ಮಾಗಡಿ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನ ಅದೆಷ್ಟೋ ಹಳ್ಳಿಗಳಿಗೆ ಶಾಸಕರು ಭೇಟಿಯನ್ನೂ ನೀಡಿಲ್ಲ ಎಂದು ಶಾಸಕ ಎ.ಮಂಜು​ನಾಥ್‌ ವಿರುದ್ಧ ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ ನಡೆ​ಸಿ​ದರು. 

ಕುದೂರು (ಮಾ.12): ಮಾಗಡಿ ಶಾಸಕರು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ತಾಲೂಕಿನ ಅದೆಷ್ಟೋ ಹಳ್ಳಿಗಳಿಗೆ ಶಾಸಕರು ಭೇಟಿಯನ್ನೂ ನೀಡಿಲ್ಲ ಎಂದು ಶಾಸಕ ಎ.ಮಂಜು​ನಾಥ್‌ ವಿರುದ್ಧ ಸಂಸದ ಡಿ.ಕೆ.ಸುರೇಶ್‌ ವಾಗ್ದಾಳಿ ನಡೆ​ಸಿ​ದರು. ಕುದೂರು ಶ್ರೀ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕುದೂರು ಹೋಬಳಿ ಮತ್ತು ತಿಪ್ಪಸಂದ್ರ ಹೋಬಳಿ ಜನರ ಸಮಾವೇಶದಲ್ಲಿ ಮಾತನಾಡಿದ ಅವರು, ಶಾಸಕರು ಬರುವುದು ಕೇವಲ ಗುದ್ದಲಿಪೂಜೆಗಳಿಗೆ ಮಾತ್ರ. ಕೋವಿಡ್‌ ಬಂದು ತಾಲೂಕು ಸಂಕಷ್ಟದಲ್ಲಿದ್ದಾಗ ಶಾಸಕರು ಬರಲಿಲ್ಲ. ಬದಲಿಗೆ ಜನರ ನೆರವಿಗೆ ನಿಂತದ್ದು ಬಾಲಕೃಷ್ಣ ಎಂಬುದನ್ನು ಮರೆಯಬಾರದು. ಎರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೂ ಮಾಗಡಿಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ನನಗೂ ಬಾಲಕೃಷ್ಣರಿಗೂ ಯಾವ ಮುನಿಸಿಲ್ಲ: ಕೆಪಿ​ಸಿಸಿ ಉಪಾ​ಧ್ಯಕ್ಷ ಎಚ್‌.ಎಂ.​ರೇ​ವಣ್ಣ ಮಾತ​ನಾ​ಡಿ, ಮಾಗಡಿ ತಾಲೂಕಿನಲ್ಲಿ ಯಾವುದೋ ಒಂದು ವರ್ಗ ನನಗೂ ಬಾಲಕೃಷ್ಣರಿಗೂ ಭಿನ್ನಾಭಿಪ್ರಾಯವಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಬಾಲಕೃಷ್ಣ ಕಾಂಗ್ರೆಸ್‌ಗೆ ಬರುವ ಮುನ್ನ ಇಬ್ಬರು ವಿವಿಧ ಪಕ್ಷದಲ್ಲಿದ್ದವರು ಆಗ ಚುನಾವಣೆಯಲ್ಲಿ ನಾವು ಎದುರಾಳಿಗಾಗಿದ್ದೆವು. ಆದರೆ, ಈಗ ಇಬ್ಬರೂ ಕಾಂಗ್ರೆಸ್ಸಿನ ಒಂದೇ ಮನೆಯಲ್ಲಿದ್ದೇವೆ. ಚೆನ್ನಾಗಿದ್ದೇವೆ. ಯಾವುದೇ ಗಾಸಿಪ್‌ಗಳಿಗೆ ಕಿವಿಕೊಡದೆ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಲು ಮನವಿ ಮಾಡಿ, ಜೆಡಿಎಸ್‌ ಪಕ್ಷ ಇಸ್ಪೀಟ್‌ ಆಟದಲ್ಲಿ ಜೋಕರ್‌ ಇದ್ದಂತೆ. ಅಧಿ​ಕಾ​ರ​ಕ್ಕಾಗಿ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದರು.

ಬಿಜೆಪಿ ಯಾತ್ರೆಗೆ ಭಾರಿ ಬೆಂಬಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇದೇ ವೇಳೆ ತಿಪ್ಪಸಂದ್ರ ಹೋಬಳಿ ಜೆಡಿಎಸ್‌ ಕಾರ‍್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮ್‌ ಕೇಸಾಪುರ್‌ ಸುಗಮ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಧಾನ ಪರಿ​ಷತ್‌ ಸದಸ್ಯಎಸ್‌.ರವಿ, ರಾಜ್ಯಸಭಾ ಸದಸ್ಯ ಚಂದ್ರಶೇಖರ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ನಲಪಾಡ್‌, ನರಸಿಂಹಮೂರ್ತಿ, ಮಂಜೇಶ್‌ ಕುಮಾರ್‌, ಶಶಾಂಕ್‌, ಭಾಗ್ಯಮ್ಮ ಚಿಕ್ಕರಾಜ್‌, ಕೆ.ಬಿ.ಬಾಲರಾಜ್‌, ಕಲ್ಪನಾಶಿವಣ್ಣ, ದೀಪಾಮುನಿರಾಜ್‌, ಅಶೋಕ್‌, ಧನಂಜಯ, ಕೆ.ಬಿ.ಚಂದ್ರಶೇಖರ್‌, ಶಿವಪ್ರಸಾದ್‌, ಪ್ರಕಾಶ್‌ ಉಪ​ಸ್ಥಿ​ತ​ರಿ​ದ್ದರು.

