ಮುಖ್ಯಮಂತ್ರಿ ಆಗೋದಕ್ಕೆ ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಮೂವರೂ ಚಡ್ಡಿ ಹೊಲಿಸಿಕೊಂಡು ಕೂತಾರ:  ಸಚಿವ ಕಾರಜೋಳ ವ್ಯಂಗ್ಯ

ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಆಗ್ತಿನಿ ಅಂತಾ ಯಾಂವ ಇಜಾರ್ ಹೊಲಿಸ್ಯಾನ, ಯಾಂವ ಪೈಜಾಮ್ ಹೊಲಿಸ್ಯಾನ, .ಯಾಂವ  ಪುಲ್ ಸೂಟ್  ಹೊಲಿಸ್ಯಾನ ಅನ್ನೂದು ಎಲ್ಲರಿಗೂ ಗೊತ್ತಿರೋ ವಿಚಾರ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದರು.

Minister govind karjol criticized on Congress leaders at bagalkote rav

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ (ಮಾ.27):- ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಆಗ್ತಿನಿ ಅಂತಾ ಯಾಂವ ಇಜಾರ್ ಹೊಲಿಸ್ಯಾನ, ಯಾಂವ ಪೈಜಾಮ್ ಹೊಲಿಸ್ಯಾನ, .ಯಾಂವ  ಪುಲ್ ಸೂಟ್  ಹೊಲಿಸ್ಯಾನ ಅನ್ನೂದು ಎಲ್ಲರಿಗೂ ಗೊತ್ತಿರೋ ವಿಚಾರ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol)ವ್ಯಂಗ್ಯ ಮಾಡಿದರು.

ಬಾಗಲಕೋಟೆ(Bagalkote) ನಗರದಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್(Congress) ನಲ್ಲಿ ಈಗಾಗಲೇ ಮುಖ್ಯಮಂತ್ರಿ ಆಗೋದಕ್ಕೆ ಬಹಳ ಉತ್ಸಾಹದಲ್ಲಿ ಮೂರು ಮಂದಿ ಚಡ್ಡಿ ಹೊಲಿಸಿಕೊಂಡು ಕೂತಿದ್ದಾರೆ. 93  ವರ್ಷದ ಶಾಮನೂರು ಶಿವಶಂಕ್ರಪ್ಪ(Shamanuru shivashankarappa)"ನಾನು ಮುಖ್ಯಮಂತ್ರಿ ಆಗ್ತಿನಿ" ಅಂತಾರ,  ಅಹಿಂದ ನಾಯಕ ಸಿದ್ದರಾಮಯ್ಯ(Siddaramaiah) 'ನಾ ಮುಖ್ಯಮಂತ್ರಿ' ಅಂತಾನ,  ಗೌಡ್ರ ಸಮಾಜದಾಗ ಹುಟ್ಟಿದಾಂವ ನಾ ಮುಖ್ಯಮಂತ್ರಿ ಅಂತಾನ, ನಾ ಏನು ಕಾಣದೆ ಐವತ್ತು ವರ್ಷ ಹಂಗ ಕಳೆದೆ; ರಾಜ್ಯದಲ್ಲಿ ನಾ ಸಿಎಮ್ ಅಂತ ದಲಿತ ನಾಯಕ ಖರ್ಗೆ(Mallikarjun kharge)ಹೇಳತಾರ, ಇಷ್ಟು ಮಂದಿ (ಚಡ್ಡಿ )ಇಜಾರ್ ಹೊಲಿಸಿಕೊಂಡು ಕುಳಿತಿದ್ದಾರೆ ಎಂದರು.

ಮುಳುಗಡೆ ನಗರ ಬಾಗಲಕೋಟೆಗೆ ಶಾಪ ವಿಮೋಚನೆ: ಚಂಡಿಗಡ ಮಾದರಿ ಅಭಿವೃದ್ಧಿಗೆ ಪಣ- ಗೋವಿಂದ ಕಾರಜೋಳ

 ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷ:

