Asianet Suvarna News Asianet Suvarna News

'ಹಾದಿಬೀದಿಯಲ್ಲಿ ಮಾತಾಡೋರಿಗೆ ಉತ್ತರ ನೀಡಲ್ಲ'

  • ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ
  • ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ತಿರುಗೇಟು 
  • ವೀರಶೈವ ಲಿಂಗಾಯತ ಸಮಾಜ ಪ್ರಜ್ಞಾವಂತ ಸಮಾಜ ಇದೆ
Murugesh Nirani slams basanagouda patil yatnal snr
Author
Bengaluru, First Published Jul 1, 2021, 7:21 AM IST

 ಬೆಂಗಳೂರು (ಜು.01):  ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ತಿರುಗೇಟು ನೀಡಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ಪ್ರಜ್ಞಾವಂತ ಸಮಾಜ ಇದೆ. ಪಂಚಮಸಾಲಿ ಹೋರಾಟವನ್ನು ಯಾರು ದುರ್ಬಳಕೆ ಮಾಡಿದ್ದಾರೆ ಎಂಬುದು ಚುನಾವಣೆಯಲ್ಲಿ ತೀರ್ಮಾನವಾಗಲಿದೆ. ಪಂಚಮಸಾಲಿ ಹೋರಾಟ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಹೋರಾಟದ ಬಗ್ಗೆ ನಾವು ಹೋರಾಟ ಮಾಡಬೇಕಾಗುತ್ತದೆ. ಕೇವಲ ಪಂಚಮಸಾಲಿ ಮಾತ್ರವಲ್ಲ, ಇಡೀ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ. ಇಡೀ ಸಮುದಾಯದಲ್ಲಿ ಸಣ್ಣ ಸಣ್ಣ ಜಾತಿಗಳಿವೆ. ಅವುಗಳೆಲ್ಲದರ ಬಗ್ಗೆಯೂ ಅ​ಧಿಕಾರದಲ್ಲಿ ಇರುವ ನಾವು ಗಮನ ಹರಿಸಬೇಕು ಎಂದರು.

'ಹೊರಗಡೆ ಬಿಎಸ್‌ವೈ ನಮ್ಮ ನಾಯಕ ಅಂತಾರೆ..ಒಳಗಡೆ ಹೋಗಿ ಸಿಎಂ ಬದಲಾಯಿಸಿ ಅಂತಾರೆ' ..

ಸರ್ಕಾರದಲ್ಲಿ ಇರುವವರು ಕೇವಲ ಒಂದು ಸಮುದಾಯದ ಪರವಾಗಿ ಮಾತ್ರ ಹೋರಾಟ ಮಾಡಿದರೆ ಸಾಕಾಗಲ್ಲ. ಮುಂದೆ ಅಗತ್ಯ ಬಿದ್ದರೆ ಪಂಚಮಸಾಲಿ ಹೋರಾಟಕ್ಕೆ ಜೊತೆಗೂಡುತ್ತೇನೆ. ಈಗ ಯಾರೋ ಮಾತನಾಡಿದರು ಎಂಬ ಕಾರಣಕ್ಕೆ ನಾನು ಉತ್ತರ ಕೊಡುವುದಕ್ಕೆ ಹೋಗಲ್ಲ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿರಾಣಿ, ಹೈಕಮಾಂಡ್‌ ಏನೇ ತೀರ್ಮಾನ ತೆಗೆದುಕೊಂಡರೂ, ಅದಕ್ಕೆ ನಾವು ಬದ್ಧ. ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರು ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios