ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು: ಮುನಿರತ್ನಗೆ ತಿರುಗೇಟು ಕೊಟ್ಟ ಸಂಸದ ಸುರೇಶ್

ಮಾಜಿ ಸಚಿವ ಮುನಿರತ್ನರವರು ಪ್ರೊಡ್ಯುಸ್ ಮಾಡುತ್ತಿದ್ದಾಗ ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿರಲಿಲ್ಲ. ಅವರು ಮಿಸ್ ಕಮ್ಯುನಿಕೇಷನ್ ಮಾಡಿದ್ದಾರೆ. ನಾನು ರಾಜಕಾರಣಕ್ಕೆ ಬರೋದಕ್ಕಿಂತ ಮುಂಚಿತವಾಗಿ ಅವರು ಪ್ರೊಡ್ಯುಸ್ ಮಾಡುತ್ತಿದ್ದರು.

MP DK Suresh Slams On MLA Munirathna At Ramanagara gvd

ರಾಮನಗರ (ಅ.13): ಮಾಜಿ ಸಚಿವ ಮುನಿರತ್ನರವರು ಪ್ರೊಡ್ಯುಸ್ ಮಾಡುತ್ತಿದ್ದಾಗ ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿರಲಿಲ್ಲ. ಅವರು ಮಿಸ್ ಕಮ್ಯುನಿಕೇಷನ್ ಮಾಡಿದ್ದಾರೆ. ನಾನು ರಾಜಕಾರಣಕ್ಕೆ ಬರೋದಕ್ಕಿಂತ ಮುಂಚಿತವಾಗಿ ಅವರು ಪ್ರೊಡ್ಯುಸ್ ಮಾಡುತ್ತಿದ್ದರು. ನಾನು ಡಿಸ್ಟ್ರಿಬ್ಯೂಟ್ ಬಿಟ್ಟು ಎಕ್ಸಿಬ್ಯೂಷನ್ ಮಾಡುತ್ತಿದ್ದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಡೈರೆಕ್ಷನ್ನೂ ಮಾಡುತ್ತಾರೆ. ಅದೆಂತದೋ ಮುನಿರತ್ನ ಕುರುಕ್ಷೇತ್ರ ಅಂತ ಮಾಡಿದ್ದರಲ್ಲಾ. ಆ ವ್ಯಕ್ತಿ ಕುರುಕ್ಷೇತ್ರವನ್ನೇ ಬರೆದವರು. 

ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರ ತಿದ್ದಿದವರು. ಹಾಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರವನ್ನು ನಾವು ಟಾರ್ಗೆಟ್ ಮಾಡಿಲ್ಲ. ನಮ್ಮ ವಾರ್ಡ್ ಒಂದರಲ್ಲಿ ಅಕ್ರಮ ಆಗಿದೆ ಅಂತ ಅವರೇ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು, ಬಿಲ್ ಕೊಡಬಾರದು ಅಂತ ಪತ್ರ ಬರೆದಿದ್ದಾರೆ. ಈ ಬಗ್ಗೆ ಇಡಿ ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಅದರ ಅರ್ಥ ಅವರ ಆಡಳಿತ ಅವಧಿಯಲ್ಲಿ ಅವರದೇ ನಾಯಕತ್ವದಲ್ಲಿ ಆಗಿದೆ ಅಂತ ಅರ್ಥ ಎಂದು ಟೀಕಿಸಿದರು. ಅವ್ಯವಹಾರಗಳ ಬಗ್ಗೆ ಸರ್ಕಾರ ತನಿಖೆ ಮಾಡಬೇಕಲ್ಲ. 

ಕಾಂಗ್ರೆಸ್ ಸರ್ಕಾರ ನುಡಿದಂತೆ‌ ನಡೆಯುತ್ತಿದೆ: ಸಂಸದ ಡಿ.ಕೆ.ಸುರೇಶ್‌

ಅವರ ಅಪ್ಪಣೆ ಇಲ್ಲದೇ ಆ ಕ್ಷೇತ್ರದಲ್ಲಿ ಒಂದು ಇರುವೆ ಕೂಡಾ ಅಲುಗಾಡಲ್ಲ. ಅಂತಹ ಕ್ಷೇತ್ರದಲ್ಲೇ ಹೀಗೆ ಆಗಿದೆ ಅಂದರೆ ಹೇಗೆ. ಒಬ್ಬ ಮಾಜಿ ಸಚಿವರು ದೂರು ಕೊಟ್ಟ ಮೇಲೆ ತನಿಖೆ ಆಗಬೇಕಲ್ಲ. ಈಗ ಬೇರೆ ಬೇರೆ ಆರೋಪಗಳಿಂದ ನುಣಚಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು. ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಕೆಲವು ಥರ್ಮಲ್ ಪವರ್ ಜನರೇಷನ್ ಕೈ ಕೊಟ್ಟಿದೆ. ನಾನು ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗ ಸಮಸ್ಯೆ ಸರಿಮಾಡುವ ಕೆಲಸ ಆಗುತ್ತದೆ. ಕೃಷಿ ಚಟುವಟಿಕೆಗೆ ವಿದ್ಯುತ್ ಕೊಡಬೇಕು. 

ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ

ಜೊತೆಗೆ ರೈತರಿಗೆ ಹಗಲು ಹೊತ್ತಿನಲ್ಲೇ 3ಪೇಸ್ ಕರೆಂಟ್ ಕೊಡಬೇಕು. ರಾತ್ರಿ ವೇಳೆ ಕಾಡಾನೆಗಳ ಕಾಟದಿಂದ ಅನಾನುಕೂಲ ಆಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ಗೆ ವೋಟ್ ಹಾಕಿದ ಬೂತ್‌ ಗಳಲ್ಲಿ ಮಾತ್ರ ಅಭಿವೃದ್ಧಿ ಎಂಬ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದರು, ಅನುದಾನವನ್ನು ಎಲ್ಲರಿಗೂ ಕೊಡುತ್ತೇವೆ. ಹಿಂದೆ ಬಿಜೆಪಿ-ಜೆಡಿಎಸ್ ಏನು ಮಾಡಿತ್ತೊ ಅದನ್ನು ಅವರು ಹೇಳಿದ್ದಾರೆ. ಅವರು ಒಳಗೊಳಗೆ ಮಾಡುತ್ತಿದ್ದರು. ಆದರೆ, ಇವರಿಗೆ (ಬಾಲಕೃಷ್ಣ) ಸ್ವಲ್ಪ ಬಾಯಿ ದೊಡ್ಡದು, ಹಾಗಾಗಿ ಬಾಯ್ಬಿಟ್ಟು ಹೇಳಿದ್ದಾರೆ ಎಂದರು. ಈ ವೇಳೆ ಶಾಸಕರಾದ ಇಕ್ಬಾಲ್ ಹುಸೇನ್‌ , ಬಾಲಕೃಷ್ಣ ಇತರರಿದ್ದರು.

Latest Videos
Follow Us:
Download App:
  • android
  • ios