ಮುಡಾ ಪ್ರಕರಣ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಏನೇನು ತಲ್ಲಣಗಳು ಸೃಷ್ಟಿಯಾಗಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದ ಬದಲಿ ನಿವೇಶನ ಹಂಚಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಂಚ ಮುಜುಗರಕ್ಕೆ ಈಡಾಗುವಂತೆ ಮಾಡಿದೆ. ಅದರಲ್ಲೂ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಈ ಪ್ರಕರಣದ ಕುರಿತಂತೆ ತನಿಖೆಗೆ ಅನುಮತಿ ನೀಡಿರುವುದು ಸಿದ್ದರಾಮಯ್ಯ ಅವರು ಮತ್ತಷ್ಟು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. 

ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಒಕ್ಕೊರಲಿನಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೀದಿಗಿಳಿದು ಹೋರಾಟ ನಡೆಸಲಾರಂಭಿಸಿವೆ. ಇನ್ನು ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಹೀಗಿದ್ದೂ ತೆರೆಮರೆಯಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದರೆ, ಕಾಂಗ್ರೆಸ್‌ಗೆ ಏನು ಲಾಭ, ಏನು ನಷ್ಟ ಎನ್ನುವ ಚರ್ಚೆ ಆರಂಭವಾಗಿದೆ. 

ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ಜಾತಿ ಲೇಪನ ಬೇಡ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್​​ಗೆ ಲಾಭ ಏನು..?

ಹೊಸ ಮುಖ, ಹೊಸ ಸಮುದಾಯಕ್ಕೆ ಅವಕಾಶ ಕೊಡಲು ಸಾಧ್ಯ
ಹೊಸ ನಾಯಕನ ಮೂಲಕ ಪಕ್ಷ ಕಟ್ಟಲು ಅವಕಾಶ
ಪ್ರಬಲ‌ ಸಮುದಾಯದ ನಾಯಕನಿಗೆ ಸಿಎಂ ಸ್ಥಾನ‌ ಅನ್ನೋ ಬೇಡಿಕೆಗೆ ಮನ್ನಣೆ
ರಾಷ್ಟ್ರ ಮಟ್ಟದಲ್ಲಿ ಪಕ್ಷದ ಇಮೇಜ್ ಕಾಪಾಡಿಕೊಳ್ಳಲು ಸಾಧ್ಯ
ಕೇಂದ್ರದ ವಿರುದ್ಧ ಭ್ರಷ್ಟಾಚಾರ ಹೋರಾಟದಲ್ಲಿ ಹಿನ್ನಡೆ ತಪ್ಪಲಿದೆ

ಕಾಂಗ್ರೆಸ್​ಗೆ ನಷ್ಟ ಏನು..? 

ಸಿಎಂ ರಾಜೀನಾಮೆ ನೀಡಿದರೆ ರಾಜಕೀಯ ಪಲ್ಲಟ ಗ್ಯಾರಂಟಿ
ಪಕ್ಷದ ಒಳಗಡೆ ದೊಡ್ಡ ಮಟ್ಟದ ಕ್ರಾಂತಿ ಸಾಧ್ಯತೆ
ಮುಖ್ಯಮಂತ್ರಿಯಾಗಲು ಗುಂಪುಗಾರಿಕೆ ಆರಂಭ
ರಾಜಕೀಯವಾಗಿ ಕಾಂಗ್ರೆಸ್‌ಗೆ ದೊಡ್ಡಮಟ್ಟದ ನಷ್ಟ ಸಾಧ್ಯತೆ
ಪ್ರಬಲ ಸಮುದಾಯ ಕಾಂಗ್ರೆಸ್​​ನಿಂದ ದೂರ ಹೋಗುವ ಆತಂಕ
ಕುರುಬ ಸಮುದಾಯದ ನಾಯಕತ್ವ ವಹಿಸಲು ಇಲ್ಲ ನಾಯಕರು
ಸಿದ್ದರಾಮಯ್ಯರನ್ನ ಕೆಳಗಿಳಿಸಿದ ಅಪಕೀರ್ತಿ ಕಾಂಗ್ರೆಸ್​ಗೆ
ಕುರುಬ ಸಮುದಾಯದ ಮತಗಳಿಕೆ ಕಷ್ಟವಾಗುವ ಸಾಧ್ಯತೆ

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಇಂದು ಪ್ರತಿಭಟನೆ: ಆರ್.ಅಶೋಕ್

ಅದೇ ರೀತಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದರೇ ಬಿಜೆಪಿಗೆ ಏನು ಲಾಭ? ಏನು ನಷ್ಟ ಎನ್ನುವ ಚರ್ಚೆ ಕೂಡಾ ಜೋರಾಗಿದೆ.

ಬಿಜೆಪಿಗೆ ಲಾಭ ಎನು..?

ವಿಜಯೇಂದ್ರ ನಾಯಕತ್ವಕ್ಕೆ ದೊಡ್ಡ ಬಲ‌ ಸಿಕ್ಕಂತಾಗಲಿದೆ
ಪಾದಯಾತ್ರೆಯ ಫಲ ಅಂತ ಬಿಂಬಿಸಲಿರುವ ಬಿಜೆಪಿ
ಅಹಿಂದ ಮತಗಳು ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿಯತ್ತ ವಾಲುವ ಸಾಧ್ಯತೆ
ಭ್ರಷ್ಟಾಚಾರ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಟೀಕಿಸಲು ಬಿಜೆಪಿಗೆ ಅಸ್ತ್ರ
ಮುಂಬರುವ ‌ಉಪಚುನಾವಣೆಗೆ ವಿಷಯವಾಗಲಿರುವ ಮುಡಾ ವಿಚಾರ

ಬಿಜೆಪಿಗೆ ನಷ್ಟವೇನು..?

ಕ್ರೆಡಿಟ್ ಪಡೆಯುವ ವಿಚಾರದಲ್ಲಿ ನಾಯಕರ ಮಧ್ಯೆ ಪೈಪೋಟಿ 
ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಅಪಾಯ
ಬಿಜೆಪಿ ನಾಯಕರ ಮೇಲಿನ ಕೇಸ್​​ಗಳು ಬಿಗಿಯಾಗುವ ಸಾಧ್ಯತೆ