ದೇಶ ವಿಭಜನೆ ಮಾಡಿದ ಕಾಂಗ್ರೆಸ್ಸಿಂದ ಪಾಠ ಕಲಿಯಬೇಕಿಲ್ಲ: ಸಂಸದ ಬಿ.ವೈ.ರಾಘವೇಂದ್ರ
ಕಾಂಗ್ರೆಸ್‌ನಲ್ಲಿ ಕೊಟ್ಟಿರುವ ಸ್ಥಾನವನ್ನು ಉಳಿಸಿಕೊಳ್ಳಲು ಆಯನೂರು ಮಂಜುನಾಥ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ಶಿವಮೊಗ್ಗ (ಫೆ.15): ಕಾಂಗ್ರೆಸ್‌ನಲ್ಲಿ ಕೊಟ್ಟಿರುವ ಸ್ಥಾನವನ್ನು ಉಳಿಸಿಕೊಳ್ಳಲು ಆಯನೂರು ಮಂಜುನಾಥ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಈಶ್ವರಪ್ಪನವರು ಹೇಳಿದ್ದರಲ್ಲಿ ತಪ್ಪಿಲ್ಲ. ದೇಶ ವಿಭಜನೆ ಹೇಳಿಕೆ ನೀಡುವವರಿಗೆ ಸರಿಯಾದ ಕಾನೂನು ತನ್ನಿ ಎಂದಿದ್ದಾರೆ, ಅಷ್ಟೇ ಅವರೆಲ್ಲೂ ಕಡಿ ಬಡಿ ಎಂದಿಲ್ಲ.
ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಅವರು ಅವರದೇ ಭಾಷೆಯಲ್ಲಿ ಪ್ರಧಾನಿಗಳ ಬಗ್ಗೆ, ಈಶ್ವರಪ್ಪ ಬಗ್ಗೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎಂದು ಕುಟುಕಿದರು. ದೇಶವನ್ನು ವಿಭಜನೆ ಮಾಡಿದ್ದು, ಇದೇ ಕಾಂಗ್ರೆಸ್‌ನವರು. ಇಂಥವರಿಂದ ರಾಷ್ಟ್ರಭಕ್ತಿ ಕಲಿಯುವ ಅಗತ್ಯ ನಮಗಿಲ್ಲ, ಬಿಜೆಪಿಯಿಂದ ನಾಲ್ಕು ಸದನ ಆಯ್ಕೆ ಆಗಿದ್ದ ಆಯನೂರು ಮಂಜುನಾಥ್ ಅವರು ಈಗ ಕಾಂಗ್ರೆಸ್ ನಲ್ಲಿ ಯಾವುದೋ ಹುದ್ದೆ ಕೊಟ್ಟಿದ್ದಾರೆ ಅಂತ ಏನ್ ಏನೋ ಮಾತಾಡೋದಲ್ಲ ಈಶ್ವರಪ್ಪ ನವರ ಹೇಳಿಕೆ ತಿರುಚುವುದು ಸರಿಯಲ್ಲ ಎಂದರು.
ಸೋಮಣ್ಣಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿ: ಸಂಸದ ಬಸವರಾಜು
ಈಶ್ವರಪ್ಪನವರ ಸುದೀರ್ಘ ಸೇವೆ, ದೇಶದ ವಿಚಾರ ಬಂದಾಗ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಡಿ.ಕೆ.ಸುರೇಶ್ ಹೇಳಿಕೆಯನ್ನು ಆಯನೂರು ಮಂಜುನಾಥ್ ಸಮರ್ಥಿಸಿ ಕೊಂಡಿದ್ದಾರೆ. ಇದರಿಂದ ಕಪಟ ದೇಶಭಕ್ತರು ಯಾರು ಎಂದು ಗೊತ್ತಾಗುತ್ತದೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ಅವರ ಸಂದರ್ಭದಲ್ಲಿ ಏನ್ ಏನು ಮಾಡಿದ್ದಾರೆ.ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಟವರ್ ಗಳ ಬಗ್ಗೆ ಬಿಡಿ ಇದೆಲ್ಲ ಜನರಿಗೆ ಗೊತ್ತು. ಇದೀಗ ಇವರು ನಂಬಿ ಕೊಂಡ ಭಾಗ್ಯ ಕೈ ಕೊಡುತ್ತಿದೆ. ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದಾರೆ, ಆಯನೂರು ಮಂಜುನಾಥ್ ಅವರಿಗೆ ಅಭಿವೃದ್ಧಿ ಬಗ್ಗೆ ಕೇಳುವ ನೈತಿಕತೆಯೇ ಇಲ್ಲ ಎಂದು ಹೇಳಿದರು.
ಶರಾವತಿ ಸಮಸ್ಯೆ ಬಗೆಹರಿಸಲು ನಾವು ಸಹ ಹೋರಾಟ ಮಾಡುತ್ತಿದ್ದೇವೆ, ಸವಳಂಗ ರೋಡ್ ನಲ್ಲಿ ನಮ್ಮ ಅಪ್ಪನ ಆಸ್ತಿ ಇಲ್ಲ ಆದರೆ ಸಾಗರ ರಸ್ತೆಯಲ್ಲಿ ಆಯನೂರು ಮಂಜುನಾಥ್ ಫಾರ್ಮ್ ಹೌಸ್ ಇದೆಯಲ್ಲ ಎಂದು ಕಿಡಿಕಾರಿದರು. ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಇದನ್ನು ನಾವು ವಿರೋಧಿಸುತ್ತೇವೆ. ಈ ರಸ್ತೆಯಲ್ಲಿ ಎರಡೆರಡು ಟೋಲ್ ಆಗುತ್ತಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಜ್ಯೋತಿ ಪ್ರಕಾಶ್,ಅಣ್ಣಪ್ಪ,ಶಿವರಾಜ್ ಮತ್ತಿತರರು ಇದ್ದರು.
ಚಾಮುಂಡಿಬೆಟ್ಟ ಪ್ರಾಧಿಕಾರವೂ ಇಲ್ಲ, ಚಿತ್ರನಗರಿಯ ಸದ್ದು ಇಲ್ಲ: ಏಕತಾಮಾಲ್‌ಗೆ ಸಚಿವ ಸಂಪುಟ ಅನುಮೋದನೆ
ಆಯನೂರು, ಮಧು ಬಗ್ಗೆಯೂ ಕಿಡಿ: ವಿಐಎಸ್‌ಎಲ್ ಉಳಿಸಲು ನಮ್ಮ ಹೋರಾಟ ನಿರಂತರವಾಗಿದೆ, ಆಯನೂರು ಮಂಜುನಾಥ್ ನಮ್ಮ ಪಕ್ಷದ ಕಡೆ ಬೆರಳು ಮಾಡಿ ತೋರಿಸುವುದು ಬಿಡಬೇಕು. ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕು ಆ ಸಂದರ್ಭದಲ್ಲಿ ಉತ್ತರ ಕೊಡುತ್ತೇವೆ. ಅದೇ ರೀತಿ ಮಧು ಬಂಗಾರಪ್ಪ ಸಹ ಬಿಚ್ಚಿಡುತ್ತೇನೆ ಅನ್ನುತ್ತಾರೆ, ಸಮಯ ಬಂದಾಗ ನಾವು ಬಿಚ್ಚಿಡುತ್ತೇವೆ ಎಂದು ಗುಡುಗಿದರು.