Asianet Suvarna News Asianet Suvarna News

ಬಿಜೆಪಿಯಲ್ಲಿ ಗಾಡ್‌ ಫಾದರ್ ಸಂಸ್ಕೃತಿ ತಡೆಯಲು ನನ್ನ ಸ್ಪರ್ಧೆ: ರಘುಪತಿ ಭಟ್

ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ನೀಡುವಾಗ ಹಿಂದೆಲ್ಲ ಬೂತ್ ಮಟ್ಟದಲ್ಲಿ ಸ್ಥಾನಿಕ ಮಟ್ಟದಲ್ಲಿ ಮತ್ತು ಮಂಡಲ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಶಿಫಾರಸು ಮಾಡಲಾಗುತ್ತಿತ್ತು. ಜಿಲ್ಲಾಮಟ್ಟದಲ್ಲಿ ಪರಿಶೀಲನೆ ಮಾಡಲಾಗುತ್ತು. ಅಗತ್ಯ ಸಂದರ್ಭದಲ್ಲಿ ಸಂಘ ಪರಿವಾರದ ನಾಯಕರು ಸಲಹೆ ನೀಡುತ್ತಿದ್ದರು. 

My contest to stop godfather culture in BJP Says Raghupathi Bhat gvd
Author
First Published Jun 1, 2024, 10:51 PM IST

ಪುತ್ತೂರು (ಜೂ.01): ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ನೀಡುವಾಗ ಹಿಂದೆಲ್ಲ ಬೂತ್ ಮಟ್ಟದಲ್ಲಿ ಸ್ಥಾನಿಕ ಮಟ್ಟದಲ್ಲಿ ಮತ್ತು ಮಂಡಲ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಶಿಫಾರಸು ಮಾಡಲಾಗುತ್ತಿತ್ತು. ಜಿಲ್ಲಾಮಟ್ಟದಲ್ಲಿ ಪರಿಶೀಲನೆ ಮಾಡಲಾಗುತ್ತು. ಅಗತ್ಯ ಸಂದರ್ಭದಲ್ಲಿ ಸಂಘ ಪರಿವಾರದ ನಾಯಕರು ಸಲಹೆ ನೀಡುತ್ತಿದ್ದರು. ಇದೀಗ ಅದೆಲ್ಲ ನಿಂತು ಹೋಗಿದ್ದು, ಬಕೆಟ್ ಸಂಸ್ಕೃತಿ ಮತ್ತು ಗಾಡ್‌ಫಾದರ್ ಸಂಸ್ಕೃತಿಯಿಂದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಉಡುಪಿಯ ಮಾಜಿ ಶಾಸಕ, ವಿಧಾನಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದರು.

ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಹಿಂದಿನ ಪದ್ಧತಿ ಉಳಿದಿಲ್ಲ. ಬಿಜೆಪಿಯಲ್ಲಿ ದುಡಿದ ಕಾರ್ಯಕರ್ತರಿಗೆ ಅವಕಾಶವಿಲ್ಲ. ನನಗೆ ಮೋಸ ಆಗಿದೆ ಎನ್ನುವುದಕ್ಕಿಂತಲೂ ಇಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತಿದ್ದಲ್ಲಿ ನಾನು ಸ್ಪರ್ಧೆ ಮಾಡುತ್ತಿರಲಿಲ್ಲ. ನನ್ನ ಚುನಾವಣಾ ರಾಜಕೀಯವನ್ನು ಈ ಚುನಾವಣೆ ನಿರ್ಧರಿಸಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜಾರಾಂ ಭಟ್, ನವೀನ್ ಕುಲಾಲ್, ನವೀನಚಂದ್ರ ಕೆ., ಸಂತೋಷ್ ರಾವ್, ಸುವರ್ಧನ್ ನಾಯಕ್ ಇದ್ದರು.

ಚಂದ್ರಶೇಖರನ್‌ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ, ಪ್ರಕರಣ ಸಿಬಿಐಗೆ ಒಪ್ಪಿಸಿ: ಕೆ.ಎಸ್.ಈಶ್ವರಪ್ಪ