ಒಗ್ಗಟ್ಟಿನಿಂದ ಕಾಂಗ್ರೆಸ್‌ ಬೆಂಬಲಿಸಿ: ಕಾಂಗ್ರೆಸ್‌ ಪಕ್ಷದಲ್ಲಿ 25 ವರ್ಷಗಳ ನಂತರ ಒಕ್ಕಲಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಉನ್ನತ ಸ್ಥಾನ ದೊರೆತಿದೆ. ಹೀಗಾಗಿ ನಮ್ಮ ಸಮುದಾಯ ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಲು ಮುಂದಾಗಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಪಟ್ಟಣದ ಹೊರವಲಯದ ಕಾರ್ಮೆಲ್‌ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಎಐಸಿಸಿ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿ ಎಸ್‌.ಎಂ.ಕೃಷ್ಣ ನಂತರ ಒಕ್ಕಲಿಗ ಸಮಾಜಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆಯಾಗಿದ್ದಾರೆ. 

ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದ ಜನರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಪಕ್ಷ ಬೆಂಬಲಿಸಿದರೆ ನಮ್ಮ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ದೊರೆಯಬಹುದು. ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ಸರ್ಕಾರದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಉನ್ನತ ಸ್ಥಾನ ದೊರೆಯಲಿದೆ ಎಂದು ಹೇಳಿದರು. ವಿದ್ಯಾರ್ಥಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್‌ ಮತ್ತು ಪಿ.ಎಂ.ನರೇಂದ್ರಸ್ವಾಮಿ ಸ್ನೇಹ ಸಂಬಂಧ ಉತ್ತಮವಾಗಿದ್ದು, ವಿವಿಧ ವಿಭಾಗದಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಕನಕಪುರ ಮತ್ತು ಮಳವಳ್ಳಿ ಬೇರೆ ಬೇರೆಯಲ್ಲ. ನಮಗೆ ಎರಡೂ ಒಂದೇ. ಈ ಭಾಗದ ಅಭಿವೃದ್ಧಿಗೆ ಪಕ್ಷದ ಮುಖಂಡರ ಜೊತೆ ಸದಾ ನಿಲ್ಲುವೆ. ಮಳವಳ್ಳಿ ಕ್ಷೇತ್ರ ಕನಕಪುರ ಲೋಕಸಭೆ ಸೇರಬೇಕು ಎನ್ನುವುದು ನನ್ನ ಬಯಕೆ. 

ಸ್ಮಾರ್ಟ್‌ ವರ್ಚುವಲ್‌ ಕ್ಲಿನಿಕ್‌ಗೆ ಸಿಎಂ ಚಾಲನೆ: ಅಗತ್ಯವಾದರೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫಾರಸ್ಸು

ನಾನು ರಾಜಕಾರಣದಲ್ಲಿ ಇರುವುದೊಳಗೆ ಮಳವಳ್ಳಿ ಮತ್ತು ಹನೂರು ಕ್ಷೇತ್ರಗಳ ನಮ್ಮ ವ್ಯಾಪ್ತಿಗೆ ಸೇರಿದರೆ ಬಹಳ ಸಂತೋಷ ಪಡುವೆ ಎಂದು ಹೇಳಿದರು. ಎಐಸಿಸಿ ಸದಸ್ಯ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಅತಿ ಹೆಚ್ಚು ಒಕ್ಕಲಿಗರು ಇರುವ ಜಿಲ್ಲೆಯಲ್ಲಿ ಸಾಹುಕಾರ್‌ ಚೆನ್ನಯ್ಯ ಮತ್ತು ಎಸ್‌.ಎಂ.ಕೃಷ್ಣ ಅಂತ ನಾಯಕರು ಬೆಳೆದಿದ್ದು, ಇತರೆ ಸಮಾಜದೊಂದಿಗೆ ಸಹಬಾಳ್ವೆ ಮತ್ತು ಸಮನ್ವದೊಂದಿಗೆ ಒಗ್ಗಟ್ಟಿನಿಂದ ಎಲ್ಲರನ್ನು ಕರೆದುಕೊಂಡು ಹೋಗುತ್ತಿದೆ. ಎಸ್‌.ಎಂ..ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹಳೆ ಮೈಸೂರಿನ 110 ಸ್ಥಾನಗಳಲ್ಲಿ ಕಾಂಗ್ರೆಸ್‌ 80 ಸ್ಥಾನ ಗೆದ್ದಿತ್ತು. ಈ ಬಾರಿ ಡಿ.ಕೆ.ಶಿವಕುರ್ಮಾ ಅವರಿಗೂ ಉನ್ನತ ಸ್ಥಾನ ದೊರೆಯಲಿದೆ ಎಂದು ಹೇಳಿದರು.