ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಅವರ ಸಚಿವ ಸಂಪುಟದ ಸಚಿವ ಆಂಜನೇಯಸ್ವಾಮಿ ಅವರು ಕುಟುಂಬದ ಮೂಲಕ ಹಣ ಪಡೆಯುತ್ತಿರುವ ಕುರಿತು ಸ್ಟ್ರೀಂಗ್‌ ಅಪರೇಷನ್‌ ಮೂಲಕ ಹೊರ ತೆಗೆದಿದ್ದು ಭ್ರಷ್ಟಾಚಾರ ಅಲ್ಲವೇ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು. 

MP Pratap Simha Outraged Against Siddaraiamah At Vijayapura gvd

ಇಂಡಿ (ಮಾ.05): ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತೆತ್ತಿದರೇ 40 ಪರ್ಸಂಟೆಸ್‌ ಬಿಜೆಪಿ ಸರ್ಕಾರ ಎಂದು ಹೇಳುತ್ತ ಹೋರಟಿದ್ದು, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಇದ್ದಾಗ ಅವರ ಸಚಿವ ಸಂಪುಟದ ಸಚಿವ ಆಂಜನೇಯಸ್ವಾಮಿ ಅವರು ಕುಟುಂಬದ ಮೂಲಕ ಹಣ ಪಡೆಯುತ್ತಿರುವ ಕುರಿತು ಸ್ಟ್ರೀಂಗ್‌ ಅಪರೇಷನ್‌ ಮೂಲಕ ಹೊರ ತೆಗೆದಿದ್ದು ಭ್ರಷ್ಟಾಚಾರ ಅಲ್ಲವೇ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು. ಪಟ್ಟಣದಲ್ಲಿ ಬಿಜೆಪಿ ಎಸ್ಟಿಮೋರ್ಚಾ ವತಿಯಿಂದ ಶನಿವಾರ ಹಮ್ಮಿಕೊಂಡ ಎಸ್ಟಿಮೋರ್ಚಾ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಇದ್ದಾಗ ಚಾಮುಂಡಿ ಕ್ಷೇತ್ರದ ಕಬಿನಿ, ಕೆಆರ್‌ಎಸ್‌ಗೆ ನೀರು ಹರಿಸಲಿಲ್ಲ. 

ಇವೆರಡರಲ್ಲಿಯೂ ಕುಡಿಯಲು ನೀರು ಸಿಗಲಿಲ್ಲ. ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯನವರು. ಪ್ರತಿ ಮನೆಗೆ ಜಲಜೀವನ್‌ ಮಿಷನ್‌ ಮೂಲಕ ನೀರು ಹರಿಸಿದ್ದು ಪ್ರಧಾನಿ ಮೋದಿ ಎಂದರು. ಉಚಿತ 200 ಯುನಿಟ್‌ ವಿದ್ಯುತ್‌, ಗೃಹಜ್ಯೋತಿ ಯೋಜನೆ ಮೂಲಕ 2 ಸಾವಿರ ನೀಡುವ ಸಿದ್ದರಾಮಯ್ಯನವರೇ ಮೊದಲು ನೀವು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಿರಿ ಎಂಬುವುದು ನಿಮ್ಮ ನೆಲೆ ಭದ್ರಗೊಳಿಸಿಕೊಳ್ಳಿ. ಕಾಂಗ್ರೆಸ್ಸಿನವರಿಗೆ ನೆಲೆ ಇಲ್ಲದಂತಾಗಿದೆ. ಸರ್ಕಾರದ ಹಣದಲ್ಲಿ ಪುಕ್ಕಟ್ಟೆಯೋಜನೆಗಳು ಮಾಡಿ ಅವುಗಳ ಮೇಲೆ ಸಿದ್ದರಾಮಯ್ಯನವರು ಫೋಟೊ ಹಾಕಿಕೊಳ್ಳುವ ಸಿದ್ದರಾಮಯ್ಯನವರು ಬಿಜೆಪಿ ಅವರು ಅಲ್ಲ. 

ರಾಮ​ದೇ​ವರ ಬೆಟ್ಟದ ದೇಗುಲ ಅಭಿ​ವೃದ್ಧಿ ಸಮಿತಿ ರದ್ದು: ಸಚಿವ ಅಶ್ವತ್ಥ್‌ರಿಂದ ಡಿಸಿಗೆ ಪತ್ರ

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರ ಭಾರತ ಜೋಡೊ ಇದು ವಾಕಿಂಗ್‌ ಮಾಡಿದಂತೆ ಲಾಲ್‌ಚೌಕ್‌ದಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು ಗಂಡೆದೆಯ ಪ್ರಧಾನಿ ನರೇಂದ್ರ ಮೋದಿ ಎಂದು ಗುಡುಗಿದರು. ಎಂ.ಬಿ.ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ ಕೇವಲ ಅವರ ಕ್ಷೇತ್ರಕ್ಕೆ ನೀರು ಹರಿಸಿದ್ದು ಬಿಟ್ಟರೇ ಇತರೆ ಕ್ಷೇತ್ರಗಳಿಗೆ ನೀರು ಹರಿಸುವ ಕೆಲಸ ಮಾಡಲಿಲ್ಲ. ನೀರಿನಂತೆ ನೀರಾವರಿ ಯೋಜನೆಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ ಹೊರತು ನೀರು ಹರಿಸಲಿಲ್ಲ ಎಂದು ಆರೋಪಿಸಿದರು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರು ಇಂಡಿ, ಚಡಚಣ ಭಾಗದ ರೈತರಿಗೆ ನೀರಾವರಿ ಸೌಲಭ್ಯ ನೀಡಲು .3 ಸಾವಿರ ಕೋಟಿ ಅನುದಾನದಲ್ಲಿ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ. 

