ನಾನು ಅನಂತ್‌ಕುಮಾರ್ ಹೆಗಡೆ ಅಣ್ತಮ್ಮ ಇದ್ದಂಗೆ, ಹೆಬ್ಬಾರ್ ಯಾವಕಡೆ ಗೊತ್ತಾಗ್ತಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ
ನಾನು ಮತ್ತು ಅನಂತ್ ಕುಮಾರ್ ಹೆಗಡೆ ಅವರು ಅಣ್ಣ ತಮ್ಮನ ಹಾಗೆ. ನಾವಿಬ್ಬರೂ ಒಂದೇ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬಂದವರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬೆಂಗಳೂರು (ಏ.07): ನಾನು ಮತ್ತು ಅನಂತ್ ಕುಮಾರ್ ಹೆಗಡೆ ಅವರು ಒಂದೇ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬಂದವರು. ಅವರು 6 ಬಾರಿ ಸಂಸದರಾಗಿದ್ದವರು. ಅವರು ಕೂಡ ನಮ್ಮೊಂದಿಗೆ ಪ್ರಚಾರಕ್ಕೆ ಬರುವ ವಿಶ್ವಾಸ ನನಗೆ ಇದೆ. ನಾನು ಅನಂತ್ ಕುಮಾರ್ ಅಣ್ಣ ತಮ್ಮನ ಹಾಗೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
'ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದೊಂದಿಗೆ ಭಾನುವಾರ ಮಾತನಾಡಿದ ಅವರು, ನನಗೆ ಲೋಕಸಭಾ ಚುನಾವಣೆಯಲ್ಲಿ 6 ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಸಹಕಾರ ಬೇಕು. ಅವರ ಭೇಟಿಗೆ ಸಮಯ ಕೇಳಿದ್ದೇನೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ನಾನು ಅನಂತ್ ಕುಮಾರ್ ಒಂದೇ ವಿಚಾರದಲ್ಲಿ ಕೆಲಸ ಮಾಡಿಕೊಂಡು ಬಂದವರು. ಅವರು ಕೂಡ ಪ್ರಚಾರಕ್ಕೆ ಬರುವ ವಿಶ್ವಾಸ ನನಗೆ ಇದೆ. ನಾನು ಅನಂತ್ ಕುಮಾರ್ ಅಣ್ಣ ತಮ್ಮನ ಹಾಗೆ. ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಬರ್ತದೆ. ಅದೇ ರೀತಿ ನನ್ನ ಅನಂತ್ ಕುಮಾರ್ ನಡುವೆ ಅಭಿಪ್ರಾಯ ಬೇದ ಇರಬಹದು. ಅಣ್ಣ ತಮ್ಮನ ನಡುವೆ ಅದೆಲ್ಲಾ ಸಾಮಾನ್ಯ ಎಂದು ಹೇಳಿದರು.
ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಾರ ಕಡೆ ನಿಮ್ಮ ಬೆಂಬಲ ಸ್ಪಷ್ಟವಾಗಿ ಹೇಳಬೇಕು.ಕಳೆದ ಒಂದು ವರ್ಷಗಳಿಂದ ಅವರ ನಡೆ ನುಡಿ ಬಿಜೆಪಿ ಪರವಾಗಿಲ್ಲ ಎಂಬುದು ಗೋಚರವಾಗುತ್ತಿದೆ. ನೀವು ಯಾವುದೇ ಕಾರಣಕ್ಕೂ ಮತದಾರರಿಗೆ ಗೊಂದಲ ಮಾಡಬೇಡಿ. ಇದು ನಿಮಗೆ ಶೋಭೆ ತರೋದಿಲ್ಲ. ನಿಮ್ಮ ನಿರ್ಧಾರ ಸ್ಪಷ್ಟ ಮಾಡಿ. ಅವರೇ ಗೊಂದಲದಲ್ಲಿ ಇದ್ದಾರೊ ಏನೋ ಒಂದೂ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮತ್ತು ಹಿಂದುತ್ವವನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ. ಉತ್ತರ ಕನ್ನಡದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಆತಂಕ ಬೇಡ. ಕೆಲವರು ಆ ವರದಿ ಇಟ್ಕೊಂಡು ರಾಜಕೀಯ ಮಾಡಿದರು. ಉತ್ತರ ಕನ್ನಡ ಜಿಲ್ಲೆ ತುಂಬಾ ಅಭಿವೃದ್ಧಿ ಆಗಬೇಕಿದೆ. ಇಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರವಾಸೋದ್ಯಮ, ಸ್ಥಳೀಯ ಜನರಿಗೆ ಆರೋಗ್ಯಕ್ಕಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ ಎಂದರು.
3 ಸಂಸದರಿಂದ 5 ವರ್ಷದಲ್ಲಿ 55.88 ಕೋಟಿ ಅನುದಾನ: ಬಿಪ್ಯಾಕ್‌ನಿಂದ ವರದಿ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರು ಉತ್ತರಿಸಿ, ಕಾರವಾರದಲ್ಲಿ ಮೆಡಿಕಲ್ ಕಾಲೇಜು, ಸಿರಸಿಯಲ್ಲಿ 250 ಆಸ್ಪತ್ರೆ ಬೆಡ್ ಮಾಡಿದವರು ನಾವು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುನ್ನುಡಿ ಬರೆದಿದ್ದು, ಈಗಾಗಲೇ ಜಾಗ ಗುರುತಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಏನೂ ಮಾಡಿಲ್ಲವೆಂದು ಹೇಳಿದರು.