ರೇವಣ್ಣ ಕುಟುಂಬ ಜನರನ್ನು ಹೆದರಿಸಿ ಬೆದರಿಸಿ ಗೆಲ್ಲುತ್ತಿದ್ದಾರೆ: ಸಂಸದ ಡಿ.ಕೆ.ಸುರೇಶ್‌

ಕ್ಷೇತ್ರದಲ್ಲಿನ ದೈತ್ಯ ಶಕ್ತಿಗಳು ನಿಮ್ಮನ್ನು ಹೆದರಿಸಿ, ಬೆದರಿಸಿ, ಅಡಿಯಾಳಾಗಿ ಇಟ್ಟುಕೊಂಡು, ಕೆಲಸ ಮಾಡುವ ವ್ಯವಸ್ಥೆಯ ವಿರುದ್ಧ ಷಡ್ಯಂತರ ನಿರ್ಮಾಣ ಹಾಗೂ ಬಿರುಕನ್ನು ಉಂಟು ಮಾಡುತ್ತಾ, ಬೇರೆ ಬೇರೆ ರೀತಿಯ ಆಮಿಷ ತೋರುವ ಮೂಲಕ ಕಳೆದ 25 ವರ್ಷಗಳಿಂದ ಗೆದ್ದಿದ್ದಾರೆ.

MP DK Suresh Slams On HD Revanna At Hassan gvd

ಹೊಳೆನರಸೀಪುರ (ಏ.03): ಕ್ಷೇತ್ರದಲ್ಲಿನ ದೈತ್ಯ ಶಕ್ತಿಗಳು ನಿಮ್ಮನ್ನು ಹೆದರಿಸಿ, ಬೆದರಿಸಿ, ಅಡಿಯಾಳಾಗಿ ಇಟ್ಟುಕೊಂಡು, ಕೆಲಸ ಮಾಡುವ ವ್ಯವಸ್ಥೆಯ ವಿರುದ್ಧ ಷಡ್ಯಂತರ ನಿರ್ಮಾಣ ಹಾಗೂ ಬಿರುಕನ್ನು ಉಂಟು ಮಾಡುತ್ತಾ, ಬೇರೆ ಬೇರೆ ರೀತಿಯ ಆಮಿಷ ತೋರುವ ಮೂಲಕ ಕಳೆದ 25 ವರ್ಷಗಳಿಂದ ಗೆದ್ದಿದ್ದಾರೆ. ಇಂದು ನೀವುಗಳು ಕಾಂಗ್ರೆಸ್‌ ಪಕ್ಷಕ್ಕೆ ಕೊಡುವ ಶಕ್ತಿಯಿಂದ ಇದಕ್ಕೆಲ್ಲ ತಕ್ಕ ಉತ್ತರವನ್ನು ನೀವು ನೀಡಬಹುದಾಗಿದೆ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ಪಟ್ಟಣದ ಜಯಲಕ್ಷ್ಮೇ ಮಿಲ್‌ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ಶ್ರೇಯಸ್‌ ಎಂ.ಪಟೇಲ್‌ ಅವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಘೋಷಣೆಯಂತೆ 200 ಯೂನಿಟ್‌ ಉಚಿತ ವಿದ್ಯುತ್‌, ಮನೆ ಯಜಮಾನಿಗೆ ಮಾಸಿಕ 2 ಸಾವಿರ ರು.. ಜತೆಗೆ ಅನ್ನ ಭಾಗ್ಯದ ಯೋಜನೆಯ ಅಕ್ಕಿ 10ಕೆಜಿ ನೀಡುತ್ತೇವೆ, ನುಡಿದಂತೆ ನಡೆಯುವ ಏಕೈಕ ಕಾಂಗ್ರೆಸ್‌ ಪಕ್ಷ ಭರವಸೆಯನ್ನು ಈಡೇರಿಸುತ್ತದೆ. ಚುನಾವಣೆ ಸಂದರ್ಭದಲ್ಲಿ ನೀಡುವ ಹಣಕ್ಕಿಂತ ಕಾಂಗ್ರೆಸ್‌ ಪಕ್ಷ ಭರವಸೆಯಂತೆ ವರ್ಷಕ್ಕೆ 24 ಸಾವಿರ ರು. ನೀಡುತ್ತದೆ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್‌ ವಿಶ್ವಾಸ

