ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪ ತೊಟ್ಟಿದ್ದ ಸಂಸದ ಅನಂತ ಕುಮಾರ್ ಹೆಗಡೆ!
ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪವನ್ನು ಸಂಸದ ಅನಂತ ಕುಮಾರ್ ಹೆಗಡೆ ತೊಟ್ಟಿದ್ದರು. ಜನವರಿ 22 ರಂದು ನೀಡಿದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಉತ್ತರ ಕನ್ನಡ (ಜ.25): ರಾಮಲಲ್ಲಾ ಪ್ರತಿಷ್ಠಾಪನೆ ದಿನ ಮಸೀದಿ ಕೆಡವುವ ಸಂಕಲ್ಪವನ್ನು ಸಂಸದ ಅನಂತ ಕುಮಾರ್ ಹೆಗಡೆ ತೊಟ್ಟಿದ್ದರು. ಜನವರಿ 22 ರಂದು ನೀಡಿದ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಹೌದು! ಶಿರಸಿಯ ಆಂಜನೇಯ ದೇವಸ್ಥಾನದಲ್ಲಿ ಅನಂತ ಕುಮಾರ್ ಹೆಗಡೆ ಈ ಹೇಳಿಕೆಯನ್ನು ನೀಡಿದ್ದರು. ಇಂದು ನಿಮ್ಮೆಲ್ಲರ ಪ್ರಯತ್ನದಿಂದ ಐತಿಹಾಸಿಕ ನಿರ್ಣಾಯಕ ಜಯ ಸಿಕ್ಕಿದೆ. ಈಗ ಮುಂದಿನ ಹೆಜ್ಜೆಯನ್ನು ಇಡಬೇಕಿದೆ ಕಾಶಿ ನಮ್ಮ ಕೈ ಯಲ್ಲಿ ಬರಬೇಕಿದೆ, ಮಥುರಾ ನಮ್ಮ ಕೈಯಲ್ಲಿ ಬರಬೇಕು. ಶಿರಸಿಯ ನಟರಾಜ ರಸ್ತೆಯಲ್ಲಿರುವ ದೊಡ್ಡ ಮಸಿದಿ ಅಲ್ಲಿ ವೀರ ವಿಠ್ಠಲ ದೇವಸ್ಥಾನ ಇತ್ತು. ಇಂದು ಕೂಡಾ ನಮ್ಮ ಲಾಯರ್ ಆ ಕೇಸ್ ಅನ್ನು ನಡೆಸುತ್ತಿದ್ದಾರೆ.
ಇಂತಹ ಸಾವಿರ ಸಾವಿರ ದೇವಸ್ಥಾನಗಳಿಗೆ ಅಪಮಾನ ಆಗಿದೆ. ಅಪಮಾನ ಸಹಿಸಿಕೊಂಡು ಕುಳಿತುಕೊಳ್ಳೋಕೆ ನಮ್ಮಿಂದ ಆಗಲ್ಲ. ಇಂದಿಲ್ಲ ನಾಳೆ ಇದಕ್ಕೆಲ್ಲ ಬಡ್ಡಿ ಸಮೇತ ವಸೂಲಿ ಮಾಡುವ ಕೆಲಸ ಆಗಬೇಕಿದೆ. ನಿವೇಲ್ಲರೂ ಹೋರಾಟ ಮಾಡಿದ್ರಿ, ಇಟ್ಟಂಗಿ ಕಳಿಸಿ ಕೊಟ್ರಿ, ನಿಮ್ಮ ಕೈಯಿಂದ ಧನ ಸಹಾಯ ಮಾಡಿದ್ರಿ. ನಿಮ್ಮೆಲ್ಲರ ಪ್ರಯತ್ನದಿಂದ ಭವ್ಯವಾದ ದೇವಸ್ಥಾನ ನಿರ್ಮಾಣ ಆಗಿ ಇಡೀ ದೇಶ ಅದನ್ನು ಸಂಭ್ರಮಿಸುತ್ತಿದೆ. ನಮ್ಮ ಧರ್ಮ ಸಂಸ್ಕೃತಿಗೆ ಎಲ್ಲಿ ಎಲ್ಲಿ ಅಪಮಾನ ಆಗಿದೆ ಅದಕ್ಕೆಲ್ಲಾ ವಾಪಸ್ ಮೆಟ್ಟಿ ನಿಲ್ಲಬೇಕು. ಈ ವೀರ ಸಂಕಲ್ಪವನ್ನು ನಿವೇಲ್ಲಾ ಮಾಡಬೇಕಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.
ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ: ಸಚಿವ ಸಂತೋಷ್ ಲಾಡ್ ಸೂಚನೆ
ಅಯೋಧ್ಯೆ ಒಂದು ವೀರೋಚಿತ ಇತಿಹಾಸ: ಮೂರವರೆ ಲಕ್ಷ ಜನರ ಬಲಿ ತೆಗೆದುಕೊಂಡ 500 ವರ್ಷಗಳ ಸುದೀರ್ಘ ಹೋರಾಟ ಇಂದು ತಾರ್ಕಿಕ ಅಂತ್ಯಕಂಡಿದೆ. ರಾಮ ಎಂಬ ಮಂತ್ರಕ್ಕೆ ಭಾವನೆಗಳು ಭಿತ್ತಿದಾಗ ಅದು ರಣಮಂತ್ರವಾಗುತ್ತೆ. ಇಂದು ಆ ಕಾರ್ಯವಾಗಿದೆ. ಇದಕ್ಕೆ ಅಯೋಧ್ಯೆ ಸಾಕ್ಷಿಯಾಗಿದ್ದು ಇದೊಂದು ವಿರೋಚಿತ ಇತಿಹಾಸ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ತಾಲೂಕಿನ ಕರ್ಕಿಯಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಕೇವಲ ರಾಮಮಂದಿರ ಉದ್ಘಾಟನೆಯಲ್ಲ. ಸಾವಿರ ವರ್ಷಗಳ ದೌರ್ಜನ್ಯದ ಪರಂಪರೆಗೆ ಅಂತ್ಯ ಹಾಡಿದ ಕ್ಷಣ.
ಈ ಮೂಲಕ ಹಿಂದೂ ಸಮಾಜ ತಲೆ ಎತ್ತಿ ನಿಂತಿದೆ. ಒಮ್ಮೆ ಈ ಸಮಾಜ ಎದ್ದು ನಿಂತರೆ ಜಗತ್ತು ನಮ್ಮ ಕಾಲಿಗೆ ಬಿಳಲೇಬೇಕು. ರಾಮಮಂದಿರ ಉದ್ಘಾಟನೆಗಿಂತ ಮುಂಚೇನೆ ಜಗತ್ತು ಭಾರತದ ನೇತೃತ್ವವನ್ನು ಒಪ್ಪಿಕೊಳ್ಳಲು ತಯಾರಾಗಿಬಿಟ್ಟಿತ್ತು. ಇದು ಭಗವಂತನ ನಿರ್ಣಯ. ಸಾವಿರ ವರ್ಷದ ಅಪಮಾನದ ಬದುಕಿನಿಂದ ಈ ಸಮಾಜ ಹೊರಗಡೆ ಬರುತ್ತಿದೆ. ಈ ಸಮಾಜ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಬೇಕು ಎನ್ನುವುದು ಭಗವಂತನ ಸಂಕಲ್ಪ. ಆ ಸಂಕಲ್ಪಕ್ಕೆ ನಾವೆಲ್ಲ ಪುರಾವೆಗಳು, ಸಾಕ್ಷಿಗಳು ಇದಕ್ಕೆ ಹೆಮ್ಮೆ ಪಡಬೇಕು ಎಂದರು. ರಾಮಮಂದಿರ ಹಿಂದೂ ಸಮಾಜ ಕಟ್ಟಿರುವ ದೇವಸ್ಥಾನ, ಸರ್ಕಾರ ಕಟ್ಟಿರುವ ದೇವಸ್ಥಾನ ಅಲ್ಲ. ನಮ್ಮನ್ನು ಜಾತಿ, ಊರು, ಬಣ್ಣದ ಹೆಸರಿನಲ್ಲಿ ಒಡೆದಿದ್ದರು. ಇಂದು ಕೂಡ ಬಹುತೇಕ ಆ ಒಡಕಿನ ನಿದ್ದೆಯಿಂದ ಹೊರಗಡೆ ಬಂದಿಲ್ಲ.
ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಅಟ್ಟಹಾಸ: ಕಾಡಾನೆ ತುಳಿತಕ್ಕೆ ಮತ್ತೊಬ್ಬ ರೈತ ಬಲಿ!
ನಾನೊಬ್ಬ ಹಿಂದೂ ಎಂದು ಹೇಳಬೇಕಾದರೆ ನೆನಪು ಮಾಡಿಕೊಳ್ಳಬೇಕು. ನಮ್ಮನ್ನು ನಮ್ಮ ಪರಿಚಯವೇ ಇಲ್ಲದೆ ಇರುವ ರೀತಿಯಲ್ಲಿ ಹೊಡೆದು ಮಣ್ಣು ಮಾಡಬೇಕು ಎಂದು ಹೊರಟಿದ್ದರು. ಆದರೆ ಆ ಭಗವಂತನ ಸಂಕಲ್ಪ ಬೇರೆ ಇವತ್ತು. ಎದ್ದು ನಿಂತು ಕೊಂಡಿದ್ದೇವೆ ,ಗೆದ್ದು ನಿಂತುಕೊಂಡಿದ್ದೇವೆ. ಇನ್ನು ಯಾರಿಂದಲು ತಡೆಯಲು ಸಾಧ್ಯ ಇಲ್ಲ ಎಂದರು. ಹಿಂದೂ ಸಮಾಜ ಮಲಗಿದ್ದರೆ ಕುಂಭಕರ್ಣ, ಎದ್ದರೆ ರಣಭೈರವ. ಇದು ಅಂತ ಹಿಂದೂ ಸಮಾಜ ಎದ್ದು ನಿಂತುಕೊಳ್ಳಲು ಪ್ರಾರಂಭವಾಗಿದೆ. ಇನ್ನು ಮತ್ತೆ ನಮ್ಮನ್ನ ತಡೆಯಲು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯ ಇಲ್ಲ ಎಂದು ಹೇಳಿದರು.