ಡಬಲ್ ಎಂಜಿನ್ ಸರ್ಕಾರ ಇರುವ ಕಡೆಯೆಲ್ಲಾ ಅಭಿವೃದ್ಧಿ: ಸಂಸದ ತೇಜಸ್ವಿ ಸೂರ್ಯ
ಡಬಲ್ ಎಂಜಿನ್ ಸರ್ಕಾರ ಎಲ್ಲೆಲ್ಲಿದೆಯೋ ಅಲ್ಲೆಲ್ಲಾ ಅಭಿವೃದ್ಧಿಯಾಗಿದೆ. ಆದರೆ, ಬೇರೆ ಸರ್ಕಾರಗಳಿರುವ ರಾಜ್ಯಗಳಲ್ಲಿ ಕೇಂದ್ರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮನೆ, ಮನೆಗಳಿಗೆ ತಲುಪಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಮಂಡ್ಯ (ಫೆ.23): ಡಬಲ್ ಎಂಜಿನ್ ಸರ್ಕಾರ ಎಲ್ಲೆಲ್ಲಿದೆಯೋ ಅಲ್ಲೆಲ್ಲಾ ಅಭಿವೃದ್ಧಿಯಾಗಿದೆ. ಆದರೆ, ಬೇರೆ ಸರ್ಕಾರಗಳಿರುವ ರಾಜ್ಯಗಳಲ್ಲಿ ಕೇಂದ್ರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮನೆ, ಮನೆಗಳಿಗೆ ತಲುಪಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಮಂಡ್ಯದಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿ, ಕಳೆದ 70 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಳೆದ 5 ವರ್ಷಗಳಲ್ಲಿ ಆಗಿದೆ. ಹೆದ್ದಾರಿ, ರೈಲು ಮಾರ್ಗದ ಅಭಿವೃದ್ಧಿ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ಕಟ್ಟಿದ ಮೆಡಿಕಲ್ ಕಾಲೇಜುಗಳಿಗಿಂತ ಹೆಚ್ಚು ಕಾಲೇಜುಗಳನ್ನು ಮೋದಿ ಸರ್ಕಾರ ಕಟ್ಟಿಸಿದೆ ಎಂದು ಕೇಂದ್ರದ ಆಡಳಿತವನ್ನು ಹೊಗಳಿದರು. ಹಳೇ ಮೈಸೂರಿನ ಜನರು ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿಂದ ಗೆದ್ದವರು ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡದಿರುವುದು. ಬೊಮ್ಮಾಯಿ ನೇತೃತ್ವದ ಸರ್ಕಾರ ಮೈಷುಗರ್‌ಗೆ ಹಣ ನೀಡಿ ಕಾರ್ಖಾನೆ ಆರಂಭಿಸಿದೆ. ಇದು ಅಭಿವೃದ್ಧಿಯ ಸಂಕೇತ. ಮಂಡ್ಯದಲ್ಲೀಗ ರಾಜಕೀಯ ಪರಿವರ್ತನೆಯ ಗಾಳಿ ಬೀಸುತ್ತಿದೆ ಎಂದರು. ಜೆಡಿಎಸ್ ಮತ್ತು ಕಾಂಗ್ರೆಸ್, ಕಣ್ಣು ಬಿಡದ ಬೆಕ್ಕಿನ ಮರಿಗಳು. ಅವರೆಡೂ ಅಧಿಕಾರಕ್ಕೆ ಬರುವುದಾಗಿ ಕನವರಿಸುತ್ತಿವೆ. ಆದರೆ, ಕಣ್ಣು ಬಿಡಿ. ಅಧಿಕಾರಕ್ಕೆ ಬರೋದು ಬಿಜೆಪಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾದಾಮಿ ಕ್ಷೇತ್ರ ಬಿಡುವುದು ನಂಬಿಕೆ ದ್ರೋಹ: ಸಿದ್ದುಗೆ ಬಿಎಸ್‌ವೈ ಕಿವಿಮಾತು
ತೇಜಸ್ವಿ ಸೂರ್ಯರಿಂದ 2.51 ಕೋಟಿ ಸಂಸದರ ನಿಧಿ ವೆಚ್ಚ: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ 6.10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ .2.51 ಕೋಟಿ ವೆಚ್ಚವಾಗಿದೆ. ‘ಎಂಪಿ ಫಂಡ್ ಬಳಕೆಯಲ್ಲಿ ಪ್ರತಾಪ್ ಸಿಂಹ ಫಸ್ಟ್’ ಶೀರ್ಷಿಕೆಯಲ್ಲಿ ‘ಕನ್ನಡಪ್ರಭ’ದಲ್ಲಿ ಫೆ.1ರಂದು ಪ್ರಕಟವಾಗಿರುವ ಸುದ್ದಿಗೆ ಸಂಸದರ ಕಚೇರಿಯಿಂದ ಪ್ರತಿಕ್ರಿಯೆ ನೀಡಿದ್ದು, ತೇಜಸ್ವಿ ಸೂರ್ಯ ಅವರು .1.67 ಕೋಟಿ ವೆಚ್ಚ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ 2019-20 ರಲ್ಲಿ 4.91 ಕೋಟಿ ಬಿಡುಗಡೆಯಾಗಿದ್ದು, 2.31 ಕೋಟಿ ಕಾಮಗಾರಿ ನಡೆಸಲಾಗಿದೆ. 2020-21ರಲ್ಲಿ 20 ಲಕ್ಷ ಬಿಡುಗಡೆಯಾಗಿದ್ದು, ಅಷ್ಟು ಕಾಮಗಾರಿ ನಡೆಸಲಾಗಿದೆ. 2021-22 ರಲ್ಲಿ 98.50 ಲಕ್ಷ ಬಿಡುಗಡೆಯಾಗಿದ್ದು, ಎಲ್ಲಾ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಗೈಡ್ ಬುಕ್ ವಿತರಿಸಿದ ಸೂರ್ಯ: ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ‘ಬೆಸ್ಟ್’ (ಬೆಂಗಳೂರು ಸೌತ್ ಎಜುಕೇಶನಲ್ ಸೋಯಲ್ ಟ್ರಾನ್ಸಾಫರ್ಮೇಶನ್) ವತಿಯಿಂದ ಎಚ್.ಎಸ್.ಆರ್. ಲೇಔಟ್‌ನಲ್ಲಿರುವ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಿಗೆ ಉಚಿತ ಗೈಡ್ ಬುಕ್‌ಗಳನ್ನು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ವಿತರಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಗೈಡ್ ಬುಕ್‌ಗಳು ಉಪಯುಕ್ತವಾಗಲಿದೆ ಎಂದು ಸಂಸದರು ತಿಳಿಸಿದರು.
ಜೆ.ಪಿ.ನಡ್ಡಾ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ
ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಆಧುನಿಕ ರೀತಿಯಲ್ಲಿ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ರೋಬೊಗಳನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಸ್ಥಳೀಯ ಶಾಸಕ ಎಂ.ಸತೀಶ್ ರೆಡ್ಡಿ, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಮಕ್ಕಳಲ್ಲಿ ಆತಂಕ ಹೆಚ್ಚಾಗುವುದು ಸಾಮಾನ್ಯ. ಮಕ್ಕಳು ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು. ಪೋಷಕರು ಯಾವುದೇ ಒತ್ತಡ ಹೇರಬಾರದು ಎಂದು ಮನವಿ ಮಾಡಿದರು. ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಶಾಲೆಯ ಆಡಳಿತ ಮಂಡಳಿ, ಸ್ಥಳೀಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.