ಇನ್ನು ಜನರಿಗೆ ಸುಳ್ಳು ಹೇಳಿ ಮೋಸ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದ್ದು,
ಅದಕ್ಕಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವಸಾನ ಆಗಿದೆ. ಸ್ಕ್ರ್ಯಾಪ್ ಆಗಿ ಹೋಗಿದೆ. ಧೀಡ್ ತಿಂಗಳಲ್ಲಿ ಚುನಾವಣೆ ಆದ ಮೇಲೆ‌ ಇನ್ನು ಕೆಳಗೆ ಹೋಗುತ್ತದೆ ಎಂದು ಸಚಿವ ಕಾರಜೋಳ ಭವಿಷ್ಯ ನುಡಿದರು. ಇದೇ ವೇಳೆ ನಮ್ಮಲ್ಲಿ ಯಾರು ಮುಖ್ಯಮಂತ್ರಿ ಆಗ್ತಿವಿ ಅಂತ ಹೇಳಿಲ್ಲ, ನಮ್ಮ ಸರಕಾರ ಒಳ್ಳೆಯ ಕೆಲಸ‌ ಮಾಡಿದೆ ಎಂದರು.

 ರಾಜ್ಯದಲ್ಲಿ ಅನೇಕ ವರ್ಷಗಳಿಂದ ಬಡವರು ಮೀಸಲಾತಿಗಾಗಿ ಹೋರಾಟ ಮಾಡುತ್ತ ಬಂದರು. ನಾವು 101 ಜಾತಿಗೆ ಅನ್ಯಾಯ ಆಗದ ರೀತಿಯಲ್ಲಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಹಂಚುವ ಕೆಲಸ ಮಾಡಿದ್ದೇವೆ. ಅಷ್ಟೇ ಅಲ್ಲದೇ ಪಂಚಮಸಾಲಿ, ಸಮುದಾಯ(Panchamasali community)ದವರು ಕೇಳಿದ್ದರು. ಮೀಸಲಾತಿ ಜೊತೆಗೆ ಶೇ. 2 ಹೆಚ್ಚುವರಿ ಕೊಡುವ ಕೆಲಸ ಮಾಡಿದ್ದಿವಿ. ಆ ಕಡೆ ವಕ್ಕಲಿಗ ಸಮುದಾಯ(Vokkaliga community reservation)ಕ್ಕೂ ಮೀಸಲು ಕಲ್ಪಿಸಿದ್ದೇವೆ. ಸಂವಿಧಾನದ ಆಶಯ, ಅನುಗುಣವಾಗಿ ಕೆಲಸ ಮಾಡಿದ್ದಿವಿ ಹೊರತು‌, ಬೇಕಾಬಿಟ್ಟಿ ಮಾಡಿಲ್ಲ ಎಂದರು.

ಕಾಂಗ್ರೆಸ್ ನವರು, ಜನರಿಗೆ ಮಿಸ್ ಗೈಡ್ ಮಾಡುತ್ತಿದ್ದಾರೆ.  ಸಮಾಜ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವು ಮಾಡಿರೋ ಮೀಸಲಾತಿ ರದ್ದು ಮಾಡ್ತಿನಿ ಅಂತ  ಡಿಕೆಶಿ(DK Shivakumar) ಹೇಳಿದ್ದಾರೆ. ಅಷ್ಟೇ ಅಲ್ಲ ಅವೈಜ್ಞಾನಿಕ ಅಂತ ಹೇಳಿದ್ದಾರೆ. 60 ವರ್ಷ ಮಾಡಲಿಕ್ಕೆ ಆಗಲಿಲ್ಲ, ಆಡಳಿತ ಮಾಡಿ.  ವೈಜ್ಞಾನಿಕ ವಾಗಿ ಮಾಡಲಿಕ್ಕೆ ನಿಮಗ ಯಾರು ಆಣೆ ಹಾಕಿದ್ದರೇನು ಎಂದರು.ನಮಗಿಂತ ಹೆಚ್ಚಿಗೆ 6 ವರ್ಷ ಅಧಿಕಾರದಲ್ಲಿದ್ದು   ಏಕೆ ಮಾಡಲಿಲ್ಲ. ಇವತ್ತ ಮಾಡಿದ್ರಾಗ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತೀದ್ದೀರಿ. ಯಾವ ಜನಾಂಗದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದರು. ಅವರಿಗೆಲ್ಲಾ ಮೀಸಲಾತಿ ಕೊಡುವ ಕೆಲಸ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಎಂದರು.

