ನನ್ನ ಜಾಗ ಡಿನೋಟಿಫಿಕೇಷನ್ ಮಾಡಿ ಅಂಥ ನಿಂಗಪ್ಪ ಸ್ವರ್ಗದಿಂದ ಅರ್ಜಿ ಕೊಟ್ರಾ, ಸಿದ್ದರಾಮಯ್ಯ ಅವರೇ: ಎಚ್‌ಡಿಕೆ ಪ್ರಶ್ನೆ
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ಧರಾಮಯ್ಯ ಶುಕ್ರವಾರ ಸಾಕಷ್ಟು ಸ್ಪಷ್ಟೀಕರಣ ನೀಡಿದ ಬಳಿಕ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತೊಂದಷ್ಟು ಪ್ರಶ್ನೆಗಳನ್ನು ಅವರ ಮುಂದೆ ಇಟ್ಟಿದ್ದಾರೆ.
ಬೆಂಗಳೂರು (ಜು.26): ಮುಡಾ ಹಗರಣ ದಿನದಿಂದ ದಿನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸುತ್ತಿಕೊಳ್ಳಲು ಆರಂಭಿಸಿದೆ. ಇದರ ನಡುವೆ ಶುಕ್ರವಾರ ಸಿದ್ಧರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, ನನ್ನ ಜೀವನ ತೆರೆದ ಪುಸ್ತಕ. ಯಾವುದೇ ಹಗರಣವಾಗಿಲ್ಲ ಎಂದು ಹೇಳಿದರು. ಬಿಜೆಪಿ-ಜೆಡಿಎಸ್ ರಾಜಕಾರಣಕ್ಕಾಗಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಗರು ನನ್ನ ತೇಜೋವಧೆ ಮಾಡಲು ಈ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ಕಾಳಜಿಯಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದರು. ಇನ್ನು ಸಿದ್ಧರಾಮಯ್ಯ ಸ್ಪಷ್ಟೀಕರಣ ನೀಡಿದ ಬಳಿಕ ಮಾತನಾಡಿರುವ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಎದುರು ಇನ್ನೂ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ. '16/2 ಮಾಡಿದ ಮೇಲೆ ಪುನಃ ಪಡೆದುಕೊಳ್ಳಲು ಬರಲ್ಲ. ನಿಂಗಪ್ಪ ಅವರು ಡಿನೋಟಿಫಿಕೇಷನ್ ಮಾಡಿ ಅಂಥ ಸ್ವರ್ಗದಿಂದ ಅರ್ಜಿ ಕೊಟ್ರಾ? ಸಿದ್ದರಾಮಯ್ಯ ಅವರೇ. 2001, 2003 ರಲ್ಲಿ ವಿಜಯನಗರದಲ್ಲಿ ನಿವೇಶನ ಹಂಚಿಕೆಯಾಗಿದೆ ಎಂದಿದ್ದೀರಿ. ಹಾಗಿದ್ದಾಗ 2005 ರಲ್ಲಿ ಕೃಷಿಭೂಮಿ ಅಂಥಾ ಹೇಗೆ ಕೊಂಡುಕೊಂಡ್ರಿ? ಡಿಸಿ ಸ್ಥಳ ಪರಿಶೀಲನೆ ಮಾಡದೆ ಕನ್ವರ್ಷನ್ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಆಗ ಡಿಸಿಎಂ ಆಗಿದ್ದರು. ಭೂಮಿ ಬಳಕೆ ಬದಲಾವಣೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಇನ್ನು ಈ ದಾಖಲೆ ಇಟ್ಟಿದ್ದು ಮುಖ್ಯಮಂತ್ರಿ ಹುದ್ದೆ ಟವಲ್ ಹಾಕಿದವರು. ನಿಮ್ಮವರೇ ಕೊಟ್ಟ ದಾಖಲೆಗಳನ್ನು ವಿಪಕ್ಷಗಳು ಚರ್ಚೆ ಮಾಡುತ್ತಿವೆ. ಸರ್ಕಾರಿ ಭೂಮಿ ನೀವೆ ಕಬಳಿಕೆ ಮಾಡಿ, ಈಗ 64 ಕೋಟಿ ದುಡ್ಡು ಕೊಡಿ ಅಂತಿದ್ದೀರಿ. ಇಂಥ ಆರೋಪ ಹೊತ್ತು ಯಾವ ನೈತಿಕತೆ ಇಟ್ಟುಕೊಂಡು ಅಲ್ಲಿ ಕೂತಿದ್ದೀರಾ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.
