Asianet Suvarna News Asianet Suvarna News

ರಾಜ್ಯದಲ್ಲಿ ಶೇ.55ರಷ್ಟು ಮತದಾರರು ಕಾಂಗ್ರೆಸ್ ಪರ ಇದ್ದಾರೆ: ಮಧು ಬಂಗಾರಪ್ಪ

ರಾಜ್ಯದಲ್ಲಿ ಶೇಕಡಾ 55 ರಷ್ಟು ಮತದಾರರು ಕಾಂಗ್ರೆಸ್ ಪರ ಇದ್ದಾರೆ ಎಂದು  ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.

more than 55% of voters in the karnataka  are in favor of Congress says  Madhu Bangarappa  gow
Author
First Published Dec 16, 2022, 10:40 PM IST

ಹಾವೇರಿ (ಡಿ.16): ಹಾವೇರಿಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸುದ್ದಿಗೋಷ್ಟಿ ನಡೆಸಿ, ರಾಜ್ಯದಲ್ಲಿ ಶೇಕಡಾ 55 ರಷ್ಟು ಮತದಾರರು ಕಾಂಗ್ರೆಸ್ ಪರ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನನಗೆ ಪಕ್ಷದಿಂದ ಟಾಸ್ಕ್ ಕೊಟ್ಟಿದ್ದಾರೆ. ಜಿಲ್ಲಾವಾರು ಹಿಂದುಳಿದ ವರ್ಗಗಳ ಸಮಾವೇಶಗಳನ್ನ ಮಾಡುತ್ತೇವೆ. ಜನವರಿ ಅಥವಾ ಪೆಬ್ರವರಿ 15ರೊಳಗೆ ಜಿಲ್ಲಾಮಟ್ಟದ ಸಮಾವೇಶ ಮಾಡ್ತಿವಿ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ನಡೆಯುತ್ತದೆ. ರಾಹುಲ್ ಗಾಂಧಿಯವರು ರಾಜ್ಯಮಟ್ಟದ ಸಮಾವೇಶಕ್ಕೆ ಬರುತ್ತಾರೆ. ಹುಬ್ಬಳ್ಳಿ, ದಾವಣಗೆರೆ, ಅಥವಾ ಹಾವೇರಿಯಲ್ಲಿ ರಾಜ್ಯಮಟ್ಟದ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. 

ಇವರ ಮುಖಕ್ಕೆ ಒಂದು ಮನೆ ಕೊಡೊದಕ್ಕೆ ಆಗಲಿಲ್ಲ. ಗ್ರಾಮ ಪಂಚಾಯತ್ ಸದಸ್ಯರು ಮನೆಯಿಂದ ಹೊರ ಬರುವುದಕ್ಕೆ ಆಗ್ತಿಲ್ಲ. ಮೂರು ಜಿಲ್ಲೆಯವರಿಗೆ ಭತ್ತ ಬೆಳೆಯಲು ಪ್ರೋತ್ಸಾಹಧನ ಸರಕಾರ ಕೊಡ್ತಾಯಿದೆ. ಉತ್ತರ ಕರ್ನಾಟಕದ ರೈತರಿಗೂ ಪ್ರೋತ್ಸಾಹ ಧನ ಕೊಡಲಿ.  ನರೇಂದ್ರ ಮೋದಿಯವರು ಹೆಣ್ಣುಮಕ್ಕಳ ಕಣ್ಣೀರು ಒರೆಸುತ್ತೇವೆ ಅಂತಾ ಹೇಳಿ ಒಮ್ಮೆ ಪ್ರೀಯಾಗಿ ಗ್ಯಾಸ್ ಕೊಟ್ಟು ಈಗ ದರ ಹೆಚ್ಚು ಮಾಡಿ  ದಿನ ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತೆ ಮಾಡಿದ್ದಾರೆ. 

