ತಾಲೂಕು ನ್ಯಾಯಾಲಯದಲ್ಲಿ ವಕೀಲಗಿರಿ ಮಾಡಿಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ದೇಶದ ಆರ್ಥಿಕತೆ ಬಗ್ಗೆ ಹೇಗೆ ಗೊತ್ತಾಗಬೇಕು ಎಂದು ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು (ಜೂ.05): ತಾಲೂಕು ನ್ಯಾಯಾಲಯದಲ್ಲಿ ವಕೀಲಗಿರಿ ಮಾಡಿಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ದೇಶದ ಆರ್ಥಿಕತೆ ಬಗ್ಗೆ ಹೇಗೆ ಗೊತ್ತಾಗಬೇಕು ಎಂದು ಸಂಸದ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಹಾಗೂ ತೆರಿಗೆ ಬಾಕಿ ನೀಡಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, 13 ಬಾರಿ ಬಜೆಟ್‌ ಮಂಡಿಸಿರುವುದಾಗಿ ಹೇಳಿಕೊಳ್ಳುವ ಸಿದ್ದರಾಮಯ್ಯ ತೆರಿಗೆ ವ್ಯವಸ್ಥೆಯ ಕುರಿತು ಕನಿಷ್ಠ ಜ್ಞಾನ ಇಲ್ಲದೆ ಹೀಗೆ ಮಾತನಾಡುತ್ತಿದ್ದಾರೆ. ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು ಜಗದೀಶ್‌ ಶೆಟ್ಟರ್‌ವರೆಗೆ ಎಲ್ಲಾ ಮುಖ್ಯಮಂತ್ರಿಗಳು ಸಾಲ ಮಾಡಿದ್ದ ಎರಡು ಪಟ್ಟನ್ನು ಸಿದ್ದರಾಮಯ್ಯ ಒಬ್ಬರೇ ಮಾಡಿದ್ದಾರೆ ಎಂದು ಟೀಕಿಸಿದರು.

1ಕ್ಕೆ ಅಕ್ಕಿ ಕೊಟ್ಟೆಎಂದು ಬೋರ್ಡು ಹಾಕಿಕೊಂಡಿದ್ದ ಸಿದ್ದರಾಮಯ್ಯನವರೇ ಉಳಿಕೆ 29 ಕೊಟ್ಟಿದ್ದು ಯಾರು? ಮೈಸೂರಿನಿಂದ ಆಯ್ಕೆಯಾದ ನೀವು ನೀಡುತ್ತಿರುವ ಹೇಳಿಕೆಯನ್ನು ನೋಡಿದರೆ ನಾಚಿಕೆ ಆಗುತ್ತದೆ ಎಂದರು. ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯಕ್ಕೆ ಸಾಕಷ್ಟು ಯೋಜನೆ ಕೊಡುತ್ತಿದ್ದಾರೆ. ಬರುತ್ತಿದ್ದಾರೆ. ಮೈಸೂರು- ಬೆಂಗಳೂರು ಹೆದ್ದಾರಿ ವಿಸ್ತರಣೆ, ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಮೈಸೂರು- ಮಡಿಕೇರಿ ರಸ್ತೆ ಅಭಿವೃದ್ಧಿ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಮೊತ್ತದ ಅತ್ಯುನ್ನತ ಅಧ್ಯಯನ ಕೇಂದ್ರ, ಪಾಸ್‌ಪೋರ್ಟ್‌ ಸೇವಾ ಕೇಂದ್ರ, ನೋಟು ಮುದ್ರಣ ಇಂಕ್‌ ಉತ್ಪಾದನಾ ಕೇಂದ್ರ ಸೇರಿದಂತೆ ಸಾಕಷ್ಟುಯೋಜನೆಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಅವರು ವಿವರಿಸಿದರು.

International Yoga Day ಪ್ರಧಾನಿ ಮೋದಿ ಯೋಗಕ್ಕೆ ಮೈಸೂರಿನಲ್ಲಿ ಸ್ಥಳ ನಿಗದಿ

ಕೇಂದ್ರ ಸರ್ಕಾರವು . 1.29 ಲಕ್ಷ ಕೋಟಿ ಅನುದಾನವನ್ನು ವಿವಿಧ ಯೋಜನೆಯಡಿ ನೀಡಿದೆ. ಎನ್‌ಆರ್‌ಇಜಿ ಅಡಿ .27,418 ಕೋಟಿ, ಕೃಷಿಗೆ 19,374 ಕೋಟಿ ನೀಡಿದ್ದು, ಕೃಷಿ ಸಮ್ಮಾನ್‌ ಯೋಜನೆಯಡಿ 47,86,000 ರೈತರಿಗೆ . 8,704 ಕೋಟಿ ನೀಡಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಕ್ರೆಡಿಟ್‌ಕಾರ್ಡ್‌ ಯೋಜನೆಯಡಿ .19 ಸಾವಿರ ಕೋಟಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ 3,298 ಕಿ.ಮೀಟರ್‌ಗೆ . 50,527 ಕೋಟಿಯನ್ನು ಕೇಂದ್ರ ನೀಡಿದೆ ಎಂದರು. ಈ ಪೈಕಿ ಮೈಸೂರಿಗೆ 9,551 ಕೋಟಿಯನ್ನು ಹೆದ್ದಾರಿಗೆ ನೀಡಿದೆ. ಆಯುಷ್‌ ಕಟ್ಟಡ ಮತ್ತು ಅತ್ಯುನ್ನತ ಕೇಂದ್ರ ತೆರೆಯಲು . 150 ಕೋಟಿ, ಮೈಸೂರು- ಮಡಿಕೇರಿ ಹೆದ್ದಾರಿ ವಿಸ್ತರಣೆಗೆ 4 ಸಾವಿರ ಕೋಟಿ, ಆತ್ಮನಿರ್ಭರ ಭಾರತ್‌ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ ತಲಾ 10 ಸಾವಿರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ದೇಶದಲ್ಲಿ ಪ್ರಧಾನಿಗಳು 5 ಕೋಟಿ ಮನೆ ನಿರ್ಮಿಸಿದ್ದಾರೆ. 2020-23ರ ವೇಳೆಗೆ ಎಲ್ಲರಿಗೂ ಮನೆ ಕಲ್ಪಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಮನೆ ನಿರ್ಮಿಸುವಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಜನ್‌ಧನ್‌ ಯೋಜನೆ ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದ್ದರೆ, ಮೈಸೂರು 2ನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರಮೋದಿ ಅವರು ಈಗಿನ ರಾಜಋುಷಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಟಿ. ಸೋಮಶೇಖರ್‌ ಮಾತನಾಡಿ, ಸಹಕಾರ ಇಲಾಖೆಯು ರಾಜ್ಯದಲ್ಲಿ ಸ್ವತಂತ್ರವಾಗಿದ್ದು, ಕೆಲವೊಂದು ತಿದ್ದುಪಡಿಗಳು ಮಾತ್ರ ಅನ್ವಯಿಸುತ್ತದೆ. ಈ ಸಂಬಂಧ ಕೇಂದ್ರ ಸಹಕಾರ ಸಚಿವರೊಡನೆ ಮಾತನಾಡಿದ್ದೇನೆ. 5700 ಬ್ಯಾಂಕ್‌ ಇದೆ. 

ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, Pratap Simha ಕಿಡಿ

ಅದನ್ನು ಒಂದೇ ಸಾಫ್ಟ್‌ವೇರ್‌ ಅನ್ನು ತರಲಾಗುತ್ತಿದೆ. ಕಳೆದ ಬಾರಿ . 24 ಸಾವಿರ ಕೋಟಿ ಸಾಲ ಕೊಡಲಾಗಿತ್ತು. ಈ ಬಾರಿ .21 ಸಾವಿರ ಕೋಟಿ ಸಾಲ ಕೊಡಲಾಗಿದೆ. ಈ ಪೈಕಿ 33 ಲಕ್ಷ ಹಳೆ ರೈತರು, 3 ಲಕ್ಷ ಹೊಸ ರೈತರು ಇದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್‌. ನಾಗೇಂದ್ರ, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್‌. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ಮೇಯರ್‌ ಸುನಂದಾ ಪಾಲನೇತ್ರ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್‌.ಆರ್‌. ಕೃಷ್ಣಪ್ಪಗೌಡ ಮೊದಲಾದವರು ಇದ್ದರು.