ಭೋಪಾಲ್, (ಅ.30): ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಕಮಲ್ ನಾಥ್ ಅವರಿಗೆ ಚುನಾವಣಾ ಪ್ರಚಾರ ನಡೆಸಲು ಆಯೋಗ ನಿರ್ಬಂಧಿಸಿದೆ.

ಕಮಲ್ ನಾಥ್ ಅವರು ಸತತವಾಗಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗ ಕ್ರಮ ಕೈಗೊಂಡಿದ್ದು ಸ್ಟಾರ್ ಪ್ರಚಾರಕರ ಪಟ್ಟಿ ಪಟ್ಟಿಯಿಂದ ಅವರನ್ನು ಕೈಬಿಡಲಾಗಿದೆ.

ಬಿಜೆಪಿ ಸಚಿವೆಯನ್ನು ಐಟಂ ಗರ್ಲ್ ಎಂದು ಕರೆದ ಮಾಜಿ ಮುಖ್ಯಮಂತ್ರಿಗೆ ನೋಟಿಸ್

ಒಂದು ವೇಳೆ ಅವರು ಚುನಾವಣೆ ಪ್ರಚಾರದಲ್ಲಿ ಭಾಗಿಯಾದಲ್ಲಿ ಆ ಕ್ಷೇತ್ರದ ಅಭ್ಯರ್ಥಿಗೆ ಕಮಲ್ ನಾಥ್ ಚುನಾವಣಾ ಪ್ರಚಾರದ ಎಲ್ಲಾ ವೆಚ್ಚವನ್ನು ಸೇರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಖಡಕ್ ಆಗಿ ಹೇಳಿದೆ.

ಬಿಜೆಪಿ ನಾಯಕಿ ಇಮ್ರತಿ ದೇವಿ ಅವರನ್ನು 'ಐಟಂ' ಎಂದು ಕರೆಯುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದ ಕಮಲ್ ನಾಥ್, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆಯೇ ಹೊರತು ಕ್ಷಮೆ ಕೋರಿಲ್ಲ.

ಮಧ್ಯಪ್ರದೇಶದ ಉಪಚುನಾಣೆ ಪ್ರಚಾರದಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಕಮಲ್ ನಾಥ್, ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದ್ದಾರೆ.