'1984 ರಲ್ಲಿ ನಾನು ಮೈಸೂರು ನಲ್ಲಿ ನನ್ನ ವ್ಯವಹಾರ ಇತ್ತು. ಸಿನಿಮಾ ಹಂಚಿಕೆ ಮಾಡುತ್ತಿದ್ದ ಸಮಯವದು. ಆಗ ನಿವೇಶನ ನೀಡುವ ವಿಚಾರವಾಗಿ ಅರ್ಜಿ ಹಾಕಿದ್ದೆ. ಸರ್ಕಾರ ನನಗೆ ಧರ್ಮಕ್ಕೆ ಕೊಟ್ಟಿಲ್ಲ ಅಥವಾ ನಾನು ಪಡೆದಿಲ್ಲ. ಇವರು 14 ಸೈಟ್ ಯಾವ ಆಧಾರದ ಮೇಲೆ ಪಡೆದುಕೊಂಡಿದ್ದಾರೆ. 21 ಸಾವಿರ ಅಡಿ ಸೈಟ್ 84ರಲ್ಲಿ ಸೈಟ್ ಕೊಟ್ಟರು. ಅಲಾಟ್‌ಮೆಂಟ್ ಲೆಟರ್ ಕೂಡ ಕೊಟ್ಟಿದ್ದರು. ಆದರೆ, ಸೈಟ್ ಕೊಟ್ಟರೇ ರಾಜಕಾರಣಕ್ಕೆ ಬರುವುದಕ್ಕೆ ಮುಂಚೆ 15 ವರ್ಷ ಮೈಸೂರು ಸಿನಿಮಾ ಹಂಚಿಕೆ ಮಾಡಿಕೊಂಡು ಬಂದೆ. ಆದರೆ, ಈತನಕ ಸೈಟ್ ಕೊಟಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಇದು ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆ ನಡೆಯಿತು. 500 ಸೈಟ್ ದೇವೇಗೌಡ ಪಡ್ಕೊಂಡ್ರು ಅಂಥ ಅಪಪ್ರಚಾರ ಮಾಡಿದ್ದರು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನ ಪಡೆದುಕೊಂಡರು ಅಂತಾ ಗೊತ್ತಾಗಿದೆ. 2012 ನೇ ಇಸವಿಯಲ್ಲಿ ನಾನು ಮುಡಾಕ್ಕೆ ಪತ್ರ ಬರೆದು, ನನ್ನ ನಿವೇಶನ ಕೊಡಿ ಎಂದು ಕೇಳಿದ್ದೆ. 2017 ರಲ್ಲಿ ಮತ್ತೊಂದು ಪತ್ರ ಬರೆದಿದ್ದೆ. ನಾನು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬೇಕು ಅಂಥ ನನಗೆ ಅನ್ನಿಸಿದ್ರೆ 2006 ರಲ್ಲಿ ನಾನು ಸಿಎಂ ಆಗಿದ್ದೆ, ಅಂದೇ ಬರೆಸಿಕೊಳ್ಳಬಹುದಾಗಿತ್ತು. ಇದು ನನಗೆ ಧರ್ಮಕ್ಕೆ ಕೊಡ್ತಾರಾ? ನಾನು 34 ಸಾವಿರ ದುಡ್ಡು ಕಟ್ಟಿದ್ದೆ. 34 ಸಾವಿರ ಹಣ ಕಟ್ಟಿ 40 ವರ್ಷ ಆಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿಂದಲೇ ಒತ್ತಡ: ವಿಜಯೇಂದ್ರ
ಇವತ್ತು ಸಚಿವ ಸುರೇಶ್ ಅವರ ಅರ್ಭಟ ನೋಡಿದೆ. ನೀವು ಯಾವ ಬ್ಯಾಕ್ ಗ್ರೌಂಡ್ ನಿಂದ ಬಂದಿದ್ದೀರಿ ಅಂತಾ ಗೊತ್ತಿದೆ. ಬೆಂಗಳೂರು ನಲ್ಲಿ ಯಾವ್ಯಾವ ಭ್ರಷ್ಟಾಚಾರ ಮಾಡಿದ್ದಾರೆ ಅಂಥ ತೆಗೆಯಲಾ? ಬೆಂಗಳೂರು ಸುತ್ತಾಮುತ್ತಾ ಮಾಡಿದ್ದಿರಲ್ಲಾ? ಈ ನಿವೇಶನ ಬೇಕಾ ನೀವೇ ನಿಮ್ಮ ಮಗನಿಗೋ, ಪತ್ನಿ ಹೆಸರಿಗೋ, ನಿಮ್ಮ ಆಪ್ತ ಸುರೇಶ್ ಅವರ ಹೆಸರಿಗೂ ಅಥವಾ ಅನಾಥಾಶ್ರಮಕ್ಕೆ ಬರೆದುಕೊಟ್ಟು ಬಿಡಿ ಎಂದು ಎಚ್‌ಡಿಕೆ ಹೇಳಿದ್ದಾರೆ.
ಎಂಡಿಎ ವತಿಯಿಂದ ಎಚ್‌ಡಿಕೆ ಗೃಹ, ವಾಣಿಜ್ಯಕ್ಕೆ ನಿವೇಶನ ಪಡೆದಿಲ್ಲ: ಸಾ.ರಾ.ಮಹೇಶ್ ಸ್ಪಷ್ಟನೆ
ವಾಲ್ಮೀಕಿ ಹಗರಣ ವಿಚಾರವಾಗಿ ಮಾತನಾಡಿದ ಅವರು, ಕಲ್ಲೇಶ್ ಅವರನ್ನು ಅಮಾನತು ಮಾಡಿದ್ದೀರಿ. ಆತನ ಕೈಯಲ್ಲಿ ಅರ್ಜಿ ಕೊಡಿಸಿದ್ದೀರಿ. ಎಂಟು ಬಾರಿ ಕೇಂದ್ರ ಪತ್ರ ಬರೆದಿದೆ, ಹಣ ಬಳಕೆ ಮಾಡಿರುವ ಬಗ್ಗೆ ರಾಜ್ಯ ಉತ್ತರ ಕೊಟ್ಟಿಲ್ಲ. ನಾನು ಪ್ರಾಮಾಣಿಕ ಅಂಥ ಎಷ್ಟು ದಿನ ಹೇಳಿಕೊಳ್ತೀರಿ. ಇದು ಮುಗಿದ ಆಟ ಸಿದ್ದರಾಮಯ್ಯ ಅವರೇ. ಮೈಸೂರಿನಿಂದ ಬೆಂಗಳೂರಿಗಲ್ಲ, ದೆಹಲಿಗೆ ಪಾದಯಾತ್ರೆ ಮಾಡಿಕೊಂಡು ಬರಲಿ ಎಂದು ಎಚ್‌ಡಿಕೆ ವ್ಯಂಗ್ಯವಾಡಿದ್ದಾರೆ.