ಬಿಜೆಪಿ ಬದುಕಿದ್ರು ಸತ್ತು ಹೋಗಿದೆ. ಅವರ ನಂಬರ ಮೇಲೆ ಬಿಜೆಪಿಯವರು ಯಾರು ಸಿಎಂ ಆಗಿಲ್ಲ. ಅವರೆಲ್ಲ ವ್ಯಾವಹಾರಿಕವಾಗಿ ಬಂದವರು. ಇವರಿಗೆ ಮಾನ ಮರ್ಯಾದೆ ಇದೆನಾ, ಬರಿ ಹಸಿ ಸುಳ್ಳು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌: 
ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್‌ ಸಿಗುವ ಭರವಸೆ ಇದೆ ಎಂದು ಕಾಂಗ್ರೆಸ್‌ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ನಗರದ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಟಿಕೆಟ್‌ ಬಯಸಿ ಹಿಂದುಳಿದ ವರ್ಗಗಳ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಟಿಕೆಟ್‌ ಹಂಚಿಕೆ ವಿಚಾರ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಬಿಟ್ಟದ್ದು. ಈ ಬಗ್ಗೆ ಹೆಚ್ಚು ಹೇಳಲಾರೆ. ಆದರೂ, ಹಿಂದುಳಿದ ವರ್ಗದವರಿಗೆ ಹೆಚ್ಚು ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದರು.

ಹೆಚ್‌.ಡಿ.ಕೆ ಅಭಿಮಾನಿಗಳಿಗೆ ಡಬಲ್‌ ಸಂಭ್ರಮ: ಪಂಚರತ್ನ ಯಾತ್ರೆ ಜತೆಗೆ ಹುಟ್ಟುಹಬ್ಬದ ಖುಷಿ

ಒಬಿಸಿ ಮತಗಳು ನಾನಾ ಕಾರಣಕ್ಕೆ ಛಿದ್ರವಾಗಿವೆ. ಅವುಗಳನ್ನೆಲ್ಲಾ ಕಾಂಗ್ರೆಸ್ಸಿಗೆ ತರುವುದು ನನ್ನ ಜವಾಬ್ದಾರಿ. ಒಬಿಸಿ ಮತಗಳ ಪೈಕಿ ಶೇ.70 ಮತಗಳು ಕಾಂಗ್ರೆಸ್ಸಿನ ಜೊತೆಗಿವೆ. ಹಿಂದುಳಿದ ವರ್ಗಗಳ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಬೆಂಗಳೂರಿನಲ್ಲೇ ಕುಳಿತು, ಪಕ್ಷದ ಪದಾಧಿಕಾರಿಗಳನ್ನು ನೇಮಿಸುವುದು ತಪ್ಪು. ಈ ಕಾರಣಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗೂ ಭೇಟಿ ನೀಡಿ, ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪದಾಧಿಕಾರಿಗಳ ನೇಮಿಸಲಾಗುತ್ತಿದೆ ಎಂದು ಹೇಳಿದರು.

Ground Report : ವಿಜಯನಗರ ಜಿಲ್ಲೆಯಲ್ಲಿ ಕೈ-ಕಮಲ ಮಧ್ಯೆ ಪೈಪೊಟಿ: ಆನಂದ್‌ ಸಿಂಗ್‌ ವಿರುದ್ಧ ನಿಲ್ಲೋರು ಯಾರು?

ಕಾಂಗ್ರೆಸ್ಸಿಗೆ ಪ್ರಭಾವಿಗಳ ಸೇರ್ಪಡೆ:  ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಿ ನಾಯಕರು ಕಾಂಗ್ರೆಸ್ಸಿಗೆ ಬರುತ್ತಿದ್ದು, ಅನ್ಯ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಬರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ ಕಾಂಗ್ರೆಸ್‌ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು. ಕಾಂಗ್ರೆಸ್ಸಿನ ಅನೇಕ ಶಾಸಕರು ಬಿಜೆಪಿಗೆ ಹೋಗುತ್ತಾರೆಂಬುದಾಗಿ ಬಿಜೆಪಿಯವರು ಸುಳ್ಳು, ಗಾಳಿ ಸುದ್ದಿ ಹರಡುತ್ತಿದ್ದು, ಅನೇಕ ಕ್ಷೇತ್ರಗಳ ಪ್ರಭಾವಿ ನಾಯಕರೆ ಕಾಂಗ್ರೆಸ್ಸಿಗೆ ಸೇರ್ಪೆಡೆಯಾಗುತ್ತಿದ್ದಾರೆ. ಜೆಡಿಎಸ್‌ ಮುಖಂಡ ವೈ.ಎಸ್‌.ವಿ ದತ್ತಾರನ್ನು ಕಾಂಗ್ರೆಸ್ಸಿಗೆ ತರುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು

Follow Us:
Download App:
  • android
  • ios