ಸಿ.ಟಿ. ರವಿ ಸೋಲಿನ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮೇ.15):  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೋಲಿನ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಸಿ.ಟಿ. ರವಿ ನನ್ನನ್ನು ಬಿಜೆಪಿಯಿಂದ ಹೊರಗೆ ಕಳಿಸಿದರು. ಆದರೆ, ಜನ ಕ್ಷೇತ್ರದಿಂದಲೇ ಅವರನ್ನು ಹೊರಗೆ ಕಳಿಸಿದ್ದಾರೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ ಲಿಂಗಾಯಿತರ ಕ್ಷೇತ್ರವಾಗಲಿದೆ. ಸಿ.ಟಿ. ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸುತ್ತಿದ್ದರು. ಇನ್ನು ಮುಂದೆ ಅವರ ವಿಚಾರಗಳು ಕೆಲಸ ಮಾಡುವುದಿಲ್ಲ ಎಂದರು.

Karnataka Election Results 2023: ಬೆಳಗಾವಿಯಲ್ಲಿ ಬಿಜೆಪಿ ಯಡವಟ್ಟು, ಮಾಮನಿ ಕುಟುಂಬ

ಫೋನ್ ಸ್ವಿಚ್ ಆನ್ ಮಾಡಿದರೆ ಬಿಜೆಪಿಗೆ 50 ಸ್ಥಾನವಷ್ಟೆ: 
ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆನ್ ಮಾಡಲಿಲ್ಲ. ಅವರು ಮೊಬೈಲ್ ಫೋನ್ ಸ್ವಿಚ್ ಆನ್ ಮಾಡಿದರೆ ಬಿಜೆಪಿಗೆ 50 ಸ್ಥಾನವಷ್ಟೆ ಬರುತ್ತಿತ್ತು ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ. ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದ ನಾನು. ನನ್ನನ್ನು ಸಿ.ಟಿ. ರವಿ ಬಿಜೆಪಿಯಿಂದ ಖಾಲಿ ಮಾಡಿಸಿದರು.

Udupi Election Results 2023: ಕಾಂಗ್ರೆಸ್ ಹಿರಿಯ ನಾಯಕರ ರಾಜಕೀಯ ನಿವೃತ್ತಿಗೆ ಕಾರಣವಾದ

ನನ್ನನ್ನು ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಎಂದು ಜನರೇ ಹೇಳಿದ್ದರು. ಹಾಗೆಯೇ ಆಗಿದೆ ಎಂದು ಹೇಳಿದ್ದಾರೆ. ಜೆಡಿಎಸ್ ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗ್ತಿರಲಿಲ್ಲ, ಕಷ್ಟವಾಗಿತ್ತು ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡ್ತೀವಿ ಎಂದು ಎಂ.ಪಿ.ಕುಮಾರಸ್ವಾಮಿ ಹೇಳಿದರು.