ನಿಂಬೆಹಣ್ಣು ಕೆಲಸ ಮಾಡಲ್ಲ: ಯಾವುದೇ ನಿಂಬೆಹಣ್ಣು ಕೆಲಸ ಮಾಡೊಲ್ಲ, ಈಗಾಗಲ್ಲೆ ನಿಂಬೆಹಣ್ಣು ಉಲ್ಟಾ ಹೊಡೆಯಲು ಪ್ರಾರಂಭವಾಗಿದೆ, ಇಂದು ಮಾಜಿ ಸಚಿವ ದಿ. ಜಿ.ಪುಟ್ಟಸ್ವಾಮಿಗೌಡರ ಮೇಲೆ ಕಾರ್ಯಕರ್ತರು ಇಟ್ಟಿರುವ ಪ್ರೀತಿಯನ್ನು ಇಂದು ಕಾಣಬಹುದಾಗಿದೆ ಮತ್ತು ಶ್ರೇಯಸ್‌ ಪಟೇಲ್‌ ಮದುವೆಯಾಗಿ ಮನೆಗೆ ಲಕ್ಷ್ಮಿ ಕರೆ ತಂದಿದ್ದಾರೆ. ಅದೇ ರೀತಿ ವಿಜಯಲಕ್ಷ್ಮಿಯನ್ನು ನೀವು ಮನೆಗೆ ಕಳುಹಿಸಿ ಕೊಡಬೇಕೆಂದು ಕರೆ ಕೊಟ್ಟರು. ಕಾಂಗ್ರೆಸ್‌ ಪಕ್ಷದ ಪರಾಜಿತ ಅಭ್ಯರ್ಥಿ ಅನುಪಮ ಮಹೇಶ್‌ ಮಾತನಾಡಿ, ನನ್ನ ಮಾವ ದಿ. ಜಿ.ಪುಟ್ಟಸ್ವಾಮಿಗೌಡರು ಹಾಗೂ ನನ್ನನ್ನು ಎರಡು ಬಾರಿ ಸೋಲಿಸಿದ್ದೀರಿ, ಆದರೆ ನನ್ನ ಪುತ್ರ ಶ್ರೇಯಸ್‌ ಪಟೇಲ್‌ ಅವರನ್ನ ನಿಮ್ಮ ಮಡಿಲಿಗೆ ಹಾಕಿದ್ದೇನೆ. ನನಗಾಗಿರುವ ಅನ್ಯಾಯವನ್ನು ನೀವು ಸರಿ ಪಡಿಸಿ, ಅವನನ್ನು ಗೆಲ್ಲಿಸುವಂತೆ ಕಣ್ಣೀರು ಹಾಕಿದರು.

ಹೆಚ್ಚಿನ ಲೀಡ್‌ ನೀಡಿ ಗೆಲ್ಲಿಸುವ ಹೊಣೆ ನಿಮ್ಮದು: ಬಾಲಚಂದ್ರ ಜಾರಕಿಹೊಳಿ

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶ್ರೇಯಸ್‌ ಎಂ.ಪಟೇಲ್‌ ಮಾತನಾಡಿ, ಪಕ್ಷದ ನಾಯಕರ ಭರವಸೆ ಮತ್ತು ನಿಮ್ಮಗಳ ಪ್ರೀತಿ ವಿಶ್ವಾಸಕ್ಕೆ ಸೋತು ಚುನಾವಣೆಗೆ ಸ್ಪ​ರ್ಧಿಸಿದ್ದೇನೆ. ಸಾಕಷ್ಟುಸೋಲನ್ನು ಕಂಡಿರುವ ನಮಗೆ ಒಮ್ಮೆ ಜಯ ತಂದು ಕೊಡಿ, ನಿಮ್ಮ ಮನೆಯ ವಾಚ್‌ಮನ್‌ ತರಹ ಕೆಲಸ ಮಾಡುತ್ತೇನೆ. ಯಾವುದೇ ಪರಿಸ್ಥಿತಿ ಬಂದರೂ ರಕ್ತ ಕೊಟ್ಟಾದರೂ ಸರಿ, ನಿಮಗೆ ಅನ್ಯಾಯವಾಗಲು ನಾ ಬಿಡೊಲ್ಲ, ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನ್ನ ಗೆಲುವಿಗೆ ಶ್ರಮಿಸುವ ಜತೆಗೆ ನನ್ನ ಗೆಲ್ಲಿಸುತ್ತೀರ ಎಂಬ ನಂಬಿಕೆ ನನಗಿದೆ ಎಂದು ನುಡಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ್ಮಣ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಟಿ.ಲಕ್ಷ್ಮಣ, ಕಾಂಗ್ರೆಸ್‌ ಮುಖಂಡರಾದ ಅನಿಲ್‌ ಕುಮಾರ್‌, ವಿಶ್ವನಾಥ್‌, ದುದ್ದ ವಿಶ್ವನಾಥ್‌, ಎಚ್‌.ವಿ.ಪುಟ್ಟರಾಜು, ರಾಜೇಶ್‌, ಮುಜಾಹಿದ್‌, ಎಚ್‌.ಕೆ.ಹರೀಶ್‌, ಐ.ಕೆ.ರಮೇಶ್‌, ಓಲೆ ಕುಮಾರ್‌, ಉಮೇಶ್‌ ಇತರರು ಇದ್ದರು.

Latest Videos
Follow Us:
Download App:
  • android
  • ios