರಕ್ಕೆ ಇಳಿಯೋಣ, ದೇಶಕ್ಕಾಗಿ.. ಮೋದಿಗಾಗಿ..' ಎಂದು ಪೋಸ್ಟ್ ಮಾಡಿದ್ದಾರೆ. 2ನೇ ಪಟ್ಟಿಯನ್ನು ಬಿಜೆಪಿ ಬುಧವಾರ ರಿಲೀಸ್ ಮಾಡಿದ್ದು, 72 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಲ್ಲಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ಇನ್ನೂ 8 ಕ್ಷೇತ್ರಗಳಿಗೆ ಹೆಸರು ಬಾಕಿ ಉಳಿದುಕೊಂಡಿದೆ. ಪ್ರಮುಖವಾಗಿ ಉತ್ತರ ಕನ್ನಡ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.
ಇನ್ನು ಪ್ರತಾಪ್ ಸಿಂಹ ಅವರ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ಪ್ರತಾಪ್ ಸಿಂಹ ಸರ್, ನಿಮಗೆ ವೋಟ್ ಮಾಡುವ ಸಲುವಾಗಿಯೇ ಬೆಂಗಳೂರಿನಿಂದ ಬಂದಿದ್ದು ನೆನಪಾಗುತ್ತಿದೆ. ನೀವೇನೋ ಬಹಳ ಸುಲಭವಾಗಿ ಹೇಳುತ್ತಿದ್ದೀರ. ಆದ್ರೆ ನಮಗೆ ಕಷ್ಟ ಆಗುತ್ತಿದೆ. ಮೈಸೂರು ನೀವು ಇಲ್ಲದೆ. ಯಾಕೋ ಇದು ಸರಿ ಕಾಣುತ್ತಿಲ್ಲ ಕೆಲಸ ಮಾಡೋರು ಬೇಕು ಸರ್ ಒಡೆಯರ್ ಅವರು ಮಾಡೋಲ್ಲ ಅಂತ ಅಲ್ಲ ಆದ್ರೆ ನೀವು ಸುಲಭವಾಗಿ ಸಿಗುತ್ತಿದ್ರಿ ಅಷ್ಟೇ' ಎಂದು ನಂದಕಿಶೋರ್ ಎನ್ನುವವರು ಬರೆದುಕೊಂಡಿದ್ದಾರೆ. ನಿಮ್ಮನ್ನು ಇಷ್ಟಪಡುತ್ತೇವೆ. ನಿಮ್ಮ ಅಗತ್ಯ ನಮಗಿದೆ. ಬಹುಶಃ ನಾನು ಬಿಜೆಪಿಗೆ ವೋಟ್ ಮಾಡೋದಿಲ್ಲ ಅನ್ಸುತ್ತೆ ಎಂದು ಬರೆದಿದ್ದಾರೆ.
ಕ್ಷಮಿಸಿ ಸರ್ ಈ ಬಾರಿ ನಾವು ನೋಟಾ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಇನ್ನೊಬ್ಬರು ಬರೆದಿದ್ದಾರೆ. 'ಕರ್ನಾಟಕ ದ ಮುಂದಿನ ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ನಿಮಗಿದೆ. ಎಲ್ಲಿಯೂ ಕುಗ್ಗದೆ ದೈರ್ಯವಾಗಿ ಎಲ್ಲವನ್ನು ಎದುರಿಸಿ ಮುನ್ನುಗ್ಗಿ. ನಿಮ್ಮ ಜೊತೆ ಸಾವಿರಾರು ನರೇಂದ್ರ ಮೋದಿ ಅಭಿಮಾನಿಗಳು ನಿಮ್ಮ ಜೊತೆ ಇದ್ದಾರೆ'' ಎಂದು ಬರೆದಿದ್ದಾರೆ.
ಇನ್ನೂ ಕೆಲವರು ಮುಂದಿನ ಚುನಾವಣೆಯಲ್ಲಿ ನೀವು ಪಕ್ಷೇತರರಾಗಿ ಸ್ಪರ್ಧೆ ಮಾಡಿ ಎಂದುಸ ಪ್ರತಾಪ್ ಸಿಂಹಗೆ ಸಲಹೆ ನೀಡಿದ್ದಾರೆ. ದೇಶಕ್ಕಾಗಿ.. ಮೋದಿಗಾಗಿ ಇದನ್ನು ಸಹಿಸಿಕೊಳ್ಳುತ್ತೇವೆ ಎಂದು ಒಬ್ಬರು ಬರೆದಿದ್ದಾರೆ. 'ಪ್ರತಾಪ್ ಸಿಂಹ ಅವರು ಇಂದು ಟಿಕೆಟ್ ವಂಚಿತ ರಾಗಿ ರಾಜವಂಶ ದವರಿಗೆ ಬಿಟ್ಟುಕೊಟ್ಟು ಯಾವುದೇ ವಿವಾದ ಸೃಷ್ಟಿಸದೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಅವರ ಇಂದಿನ ಜಾಣ್ಮೆಯ ನಡೆ ಮುಂದಿನ ದಿನ ಅವರ ಅತ್ಯದ್ಭುತ ವಾದ ಒಂದು ಸ್ಥಾನ ಅವರು ಪಡೆಯಲಿದ್ದಾರೆ ರಾಜ್ಯ ಬಿಜೆಪಿ ಆಲ್ಲಿ ಅವರು ಮುಖ್ಯಮಂತ್ರಿ ಸ್ಥಾನ ತುಂಬಾ ಬಲ್ಲರು' ಎಂದು ಮತ್ತೊಬ್ಬರು ಬರೆದಿದ್ದಾರೆ.
Breaking:ಬಿಜೆಪಿ 2ನೇ ಪಟ್ಟಿ ಪ್ರಕಟ, ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್, ಬೊಮ್ಮಾಯಿಗೆ ಹಾವೇರಿ ಟಿಕೆಟ್
'ಕರ್ನಾಟಕದ ಬಿಜೆಪಿ ಪಕ್ಷದಲ್ಲಿ ಕರ್ನಾಟಕದ ಯಾವುದೇ ಲೋಕಸಭಾ ಕ್ಷೇತ್ರದಲ್ಲೂ ನಿಂತರು ಗೆಲ್ಲುವಂತಹ ಏಕೈಕ ವ್ಯಕ್ತಿ ಪ್ರತಾಪ್ ಸಿಂಹ ಅಣ್ಣ' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.' #prathapsimha ಕೇವಲ ನನ್ನಿಂದಲೇ ಕೆಲಸ ಆಗಬೇಕು... ನನ್ನನ್ನು ಬಿಟ್ಟು ಬೇರೆಯವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಅಹಂ.. ಅದರಿಂದ ಹೊರಗೆ ಬನ್ನಿ... ರಾಜಕೀಯ ಹೊರತು ಪಡಿಸಿ ದೇಶದ ಅಭಿವೃದ್ಧಿ ಮಾಡುವ ವಿಧಾನಗಳ ಬಗ್ಗೆ ಸಕಾರಾತ್ಮಕವಾಗಿ ಆಲೋಚಿಸಿ...' ಎಂದು ಪ್ರತಾಪ್ ಸಿಂಹಗೆ ಸಲಗೆ ನೀಡಿದ್ದಾರೆ.
News Hour:ಕರ್ನಾಟಕದ 19 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಫೈನಲ್!