ಮಲೆನಾಡಿನ ಮತದಾರರ ಬೆಂಬಲವೂ ಸಿಕ್ಕಿದೆ: ಶೇ 51 ಕ್ಕಿಂತ ಹೆಚ್ಚು ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲುತ್ತೇನೆ ಎಂದು ವಿಧಾನ ಪರಿಷತ್ ಬಂಡಾಯ ಅಭ್ಯರ್ಥಿ ಕೆ. ರಘುಪತಿ ಭಟ್ ಪೂರ್ಣ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ನಾನು ಈಗ ಚುನಾವಣೆಗೆ ಸ್ಪರ್ಧಿಸದಿದ್ದರೆ ಮುಂದೆ ಚುನಾಯಿತ ಜನಪ್ರತಿನಿಧಿ ಆಗುವ ಅವಕಾಶ ಇಲ್ಲ, ಆದರೆ ನಾನು ಅಧಿಕಾರಕ್ಕಾಗಿ ಸ್ಪರ್ಧಿಸುತ್ತಿಲ್ಲ, ಜನರ ಕೆಲಸ ಮಾಡುವ ಹುಮ್ಮಸ್ಸು ಇದೆ, ವಯಸ್ಸು ಇದೆ. ಆದ್ದರಿಂದ ಸ್ಪರ್ಧಿಸುವ ಅವಕಾಶ ಕೇಳಿದೆ. ಕೊಟ್ಟಿಲ್ಲ, ಅದಕ್ಕೆ ನಾನು ಸ್ಪರ್ಧಿಸಬೇಕಾಯಿತು ಎಂದು ಹೇಳಿದರು.

ವಿಧಾನ ಪರಿಷತ್ ಅವಕಾಶ ವಂಚಿತರಿಗೆ ಸ್ಪರ್ಧಿಸುವುದಕ್ಕೇ ಇರುವ ಚುನಾವಣೆ, ವಿಧಾನ ಸಭೆಯಲ್ಲಿ ನನಗೆ ಹೇಳದೇ ಕೇಳದೇ ಅವಕಾಶ ವಂಚಿಸಿದ್ದಾರೆ. ಪರಿಷತ್ ಗೆ ಟಿಕೇಟ್ ನೀಡುತ್ತೇನೆ ಎಂದು ಹೇಳಿ ಈಗ ನೀಡಲಿಲ್ಲ, ಪಕ್ಷಕ್ಕಾಗಿ ದುಡಿದಿದ್ದೇನೆ, ಗೆದ್ದು ಮತ್ತೆ ಬಿಜೆಪಿಯ ಶಾಸಕನಾಗಿ ದುಡಿಯುತ್ತೇನೆ ಎಂದವರು ಹೇಳಿದರು. ಅಧಿಕಾರ ಇಲ್ಲದೇ ಇರಲಿಕ್ಕಾಗುವುದಿಲ್ಲವೇ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಭಟ್, ಈ ಪ್ರಶ್ನೆಯನ್ನು ಸಿಎಂ ಆಗಿರುವವರು ತಮ್ಮ ಮಕ್ಕಳನ್ನು ಎಂಪಿ, ಎಂಎಲ್ಎ, ರಾಜ್ಯಾಧ್ಯಕ್ಷರನ್ನಾಗಿ ಮಾಡಿದವರು, ಏಳೇಳು ಅವಧಿಗೆ ಶಾಸಕರಾಗಿದ್ದರೂ ಮತ್ತೆ ಟಿಕೆಟ್ ತಗೊಂಡು ಸೋಲುವವರು, 75 ವರ್ಷ ಆದರೂ ಟಿಕೇಟ್ ಬೇಕು ಎಂದು ಕೇಳುವವರನ್ನು ಕೇಳಲಿ ಎಂದರು.

ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ: ಮಾಜಿ ಸಿಎಂ ಬೊಮ್ಮಾಯಿ

ನಾನು ಆರಂಭದಲ್ಲಿ ಉಡುಪಿ ಮತ್ತು ಮಂಗಳೂರಿನ ಮತದಾರರ ಮತಗಳ ಬಗ್ಗೆ ಭರವಸೆ ಇತ್ತು, ಉಳಿದ ಜಿಲ್ಲೆಯ ದ್ವಿತೀಯ ಪ್ರಾಶಸ್ತ್ಯದ ಮತಗಳು ಸಿಕ್ಕಿದರೇ ನಾನು ಗೆಲ್ಲುತ್ತೇನೆ ಎಂಬ ಯೋಚನೆ ಇತ್ತು. ಆದರೆ ಈಗ ಮಲೆನಾಡಿನ ಮತದಾರರೂ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಭರವಸೆ ಬಂದಿದೆ. ಸಾಕಷ್ಟು ಮಂದಿ ಬಿಜೆಪಿ ಮತದಾರರು ಬಹಿರಂಗವಾಗಿ ಬೆಂಬಲಿಸಿದ್ದಾರೆ, ಬಹುಸಂಖ್ಯೆಯಲ್ಲಿ ಒಳಗಿನಿಂದಲೇ ಬೆಂಬಲ ನೀಡುತ್ತಿದ್ದಾರೆ ಎಂದು ಭಟ್ ಹೇಳಿದರು.

Latest Videos
Follow Us:
Download App:
  • android
  • ios