Asianet Suvarna News Asianet Suvarna News

ಏಳೇಳು ಜನ್ಮದಲ್ಲೂ ಡಿಕೆಶಿಗೆ ನಾನು ಸರಿಸಾಟಿ ಆಗಲು ಸಾಧ್ಯವೇ ಇಲ್ಲ ಎಂದ ಬಿಜೆಪಿ ನಾಯಕ

ಡಿ.ಕೆ. ಶಿವಕುಮಾರ್‌ಗೆ ಬಿಜೆಪಿ ಅಭ್ಯರ್ಥಿ ‌ಮುನಿರತ್ನ ತಿರುಗೇಟು| ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಕ್ಷೇತ್ರಕ್ಕೆ ಅಗತ್ಯ ಎಂದು ಒತ್ತಿ ಹೇಳಿದ ಮುನಿರತ್ನ| ನಾವು ದೊಂಬಿ, ಗಲಭೆ ಮಾಡಿಸುವವರಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ನಿಂದ ನಮ್ಮ ವಿರುದ್ಧ ಪಿತೂರಿ‌| 

Munirathna Reacts on D K Shivakumar Statement grg
Author
Bengaluru, First Published Oct 23, 2020, 1:18 PM IST

ಬೆಂಗಳೂರು(ಅ.23): ಡಿ.ಕೆ.ಶಿವಕುಮಾರ್‌ ಹೇಳಿದ ಮಾತು ಸತ್ಯವಾಗಿದೆ. ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಇದೊಂದು ಜನ್ಮದಲ್ಲಿ ಮಾತ್ರ ಅಲ್ಲ, ಏಳೇಳು ಜನ್ಮದಲ್ಲೂ ಡಿಕೆಶಿ ಅವರಿಗೆ ನಾನು ಸರಿಸಾಟಿ ಆಗಲು ಸಾಧ್ಯವೇ ಇಲ್ಲ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಬಹಳ ಸಣ್ಣವನಾಗಿದ್ದೇನೆ. ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ, ನಾನು ಆ ಮಟ್ಟಕ್ಕೆ ತಲುಪಲು ಆಗೋದಿಲ್ಲ.  ದೇವರು ನನಗೆ ಏಳು ಜನ್ಮ ಕೊಟ್ಟರೂ ಅವರ ಸಮನಾಗಿ ಬರಲು ಸಾಧ್ಯವಿಲ್ಲ. ಡಿಕೆಶಿಗೂ ನನಗೂ ಹೋಲಿಕೆ ಮಾಡಿ ಮಾತನಾಡವುದೇ ತಪ್ಪು ಎಂದು ಹೇಳುವ ಮೂಲಕ ಡಿಕೆಶಿಗೆ ಮುನಿರತ್ನ ಟಾಂಗ್‌ ಕೊಟ್ಟಿದ್ದಾರೆ. 

ಯುದ್ಧದಲ್ಲಿ ಎದುರಾಳಿ ಸರಿಸಮ‌ ಇದ್ದರೆ ಹೋರಾಡಬಹುದು ಎಂಬ ಡಿಕೆಶಿ ಹೇಳಿಕೆಗೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರ್‌.ಆರ್‌. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು, ಪ್ಯಾರಾ ಮಿಲಿಟರಿ ಫೋರ್ಸ್ ಕರೆಸುವ ಬಗ್ಗೆ ಸಿಎಂ ಸಿಎಂ ಮತ್ತು ಗೃಹ ಸಚಿವರು ಮುಂದಿನ ನಿರ್ಧಾರವನ್ನ ತೆಗೆದುಕೊಳ್ಳುತ್ತಾರೆ. ಪ್ಯಾರಾ ಮಿಲಿಟರಿ ಫೋರ್ಸ್ ಬಂದ್ರೆ ಕ್ಷೇತ್ರದಲ್ಲಿ ಶಾಂತಿಯುತವಾದ ಮತದಾನ ನಡೆಯುತ್ತದೆ. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. 

RR ನಗರಕ್ಕೆ ಹೊರಗಿನಿಂದ 4 ಸಾವಿರ ಜನರನ್ನು ಕರೆಸಲಾಗಿದೆ, ಕೊಲೆಗಳಾಗುವ ಸಾಧ್ಯತೆ: ಮುನಿರತ್ನ

ಕ್ಷೇತ್ರದಲ್ಲಿ ಬಿಜೆಪಿಯು ಶಾಂತಿಯುತ ಚುನಾವಣೆ ಮಾಡಲು ಬಯಸಿದೆ. ನಾವು ಯಾರನ್ನೂ ಹೊರಗಿನಿಂದ ಕರೆಸಿಲ್ಲ, ಕ್ಷೇತ್ರದಲ್ಲಿ ಇರುವ ಯುವ ಕಾರ್ಯಕರ್ತರು ಎಲ್ಲೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ನಾವು ದೊಂಬಿ, ಗಲಭೆ ಮಾಡಿಸುವವರಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ನಿಂದ ನಮ್ಮ ವಿರುದ್ಧ ಪಿತೂರಿ‌ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.

ಮುನಿರತ್ನ ಕೊಲೆ ಬೆದರಿಕೆಯ ವಿಚಾರದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ಯಾರಾಮಿಲಿಟರಿ ಪಡೆ ಕರೆಸಿರುವುದು ನನಗೆ ಬಹಳ ಸಂತೋಷ ವಾಗಿದೆ. ಸರ್ಕಾರ, ಕ್ಯಾಂಡಿಡೇಟ್, ಜನರಿಗೂ ಮನವರಿಕೆಯಾಗಿದೆ. ಲಾ ಆಂಡ್ ಆರ್ಡರ್ ಪ್ರಾಬ್ಲಂ ಇಲ್ಲ ಅನ್ನೋದು ಗೊತ್ತಾಗುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿ ಏನು ಮಾಡುತ್ತೇವೆ ಅನ್ನೋದನ್ನ ತಿಳಿಸಿದ್ದಾರೆ. ಏನು ಮಾಡಬೇಕು, ಮಾಡಿಸಬೇಕು ಅದು ಅವರ ಬಾಯಿಂದ ಬಂದಿದೆ. ಆರ್.ಆರ್ ನಗರ ಉಪಚುನಾವಣೆಯಲ್ಲಿ ನಡೆಯುತ್ತಿರುವ ದುರ್ಬಳಕೆಗಳು ಆಯೋಗದ ಗಮನಕ್ಕೂ ಬಂದಿದೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios