Asianet Suvarna News Asianet Suvarna News

Mysuru Politics ಮಹಾರಾಜರ ನಂತರ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದು ನಾನೇ, ಸಿಂಹ ಘರ್ಜನೆ

* ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ
* ಘಂಟಾಘೋಷವಾಗಿ ಹೇಳಿದ ಪ್ರತಾಪ್ ಸಿಂಹ
 * ಸ್ವಪಕ್ಷದ ಶಾಸಕರುಗಳಿಗೆ ಸವಾಲು ಹಾಕಿದ ಸಂಸದ ಪ್ರತಾಪ್ ಸಿಂಗಹ

MP pratap simha Hits out at his Party Mysuru BJP MLAs rbj
Author
Bengaluru, First Published Jan 29, 2022, 8:47 PM IST

ಮೈಸೂರು, (ಜ.29): ಅತ್ತ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿ ಬೆಂಕಿ ಹೊತ್ತಿ ಉರಿಯುತ್ತಿದೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಡುಗೆ ಅನಿಲ ಕೊಳವೆ ಮಾರ್ಗ ಅಳವಡಿಸುವ ವಿಷಯದಲ್ಲಿ ಬಿಜೆಪಿ ನಾಯಕರ ಮಧ್ಯೆ ವಾಕ್ಸಮರ ಶುರುವಾಗಿದೆ.

ಹೌದು...ಸಂಸದ ಪ್ರತಾಪ್ ಸಿಂಹ(Pratap Simha)​  ಮೈಸೂರಿನಲ್ಲಿ ಅಭಿವೃದ್ಧಿ ಕಾರ್ಯಗಳ (Mysuru development Works) ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತ ಸ್ವಪಕ್ಷದ ಶಾಸಕರುಗಳಿಗೆ ಸವಾಲು ಹಾಕಿದ್ದಾರೆ.

Weekend Curfew: ಕರ್ಫ್ಯೂ ಮಾಡೋದಾದ್ರೆ ಲಸಿಕೆ ಯಾಕ್ರೀ ಬೇಕು.? ಸಿಡಿದ ಪ್ರತಾಪ್ ಸಿಂಹ

 ಇಂದು(ಶನಿವಾರ) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ​, ಮೈಸೂರು ಅಭಿವೃದ್ಧಿ ಮಾಡಿದ್ದು ನಾನು. ಮೈಸೂರು ಮಹಾರಾಜರ ನಂತರ ಅತಿಹೆಚ್ಚು ಲೀಡ್‌ನಲ್ಲಿ ಗೆದ್ದಿರೋದು ನಾನು. ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರೋದು ಎಂದು ಘಂಟಾಘೋಷವಾಗಿ ಹೇಳಿದರು.

ಶಾಸಕ ಎಲ್.ನಾಗೇಂದ್ರ ವಿರುದ್ಧ ಕಿಡಿ
ಎಂಎಲ್‌ಎ ನಾಗೇಂದ್ರ ಗೋಲಿ ಬುಗುರಿ ಆಡಿದ ಜಾಗದಲ್ಲೇ ಲೀಡ್ ತಗೊಂಡಿಲ್ಲ. ಇನ್ನು ಅವರು ನನಗೆ ಲೀಡ್ ಕೊಡ್ಸಿದ್ದಾರಾ? ಅವರು ವಾಸವಿರುವ ಬೀದಿಯಲ್ಲೇ ಅವರ ಪಕ್ಷದ ಸದಸ್ಯರು ಗೆದ್ದಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮದ ಫಲವಾಗಿ ನಾನು ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ. ಜೆಡಿಎಸ್, ಕಾಂಗ್ರೆಸ್ ನಲ್ಲಿರುವ ಮೋದಿ ಅಭಿಮಾನಿಗಳು ಸಹ ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರ ಬೆಂಬಲದಿಂದ ನಾನು ಮರು ಆಯ್ಕೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದದರು.

ನಗರಪಾಲಿಕೆ ಚುನಾವಣೆಯಲ್ಲೂ ಕೆ ಜಿ ಕೊಪ್ಪಲಿನಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ಅಲ್ಲಿ ಹರೀಶ್ ಗೌಡ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ. ನಗರಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ನಾಗೇಂದ್ರಗೆ ಸಾಧ್ಯವಾಗಿಲ್ಲ. ಮೈಸೂರಿನ ಮಹಾರಾಜರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ. ಹೆಚ್ಚಿನ ಮತಗಳ ಅಂತರದಿಂದ ಸಂಸದನಾಗಿ ಮರು ಆಯ್ಕೆಯಾಗಿದ್ದೇನೆ ಎಂದು ಶಾಸಕ ಎಲ್ ನಾಗೇಂದ್ರಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು .

ಶಾಸಕ ಎಲ್.ನಾಗೇಂದ್ರ  ಅಭಿವೃದ್ಧಿ ಹರಿಕಾರ ಅನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂ. ಕೆಲಸ ಅಂತ ಹೇಳ್ತಾರೆ.  ಎಲ್ಲಿದೆ 300 ಕೋಟಿ ? ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ ಎಂದು ಸವಾಲು ಹಾಕಿದರು.

ಚಾಮರಾಜ ಕ್ಷೇತ್ರದ ಕೆ.ಆರ್.ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ.  ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು.  ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು.  ಶಾಸಕರು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. 
ಬೆಂಗಳೂರು- ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು.  ಕೆ.ಆರ್.ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು.  ಶಾಸಕರು ರಿಯಲ್ ಎಸ್ಟೇಟ್ ಮಾಡಲಿ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸ್ವಪಕ್ಷೀಯ ಶಾಸಕರಿಗೆ ಟಾಂಗ್ ಕೊಟ್ಟರು.

Follow Us:
Download App:
  • android
  • ios