ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್ ವಿಶ್ವಾಸ
ಬಿಜೆಪಿಯ ಡಂಬಲ್ ಎಂಜಿನ್ ಸರ್ಕಾರದ ಈ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಡಿನಲ್ಲಿ ರಾಜಯೋಗವಿತ್ತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಯ ಸುವರ್ಣಯುಗ ಪುನಾರಂಭ ಆಗಲಿದೆ ಎಂದು ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ (ಏ.02): ಬಿಜೆಪಿಯ ಡಂಬಲ್ ಎಂಜಿನ್ ಸರ್ಕಾರದ ಈ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಡಿನಲ್ಲಿ ರಾಜಯೋಗವಿತ್ತು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿಯ ಸುವರ್ಣಯುಗ ಪುನಾರಂಭ ಆಗಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ತಿಕೋಟಾ ತಾಲೂಕಿನ ಹೊನವಾಡ, ಕೋಟ್ಯಾಳ ಮತ್ತು ಹರನಾಳ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡ ಅವರು ಹೊನವಾಡ ಗ್ರಾಮಸ್ಥರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಕೈಗೊಂಡ ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳು ಉತ್ತಮ ಫಲ ನೀಡುತ್ತಿದ್ದು, ರೈತರ ಆದಾಯ, ವ್ಯಾಪಾರ ವಹಿವಾಟು ಹತ್ತು ಪಟ್ಟು ಹೆಚ್ಚಾಗಿದೆ.
ಇಲ್ಲಿನ ಜನರ ಆರ್ಥಿಕ ಸ್ಥಿತಿ ಸುಧಾರಿಸಿ ಸುಖ ಸಂಸಾರ ನಡೆಸಲು ಸಾಧ್ಯವಾಗಿದೆ. , ಸೂರ್ಯ, ಚಂದ್ರ ಇರುವವರೆಗೆ ಈ ಭಾಗದ ಜನರ ಬದುಕು ಹಸನಾಗಿರಿಸಲು ಹೊನ್ನದ ರೂಪದಲ್ಲಿ ನೀರು ನೀಡಿದ್ದೇನೆ. ನಾನು ಮಾಡಿದ ಕೆಲಸ ನೋಡಿ ಮತ ಹಾಕಿ ಎಂದು ಮನವಿ ಮಾಡಿದರು. ಈ ಸಲ ಪ್ರತಿ ಪಕ್ಷದಲ್ಲಿದ್ದರೂ ಶಕ್ತಿಮೀರಿ ಕೆಲಸ ಮಾಡಿದ ಸಂತೃಪ್ತಿ ಇದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಒಂದು ಸಾವಿರ ಕಿಮೀ ಮುಖ್ಯ ಕಾಲುವೆ ನಿರ್ಮಿಸಿದ್ದೇನೆ. ಈಗಿನ ಸರ್ಕಾರದಲ್ಲಿ ಒಂದು ಕಿಮೀ ಕಾಲುವೆ ಆಗಿಲ್ಲ. ಹೊನವಾಡ ಈಗ ಅಭಿವೃದ್ಧಿಯಿಂದಾಗಿ ಹೊನ್ನವಾಡ ಆಗಿದೆ ಎಂದು ಹೇಳಿದರು.
ಯಡಿಯೂರಪ್ಪ ನನ್ನ ತಂದೆ ಸಮಾನ, ನಮ್ಮ ಮೇಲೆ ಅವರಿಗೆ ಬಹಳ ಪ್ರೀತಿ: ಸಚಿವ ನಾರಾಯಣಗೌಡ
ಡಾ.ಬಿ.ಆರ್.ಅಂಬೇಡ್ಕರ ಅವರ ನಂತರ ಮಲ್ಲಿಕಾರ್ಜುನ ಖರ್ಗೆಯವರು ಸಮಾಜದಲ್ಲಿ ದೊಡ್ಡ ನಾಯಕರಾಗಿ ಬೆಳೆದು ಈಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸಿ, ಅಧಿಕಾರಕ್ಕೆ ತಂದರೆ ಖರ್ಗೆಯವರ ಕೈ ಬಲ ಪಡಿಸಿದಂತಾಗುತ್ತದೆ. ಸಂವಿಧಾನ ಬದಲಾಯಿಸುವುದಾಗಿ ಹೇಳುವ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಹತ್ತಿರ ಬಿಟ್ಟುಕೊಳ್ಳಬಾರದು ಎಂದು ಹೇಳಿದರು. ಹೊನವಾಡದಲ್ಲಿ ಎಂ.ಬಿ.ಪಾಟೀಲರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪುಳಕಿತಳಾಗಿ ದೌಡಾಯಿಸಿದ ವೃದ್ಧೆ ಕಾಶೀಬಾಯಿ ಕನಮಡಿ ಶಾಸಕರನ್ನು ಭೇಟಿ ಮಾಡಿ, ಜಗವೆಲ್ಲ ನೀರು ಮಾಡಿದ್ದೀರಿ ಸಾಹೇಬರ. ನೀವು ಹೆಚ್ಚಿನ ಮತಗಳಿಂದ ಆರಿಸಿ ಬರುತ್ತೀರಿ ಎಂದು ಕೈ ಹಿಡಿದು ನಮಸ್ಕರಿಸಿ, ಆರ್ಶೀವದಿಸಿದ್ದು ಗಮನಸೆಳೆಯಿತು.