ಮಾ.9 ರಂದು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಮಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನಃ ಕಾಮಗಾರಿ ಲೋಕಾರ್ಪಣೆ ಮಾಡಲು ಬರಲು ತಮ್ಮ ಆಶೀರ್ವಾದ ಬಿಜೆಪಿಗೆ ಇರಲಿ ಎಂದು ಮನವಿ ಮಾಡಿದರು. 75 ವರ್ಷ ದೇಶದಲ್ಲಿ ಆಡಳಿತ ಮಾಡಿದ ಯಾವ ಪ್ರಧಾನಮಂತ್ರಿಯೂ ಯಾವುದೇ ಯೋಜನೆಗೆ ಶಂಕುಸ್ಥಾಪನೆ ಮಾಡಿ, ಲೋಕಾರ್ಪಣೆ ಮಾಡಿದ ಉದಾಹರಣೆ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು, ಮಂಡ್ಯ ಎಕ್ಸಪ್ರೆಸ್‌ ಹೆದ್ದಾರಿಗೆ ಶಂಕುಸ್ಥಾಪನೆ ಮಾಡಿ, ಲೋಕಾಪರ್ಣಣೆ ಮಾಡುತ್ತಿರುವುದು ದೇಶದ ಮೊದಲ ಪ್ರಧಾನಿ ಎಂದರು.

2019ರ ಚುನಾವಣೆಯಲ್ಲಿ ತಳವಾರ, ಪರಿವಾರ ಸಮುದಾಯ ಬಿಜೆಪಿಗೆ ಆಶೀರ್ವಾದ ಮಾಡಿದ್ದರಿಂದ ನಾವು ಸಹ ಅವರ ಋುಣ ತೀರಿಸಲು ಅಂದು ಕೊಟ್ಟಮಾತು ಉಳಿಸಿಕೊಳ್ಳುವುದಕ್ಕಾಗಿ ತಳವಾರ,ಪರಿವಾರ, ಸಿದ್ದಿ ಸಮುದಾಯವನ್ನು ಎಸ್ಟಿಮೀಸಲಿಗೆ ಸೇರ್ಪಡೆ ಮಾಡಿದ್ದೇವೆ ಎಂದು ತಿಳಿಸಿದರು. ಎಲ್ಲರು ದೀನದಲಿತರ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಾರೆ. ಆದರೆ, ಮಾತನಾಡದೇ ಅಭಿವೃದ್ಧಿ ಮಾಡಿ ತೊರಿಸುವ ಕೆಲಸ ಬಿಜೆಪಿ ಮಾಡುತ್ತದೆ. ಎಸ್ಸಿ, ಎಸ್ಟಿಸಮುದಾಯಕ್ಕೆ ಮೀಸಲು ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ ಎಂದರು.

ತಳವಾರ, ಪರಿವಾರ ಸಮುದಾಯಕ್ಕೆ ಮಾತುಕೊಟ್ಟಂತೆ ನಡೆದುಕೊಂಡಿದ್ದೇವೆ. ನೀರಾವರಿ ಮೂಲಕ ರೈತರಿಗೆ ನೀರು ಕೊಟ್ಟಿದ್ದೇವೆ. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ಬಿಜೆಪಿಯ ಮೇಲೆ ಇರಲಿ. ಇಂಡಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಆಗಿರಲಿ, ಬಿಜೆಪಿ ಚಿಹ್ನೆಯೇ ಅಭ್ಯರ್ಥಿ ಎಂದು ತಿಳಿದು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದು, ಮುಂಬರುವ ವಿಧಾನಸಭೆ ಚುನಾವಣೆ ಮುಗಿದ ಬಿಜೆಪಿ ಅಭ್ಯರ್ಥಿಯ ಗೆಲುವಿನ ವಿಜಯೋತ್ಸವದಲ್ಲಿ ಭಾಗಿಯಾಗಲು ಇನ್ನೊಮ್ಮೆ ಇಂಡಿಗೆ ಬರುವೆ ಎಂದರು.

ಕಾಂಗ್ರೆಸ್‌ ಅವಧಿಯಲ್ಲಿ ಬಡವರಿಗೆ ಅನುಕೂಲವಾಗಿಲ್ಲ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ ಜಿಲ್ಲಾ ಮುಖಂಡ ಅನೀಲ ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಮಹೇಂದ್ರ ವಾಲಿಕಾರ, ಮಲ್ಲಿಕಾರ್ಜುನ ಜೋಗೂರ, ರಾಜು ಪೂಜಾರಿ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ಮಂಜುನಾಥ ಓಲೆಕಾರ, ನರಸಿಂಹ ನಾಯಕ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ದಯಾಸಾಗರ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸಿದ್ದಲಿಂಗ ಹಂಜಗಿ, ಮುತ್ತು ದೇಸಾಯಿ, ವಿರಾಜ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಭೀಮಸಿಂಗ ರಾಠೋಡ, ರವಿ ವಗ್ಗೆ, ಯಲ್ಲಪ್ಪ ಹದರಿ, ಅನೀಲಗೌಡ ಬಿರಾದಾರ, ರಾಮಸಿಂಗ ಕನ್ನೊಳ್ಳಿ, ಸಂಜು ದಶವಂತ, ರಾಚು ಬಡಿಗೇರ, ಶ್ರೀನಿವಾಸ ಕಂದಗಲ್ಲ, ರಾಜಶೇಖರ ಯರಗಲ್ಲ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios