Asianet Suvarna News Asianet Suvarna News

ಸಾವಿರಾರು ಕೋಟಿ ಸಾಲ ಮಾಡಿಟ್ಟಿದೆ ಬಿಜೆಪಿ ಸರ್ಕಾರ: ಶಾಸಕ ನಾಡಗೌಡ

ಈ ಹಿಂದಿನ ಬಿಜೆಪಿ ಸರ್ಕಾರ ಪ್ರಸ್ತುತ ಸರ್ಕಾರದ ತಲೆ ಮೇಲೆ ಸಾವಿರಾರು ಕೋಟಿಗಳಷ್ಟು ಸಾಲ ಮಾಡಿಟ್ಟು ಹೋಗಿದ್ದಾರೆ. ಅದ್ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆದರಿಲ್ಲ. ಧೈರ್ಯದಿಂದ ಉತ್ತಮ ಜನಪರ ಆಡಳಿತ ನೀಡುವಲ್ಲಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂದು ಶ್ಲಾಘಿಸಿದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) 

Muddebihal Congress MLA CS Nadagouda Slams BJP grg
Author
First Published Feb 3, 2024, 9:30 PM IST

ಮುದ್ದೇಬಿಹಾಳ(ಫೆ.03):  ದೇಶದಲ್ಲಿ ರಾಜ್ಯದಲ್ಲಿ ರಾಜಕಾರಣದ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜಕಾರಣದಲ್ಲಿ ನೈಜ, ಒಳ್ಳೆಯ ರಾಜಕಾರಣ ವಿರಬೇಕೋ ಅಥವಾಭ್ರಷ್ಟ ರಾಜಕಾರಣ ವ್ಯವಸ್ಥೆ ಇರಬೇಕೋ ಎಂಬುವುದನ್ನು ಜನರೇ ತಿರ್ಮಾನಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಮಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಆರೋಪಿಸಿದರು.

ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ತಾಲೂಕಿನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಸರ್ಕಾರ ಗ್ಯಾರಂಟಿ ಯೋಜನೆಗಳ ಕಾರ್ಯಕ್ರಮದಲ್ಲಿ ಪಟ್ಟಣದ ಪುರಸಭೆಯ ಪೌರಾಡಳಿತದ ವತಿಯಿಂದ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಪ್ರಸ್ತುತ ಸರ್ಕಾರದ ತಲೆ ಮೇಲೆ ಸಾವಿರಾರು ಕೋಟಿಗಳಷ್ಟು ಸಾಲ ಮಾಡಿಟ್ಟು ಹೋಗಿದ್ದಾರೆ. ಅದ್ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆದರಿಲ್ಲ. ಧೈರ್ಯದಿಂದ ಉತ್ತಮ ಜನಪರ ಆಡಳಿತ ನೀಡುವಲ್ಲಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂದು ಶ್ಲಾಘಿಸಿದರು. ಸಿದ್ದರಾಮಯ್ಯನವರಿಗೆ ಹಿಂಬಾಗಿಲಿನಿಂದ ರಾಜಕಾರಣ ಮಾಡುವುದು ಯಾವತ್ತಿಗೂ ಗೊತ್ತಿಲ್ಲ. ಹಾಗೇ ಮಾಡಿದ ಉದಾಹರಣೆಗಳೇ ಇಲ್ಲ. ಆದರೆ, ಬಿಜೆಪಿಯವರು ಹಿಂದಿನ ಬಾಗಿಲಿನಿಂದ ರಾಜಕಾರಣ ಮಾಡುವುದು ಕರತಲಾಮಲಕ ಮಾಡಿಕೊಂಡಿದ್ದಾರೆ ಎಂದರೇ ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.

ಬಿಜೆಪಿಯವರ ಸುಳ್ಳುಗಳನ್ನು ನಂಬಿ ಮೋಸ ಹೋಗಬೇಡಿ: ಸಿಎಂ ಸಿದ್ದರಾಮಯ್ಯ

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮ ಯ್ಯನವರು ಎಲ್ಲ ಭರವಸೆ, ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಇದೇ ರೀತಿ ಸದಾ ಬೆಂಬಲಿಸಿದರೇ ನಿಜವಾದ ಕಡು ಬಡವರ, ದೀನ ದಲಿತರ, ಅಲ್ಪಸಂಖ್ಯಾತರ, ರೈತರ ಪರವಾಗಿ ನಿಲ್ಲುವ ಮೂಲಕ ಉತ್ತಮ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಯಾವುದೇ ವ್ಯಕ್ತಿಗೆ ಅಧಿಕಾರ ಮುಖ್ಯವಲ್ಲ, ತನ್ನ ಅಧಿಕಾ ರದಲ್ಲಿ ಎಷ್ಟು ಜನರಿಗೆ ಒಳ್ಳೆಯ ನ್ಯಾಯ ಕೊಡಿಸಿದ್ದೇನೆ. ಶಾಶ್ವತ ಜನಪರ ಆಡಳಿತ ಕೊಟ್ಟಿದ್ದೇನೆ ಎನ್ನುವುದು ಬಹ ಮುಖ್ಯವಾಗಿರುತ್ತದೆ. ಅದನ್ನು ಸದ್ಯ ಸಿದ್ದರಾಮಯ್ಯನವರು 2 ಬಾರಿ ಮುಖ್ಯಮಂತ್ರಿಗಳಾಗಿ ತೋರಿಸಿದ್ದಲ್ಲದೇ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಪರವಾದ ನಾಯಕರಾಗಿ ಬೆಳೆದು ನಿಂತಿದ್ದೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು.

ಸದ್ಯ ಎಲ್ಲೆಡೆ ಭೀಕರ ಬರಗಾಲ ಎದುರಾಗಿ ತೀವ್ರ ಸಂಕಷ್ಟದಲ್ಲಿರೂ ಸಹಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಕೊಟ್ಟಿರುವ 5 ಗ್ಯಾರಂಟ ಯೋಜನೆಗಳಿಂದ ಜನರಿಗೆ ಯಾವುದೇ ತೊಂದರೆ ಕಾಣದೇ ಮುಖದಲ್ಲಿ ಮಂದಹಾಸ ಮೂಡಿದೆ ಎಂದರು.

ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ. ಅದರಲ್ಲಿ ಬಂದ ಹಣವನ್ನು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ₹13 ಲಕ್ಷ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತೇವೆ. ಹೀಗೆ ಅನೇಕ ಸುಳ್ಳು ಭರವಸೆಗಳನ್ನು ನೀಡಿ ಚುನಾವಣೆ ಗೆದ್ದು ಬಂದಿದ್ದರೆ.ಆದರೆ, ಕಪ್ಪು ಹಣವನ್ನು ನಿಮ್ಮಿಂದ ತರಲು ಸಾಧ್ಯವಾಗಿಲ್ಲ. ಜತೆಗೆ ಭಾರತದ ಯಾವ ಒಬ್ಬನಾಗರಿಕನಿಗೂ ₹13 ಲಕ್ಷ ಹಣ ಹಾಕಲಿಲ್ಲ. ಇಂತಹ ಬಂಡ ಬಿಜೆಪಿಯವರ ಮಾತು ಕೇಳಬೇಡಿ ಎಂದು ಮನವಿ ಮಾಡಿದರು.

300 ಯೂನಿಟ್ ವಿದ್ಯುತ್ ಉಚಿತ ಎಂದು ಕೇಂದ್ರ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿದ್ದಾರೆ. ಆದರೆ, ನಾಯ್ಕದು ಲಕ್ಷ ಖರ್ಚು ಮಾಡಿ ಸೋಲಾರ್ ವಿದ್ಯುತ್ ಅಳವಡಿಸಿಕೊಂಡಿ ರಬೇಕು. ಅಂತಹವರಿಗೆ ಈ ಯೋಜನೆ ಲಾಭಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೇ ನಿಮ್ಮ ಯೋಜನೆ ಬಡವರಿಗೆ ಮುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಆಪರೇಷನ್ ಬಿಟ್ಟರೆ ಬಿಜೆಪಿಯವರಿಗೆ ಬೇರೇನೂ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

ನೀವೇಕೆ ಉದ್ಘಾಟನೆ ಮಾಡಿದ್ದಿರಿ?

ಮಾಜಿ ಶಾಸಕರು ನಮ್ಮ ಸರ್ಕಾರದಲ್ಲಿ ತಂದ ಅನುದಾನವನ್ನು ನೀವೇಕೆ ಉದ್ಘಾಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆದರೆ, 2018ಕ್ಕಿಂತ ಪೂರ್ವದಲ್ಲಿ ನಾನು ತಂದ ಅನುದಾನ, ಕಾಮಗಾರಿ ಗಳನ್ನು ನೀವೇಕೆ ಉದ್ಘಾಟನೆ ಮಾಡಿದ್ದಿರಿ ಎಂದು ಪ್ರಶ್ನಿಸಿದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು, ಯಾವುದೇ ವ್ಯಕ್ತಿ ಬದಲಾಗಬಹುದು. ಸರ್ಕಾರ ಬರಬಹುದು ಸರ್ಕಾರ ಯಾವತ್ತಿಗೂ ಸಾಯುವುದಿಲ್ಲ, ನಿರಂತರವಾಗಿರುತ್ತದೆ ಎಂಬುವು ದನ್ನು ಅರ್ಥ ಮಾಡಿಕೊಂಡರೆ ಸಾಕು ಎಂದರು.

ಇಡೀ ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲೂಕುಗಳಲ್ಲಿ ಬರಗಾಲದಿಂದಲೋ ಅಥವಾ ಅತೀವೃಷ್ಟಿಯಿಂದಲೋ ಪ್ರತೀ ಬಾರಿಯೂ ಒಂದಲ್ಲ ಒಂದು ರೀತಿಯಲ್ಲ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಹಾಗಾಗಿ ತೀರಾ ಹಿಂದುಳಿದ ಮತಕ್ಷೇತ್ರಗಳಾಗಿವೆ. ಶಿವಾನಂದ ಪಾಟೀಲರು ಹಾಗೂ ಎಂ.ಬಿ.ಪಾಟೀಲರು ಇಬ್ಬರು ಮಂತ್ರಿಗಳಿದ್ದಾರೆ. ಈ 3 ಮತಕ್ಷೇತ್ರಗಳ ಬಗ್ಗೆ ಹೆಚ್ಚು ನಿಗಾವಹಿಸಿ ಈ ಭಾಗದಲ್ಲಿ ರೈತರಿಗೆ ಅನುಕೂಲವಾಗುವ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಮತ್ತು ಕೆರೆ ತುಂಬಿಸುವಲ್ಲಿ ಕಾಳಜಿ ವಹಿಸಬೇಕು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಮತಕ್ಷೇತ್ರಕ್ಕೆ ಈ ಇಬ್ಬರು ಸಚಿವರಿಗಿಂತ ಒಂದು ಗುಂಜಿಯಷ್ಟಾದರೂ ಹೆಚ್ಚಿನ ಅನುದಾನ ನೀಡುವ ಮೂಲಕ ಮುದ್ದೇಬಿಹಾಳ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ತಿಳಿಸಿದ್ದಾರೆ. 

Follow Us:
Download App:
  • android
  • ios