Assembly electioin: ನಯನ ಮೋಟಮ್ಮ ವಿರುದ್ದ ಕಾಂಗ್ರೆಸ್‌ನಲ್ಲೇ ಬಿನ್ನಮತ ಸ್ಫೋಟ!

ಕಾಂಗ್ರೆಸ್ ಪಕ್ಷದಲ್ಲಿಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಇದರ ನಡುವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಡಿಕೆಶಿ ಅಪ್ತ ಬಣದಲ್ಲಿ ಗುರುತಿಸಿಕೊಂಡಿರುವ ನಯನ ಮೋಟಮ್ಮ ವಿರುದ್ದ ಭಿನ್ನಮತ ಸಭೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಮೂಡಿಗೆರೆ ಕಾಂಗ್ರೆಸ್ ನ ಬಣ ರಾಜಕೀಯ ಬೀದಿಗೆ ಬಿದ್ದಿದೆ.

Mudigere congress leaders meeting against nayana motamma at chikkamagaluru rav

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.13):  : ಕಾಂಗ್ರೆಸ್ ಪಕ್ಷದಲ್ಲಿಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಇದರ ನಡುವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಡಿಕೆಶಿ ಅಪ್ತ ಬಣದಲ್ಲಿ ಗುರುತಿಸಿಕೊಂಡಿರುವ ನಯನ ಮೋಟಮ್ಮ ವಿರುದ್ದ ಭಿನ್ನಮತ ಸಭೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಮೂಡಿಗೆರೆ ಕಾಂಗ್ರೆಸ್ ನ ಬಣ ರಾಜಕೀಯ ಬೀದಿಗೆ ಬಿದ್ದಿದೆ.

ನಯನ ಮೋಟಮ್ಮ ವಿರುದ್ದ ನಿಲ್ಲದ ಅಸಮಾಧಾನ : 

ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಟೋಟಗೊಂಡಿದೆ. ಟಿಕೆಟ್  ಘೋಷಣೆಗೂ ಮೊದಲೇ ಕೈ ಪಾರ್ಟಿಯಲ್ಲಿ ಭಿನ್ನಮತ ಸ್ಫೋಟಗೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು . ಕಾಂಗ್ರೆಸ್ ಪಾರ್ಟಿಯಲ್ಲಿ ಟಿಕೆಟ್ ಗಾಗಿ  ಫೈಟ್ ನಡೆಯುತ್ತಿದೆ. ಕ್ಷೇತ್ರದಲ್ಲಿ ಒಂದೆಡೆ ಟಿಕೆಟ್ ಗಾಗಿ ಲಾಭಿ ನಡೆಸುತ್ತಿರುವ ಆಕ್ಷಾಂಕಿಗಳು ಮತ್ತೊಂದೆಡೆ ಕೈ ಮುಖಂಡರ ಭಿನ್ನಮತದ ಸಭೆಯೂ ಜೋರಾಗಿ ನಡೆಯುತ್ತಿದೆ.  ಅದರಲ್ಲೂ ಮಾಜಿ ಸಚಿವೆ ಮೋಟಮ್ಮ ಹಾಗೂ ಪುತ್ರಿ ನಯನ ಮೋಟಮ್ಮ(Nayana motamma) ವಿರುದ್ಧ ಬಂಡಾಯದ ಸಭೆ ನಿರಂತರವಾಗಿ ನಡೆಯುತ್ತಿದ್ದು ಮೋಟಮ್ಮ ಕುಟುಂಬಕ್ಕೆ ಬಿಸಿತುಪ್ಪವಾಗಿ ಪರಿಣಾಮಿಸಿದೆ. 

ಅವಕಾಶಗಳ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟರು, ಆತ್ಮಕತೆಯಲ್ಲಿ ಸಿದ್ದುಗೆ ಶಾಕ್​ ಕೊಟ್ಟ ಮೋಟಮ್ಮ

ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಮೋಟಮ್ಮ ಕುಟುಂಬದ ವಿರುದ್ದ  ಐದು ಸಭೆಗಳನ್ನು ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ. ಟಿಕೆಟ್ ಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಏಳು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಮೋಟಮ್ಮ ಕೂಡ ಒಬ್ಬರು. ವಿಶೇಷವಾಗಿ ನಯನ ಮೋಟಮ್ಮ ಹೊರತುಪಡಿಸಿ ಉಳಿದ ಆಕ್ಷಾಂಕಿಗಳು ನಿರಂತರವಾಗಿ ನಡೆಯುತ್ತಿರುವ  ಬಂಡಾಯದ ಸಭೆಯಲ್ಲಿ ಭಾಗಿ ಆಗುತ್ತಿದ್ದಾರೆ. ಡಿಕೆ ಶಿವಕುಮಾರ್(DK Shivakumar) ಅಪ್ತಬಣದಲ್ಲಿ ಗುರುತಿಸಿಕೊಂಡಿರುವ ನಯನಮೋಟಮ್ಮ ವಿರುದ್ದ ಸ್ವಪಕ್ಷದಲ್ಲೇ ಎದುರಾಗಿರುವ ಭಿನ್ನಮತ ಜೋರಾಗಿದ್ದು ನಯನ ಮೋಟಮ್ಮಗೆ ಟಿಕೆಟ್ ನೀಡದಂತೆ ವರಿಷ್ಠರಿಗೆ ಮನವಿ ಸಲ್ಲಿಸಲು ಭಿನ್ನಮತ ಮುಖಂಡರು ನಿರ್ಧಾರ ಮಾಡಿದ್ದಾರೆ. 

ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ ವಿರುದ್ದ ಕಿಡಿಕಾರಿದ ಕಾರ್ಯಕರ್ತರು : 

ಮೂಡಿಗೆರೆ ಕಾಂಗ್ರೆಸ್ನಲ್ಲಿ ಭಿನ್ನಮತ ಮುಂದುವರಿದ ಭಾಗವಾಗಿ ನಿನ್ನೆಯೂ ತಾಲೂಕಿನ ಗೋಣಿಬೀಡು ಕನ್ವೆನ್ ಹಾಲ್ನಲ್ಲಿ(Gonibidu Convention Hall) ಭಿನ್ನಮತದ ಸಭೆ ನಡೆದಿದೆ. ಸಭೆಯಲ್ಲಿ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ಅವರ ವಿರುದ್ಧ ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು  ಅಭ್ಯರ್ಥಿ ಸಿಗುವವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಸಿಗುಬೇಕೆಂತಲೂ ಒತ್ತಾಯಿಸಿದ್ದಾರೆ. ನಯನ ಮೋಟಮ್ಮ ಅವರು ಚುನಾವಣೆ ವೇಳೆ ಮಾತ್ರ ಕಾಣಿಸುತ್ತಾರೆ, ಒಂದು ವೇಳೆ ಅವರಿಗೆ ಟಿಕೆಟ್ ಸಿಕ್ಕು, ಗೆಲುವು ಸಾಧಿಸಿದರೆ ಅವರನ್ನು ಮಾತನಾಡಿಸಲು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಹಾಗಾಗಿ ವಿಧಾನಸಭೆ ಚುನಾವಣೆ(Assembly election)ಯಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗೆ ಅವಕಾಶ ಸಿಗಬೇಕು ಎಂದು ಕೆಲ ಮುಖಂಡರು ಒತ್ತಾಯಿಸಿದ್ದಾರೆ. 

ಮೋಟಮ್ಮ ನವರ ಕುಟುಂಬ ರಾಜಕಾರಣ ಇಲ್ಲಿಗೆ ನಿಲ್ಲಬೇಕು. ಮುಂಬರುವ ಚುನಾವಣೆ ಯಲ್ಲಿ ನಯನ ಮೋಟಮ್ಮ ಹೊರತುಪಡಿಸಿ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಮಾತ್ರ ಗೆಲುವಿಗೆ ಶ್ರಮಿಸೋಣ ಎಂಬ ನಿರ್ಧಾರಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಬಂದಿದ್ದಾರೆಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ಗಮನಕ್ಕೆ ತರುವ ಪ್ರಯತ್ನದ ಬಗ್ಗೆ ಚರ್ಚೆ ನಡೆದಿದೆ.  ಅಲ್ಲದೆ ವಿಧಾನಪರಿಷತ್ ಚುನಾವಣೆಯಲ್ಲಿ ಗಾಯತ್ರಿ ಶಾಂತೇಗೌಡರ(Gayatri shantegowdar) ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯನ್ನು ಮೋಟಮ್ಮ  ನಡೆಸಿದ್ದಾರೆಂಬ ಗಂಭೀರವಾದ ಆರೋಪವನ್ನು ಮುಖಂಡ ಮಾಡಿದರು.

 ಇಡೀ ಕ್ಷೇತ್ರದ ಜನರು ಮೋಟಮ್ಮ ಕುಟುಂಬದ ವಿರುದ್ಧವಿದ್ದು ನಯನಾ ಮೋಟಮ್ಮ ಅವರು ಚುನಾವಣೆ ಅಭ್ಯರ್ಥಿ ಆಗೋದು ಬೇಡ ಎನ್ನುವ ಒತ್ತಾಯವನ್ನು ಸಭೆಯಲ್ಲಿ ಕೆಲ ಮುಖಂಡರು ಮಾಡಿದರು.  ಯಾವುದೇ ಕಾಲೋನಿ, ಊರಿಗೆ ಹೋದ್ರು ನಯನಾ ಮೋಟಮ್ಮ ಅವರಿಗೆ ಜನರು ಒಪ್ಪುತ್ತಿಲ್ಲ. ಸೋಲುವ ಅಭ್ಯರ್ಥಿ ಜತೆ ರಾಜೀ ಇಲ್ಲ. ಅವರಿಗೆ 20 ಬಾರಿ ಟಿಕೆಟ್ ಕೊಟ್ಟರೂ ಗೆಲ್ಲೋದಿಲ್ಲ. ದಯವಿಟ್ಟು ಅವರು ಜಾಗ ಖಾಲಿ ಮಾಡಬೇಕೆಂದು ಕೋರಿಕೊಂಡಿದ್ದಾರೆ. 

ಅಭಿಪ್ರಾಯ ಸಂಗ್ರಹಿಸಲು ಬಂದಿದ್ದ ಕೆಪಿಸಿಸಿ ವೀಕ್ಷಕರ ಎದುರೇ ಗಲಾಟೆ; ಬಡಿದಾಡುವ ಹಂತಕ್ಕೆ ಹೋಗಿದ್ದ ಕಾಂಗ್ರೆಸ್ ಕಾರ್ಯಕರ್ತರು

ರಾಜ್ಯ ವಿಧಾನಸಭಾ ಚುನಾವಣೆ ಇನ್ನು ಕೆಲ ತಿಂಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಆಗಿರುವುದು ಮೋಟಮ್ಮ ಅವರಿಗೆ ಹಿನ್ನಡೆಗೆ ಮುನ್ನುಡಿ ಬರೆದಂತಾಗಿದೆ. ಸಭೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕಾಂಗ್ರೆಸ್ ಮುಖಂಡರು, ಗ್ರಾ.ಪಂ ಸದಸ್ಯರು, ಟಿಕೆಟ್ ಆಕ್ಷಾಂಕಿಗಳು  ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios