Asianet Suvarna News Asianet Suvarna News

'ಕರ್ನಾಟಕದ ಮೇಲೆ ಬಿಜೆಪಿ ಮುಖಂಡರಿಗಿದೆ ವಿಶೇಷ ಪ್ರೀತಿ'

 ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು  ಪ್ರೀತಿ ಹೊಂದಿದೆ.  ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನ ಬಿಂಬಿಸುತ್ತದೆ. ಸಿ.ಟಿ.ರವಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಅಭಿನಂದನೆಗಳು ಎಂದು ಪ್ರತಾಪ್ ಸಿಂಹ ಹೇಳಿದರು.


 

MP Prathap simha Congratulates CT Ravi Tejasvi surya MP rajeev chandrasekhar snr
Author
Bengaluru, First Published Sep 27, 2020, 3:52 PM IST

ಮೈಸೂರು (ಸೆ.27): ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವಮೋರ್ಚ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಕರ್ನಾಟಕಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು  ಪ್ರೀತಿ ಹೊಂದಿದೆ.  ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನ ಬಿಂಬಿಸುತ್ತದೆ. 
ಸಿ.ಟಿ.ರವಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಗೆ ಅಭಿನಂದನೆಗಳು ಎಂದು ಪ್ರತಾಪ್ ಸಿಂಹ ಹೇಳಿದರು.

"

 ಕರ್ನಾಟಕ ಬಂದ್ ವಿಚಾರ

ರೈತ ಪರ ಕಾಯ್ದೆ ಜಾರಿ ಮಾಡಿದರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ.  ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ.? 
ರೈತನಿಗೆ ಮತ್ತು ಗ್ರಾಹಕನಿಗೆ ಲಾಭವಿಲ್ಲದ ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ.? ಎಪಿಎಂಸಿ ಚುನಾವಣೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ.

ಅಮಿತ್ ಶಾ ಭೇಟಿಯಾದ ತೇಜಸ್ವಿ ಸೂರ್ಯ: ಮಹತ್ವದ ಚರ್ಚೆ..!

 ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ.? ರೈತರಿಂದಲೇ ಸೆಸ್ಕ್ ಸುಲಿಗೆ ಮಾಡಿ ಲಾಭ ಮಾಡುತ್ತಿರುವುದಿ ದಳ್ಳಾಳಿಗಳು ಎಂದರು.

ಸೂಪರ್ ಮಾರ್ಕೆಟ್ ಒಳಗೆ ಬಿಟ್ಟುಕೊಂಡಿದ್ದು ಯಾರು. ಈಗ ಅವರೇ ರೈತರ ಬಳಿ ಪದಾರ್ಥ ಖರೀದಿ ಮಾಡ್ತಾರೆ ಅದರಲ್ಲಿ ತಪ್ಪೇನು. ವಿರೋಧ ಮಾಡುವುದಿದ್ದರೇ ಸೂಪರ್ ಮಾರ್ಕೆಟ್‍ಗಳನ್ನೆ ವಿರೋಧ ಮಾಡಬೇಕಿತ್ತು. ಈ ಬಂದ್ ನಲ್ಲಿ ರೈತರು ಭಾಗಿಯಾಗುತ್ತಿಲ್ಲ. 
ಆದ್ರೆ ರೈತರ ಹೆಸರಿನ ಸಂಘಟನೆಗಳು ಭಾಗಿಯಾಗುತ್ತಿವೆ. ಈ ಬಂದ್‍ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು. 

ಸರಳ ದಸರಾ ಆಚರಣೆ 

ನಾವು ಸರಳ ಹಾಗೂ ಸಾಂಪ್ರದಾಯಿಕ ದಸರಾ ಬಗ್ಗೆ ಯೋಚನೆ ಮಾಡ್ತಿದ್ದೇವೆ ಎಂದ ಪ್ರತಾಪ್ ಸಿಂಹ ಮಹಿಷ ದಸರಾ ಬಗ್ಗೆ ಕ್ಷುಲ್ಲಕ ವಿಚಾರಗಳ ಬಗ್ಗೆ ನಾವು ಚಿಂತನೆಯನ್ನೆ ಮಾಡೋಲ್ಲ ಎಂದರು.

Follow Us:
Download App:
  • android
  • ios