ವಿಜಯ ಸಂಕಲ್ಪ ಯಾತ್ರೆ ಯಶಸ್ವಿ:

ಇದೇ ವೇಳೆ ಮಾತು ಮುಂದುವರಿಸಿದ ಸಚಿವರು, ನಾಲ್ಕು ತಂಡಗಳಲ್ಲಿ ಮಾಡಿದ ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯನ್ನು ಯಶಸ್ವಿಗೊಳಿಸಿದ್ದೇವೆ. ಮೇ ತಿಂಗಳ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೋದಿ(Narendra Modi)ಯವರು ಬಿಜೆಪಿ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಕಾಂಗ್ರೆಸ್ಸಿಗರು  60 ವರ್ಷ ಆಡಳಿತ ಮಾಡಿ, ಪ್ರಜೆಗಳ ಧ್ವನಿಯನ್ನೆ ಕಳೆದಿಟ್ಟಿದ್ದಾರೆ. ಪ್ರಜಾಧ್ವನಿ ಯಾತ್ರೆ(Prajadhwani) ಮಾಡ್ತಾರ, ಭಾರತ ಜೋಡೋ ಯಾತ್ರೆ(Bharat Jodo yatre) ಮಾಡ್ತಾರ.  ಭಾರತವನ್ನು ತುಂಡು ತುಂಡು ಮಾಡಿದವರೇ, ಭಾರತ್ ಜೋಡೊ ಯಾತ್ರೆ ಮಾಡ್ತಾರೆ, ಇದು ಹಾಸ್ಯಾಸ್ಪದ. ನಮ್ಮ ಪಕ್ಷ ನಾವು ಮಾಡಿರೋ ಸಾಧನೆ ಮುಂದಿಟ್ಟು ಮತ ಕೇಳ್ತಿವಿ ಖಂಡಿತ ನಾವ ಗೆಲ್ತಿವಿ ಎಂದರು.
 
ಕಾಂಗ್ರೆಸ್ಸಿಗೆ ಸೋಲಿನ ಭೀತಿ ಕಾಡುತ್ತಿದೆ:

ಮುಸ್ಲಿಂ ಮೀಸಲಾತಿ(Muslim reservation) ದ್ವೇಷದಿಂದ ಕೂಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು ನಮ್ಮದು ದ್ವೇಷದ ರಾಜಕಾರಣ ಅಲ್ಲ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಇಲ್ಲ. ಮೀಸಲಾತಿ ಶೋಷಣೆಗೆ ಒಳಗಾದವರಿಗೆ, ಅವಕಾಶ ವಂಚಿತರನ್ನು ಮೇಲೆತ್ತಲಿಕ್ಕೆ ಮೀಸಲಾತಿ ವ್ಯವಸ್ಥೆ ಇದೆ. ಆ ನಿಟ್ಟಿನಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಮುಸ್ಲಿಂ ರಿಗೂ ಕೂಡ ಬೇರೆ ಕೆಟಗೇರಿಯಲ್ಲಿ ಅವಕಾಶ ನೀಡಿದ್ದಾರೆ‌  ಎಂದರು.

ಸಿಎಂ ಬೊಮ್ಮಾಯಿ ಹೇಳಿಕೆ ಸಮರ್ಥಿಸಿದ ನಿರಾಣಿ

 ಸಿದ್ದರಾಮಯ್ಯ  45 ವರ್ಷ ರಾಜಕಾರಣ ಮಾಡಿ, ರಾಜ್ಯದ ಸಿಎಂ ಆಗಿ,  ಪ್ರತಿಪಕ್ಷದ ನಾಯಕ ಆಗಿ, ಪಕ್ಷದ ಅಧ್ಯಕ್ಷ ಆಗಿ ಕೆಲಸ ಮಾಡಿದವರು. ಅವರು ಸುರಕ್ಷಿತ ಕ್ಷೇತ್ರ ಹುಡುಕಾಡುವ ಪರಿಸ್ಥಿತಿ ಬಂದಿದೆ ಅಂದ್ರೆ, ಇದಕ್ಕಿಂತ ದೌರ್ಭಾಗ್ಯ ಮತ್ತೊಂದಿಲ್ಲ ಎಂದರು.
 ಸಿದ್ದರಾಮಯ್ಯ ಅವರಿಗೆ, ಕಾಂಗ್ರೆಸ್ಸಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಸಚಿವ ಕಾರಜೋಳ ಹೇಳಿದರು.

Latest Videos
Follow Us:
Download App:
  • android
  • ios