ಮುಖಂಡರಾದ ಅರವಿಂದ ಮಾಲಗಾರ ಹಾಗೂ ಭೀಮನಗೌಡ ಪಾಟೀಲ ಮಾತನಾಡಿ, ಎಂ.ಬಿ.ಪಾಟೀಲರು, ನಮ್ಮೂರಿಗೆ ಡಾಂಬರ್ ರಸ್ತೆ, ಸಿಸಿರಸ್ತೆ ಮತ್ತು ಕುಡಿಯುವ ನೀರು ಸೇರಿದಂತೆ ಸಕಲ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ನಾವು ಕೇಳದಿದ್ದರೂ ಜಿಲ್ಲಾ ಮತ್ತು ರಾಜ್ಯ ಮಟ್ಟದ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಬೆಂಬಲಿಸೋಣ. ಅವರಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದು ಹೇಳಿದರು.
ಬಿಜೆಪಿ ಸರ್ಕಾರ ಪತನಗೊಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ: ಸತೀಶ್ ಜಾರಕಿಹೊಳಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ವಿಜಯಕುಮಾರ ಹಿರೇಮಠ, ದತ್ತ ಮೊಹಿತೆ, ಅರವಿಂದ ಮಾಲಗಾರ, ಧರೆಪ್ಪ, ಸಿದ್ದು ಬೆಳಗಾವಿ, ಶಂಕರ ಪಡತರೆ, ಧರೇಪ್ಪ ಚಾವರ, ಶಂಕರ ಪಡತರೆ, ಶರಣು ಗಡದೆ, ಪ್ರಶಾಂತ ತಳಕೇರಿ, ದುಂಡಪ್ಪ ವಾಲಿಕಾರ, ಭೀಮಣ್ಣ ಬಳೂಚಿ, ಅಡಿವೆಪ್ಪ ಸಾಲಗಲ್, ಸುರೇಶ ಪಾಟೀಲ, ಶಾಮು ಬಡಳ್ಳಿ, ಶೈಲೇಂದ್ರ ಭಾವಿಮನಿ, ಸುನೀಲ ತುದಿಗಾಲ, ಧರೆಪ್ಪ ಎಚ್.ಇ, ಸದಾಶಿವ ಚಿಗದೋಳ, ಸಂಜು ಕಳ್ಳಿಮನಿ, ಕಾಶಿನಾಥ ಕುಂಬಾರ, ಭೀಮನಗೌಡ ಪಾಟೀಲ, ಕಾಶಿನಾಥ ಪಾಟೀಲ ನೀಲಕಂಠ ಅಳ್ಳೋಳ್ಳಿ, ಮಾಹಾದೇವ ಹೊಸಟ್ಟಿ, ಈಶ್ವರ ಅಳ್ಳೋಳ್ಳಿ, ಅಪ್ಪಾಸಾಬ ಮೊಕಾಶಿ, ರೂಪಯ್ಯ ಮಠಪತಿ, ಶ್ರೀಶೈಲ ರಾಮತೀರ್ಥ, ಮಹಾದೇವ ಕೋಟಿ, ಶಿವಾನಂದ ವಾಂಗಿ, ಶಿವುಗೌಡ ಕಾಖಂಡಕಿ, ಸಂತೋಷ ಅವಟಿ, ಹರನಾಳ ಗ್ರಾಮದ ಮುಖಂಡರಾದ ವಿಠ್ಠಲ ಖೈರವ, ಕಾಸಪ್ಪ ಪೂಜಾರಿ, ಸಂಜು ಖೈರವ, ಕಲ್ಲಪ್ಪ ಖೈರವ, ಅಶೋಕ ಗೋಡ್ಸೆ, ಲಕ್ಷ್ಮಣ ಖೈರವ ಮುಂತಾದವರು ಉಪಸ್ಥಿತರಿದ್ದರು.