ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಅವರೇ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಹೀಗಾಗಿ ಈ ಕುರಿತು ಚರ್ಚೆ ಅನಗತ್ಯ. ಈಗಾಗಲೇ ಹೈಕಮಾಂಡ್ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಅಷ್ಟಕ್ಕೂ ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಮಾತನಾಡುತ್ತಾರೆ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ 

ಕೊಪ್ಪಳ(ಜು.04): ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕು ಎಂದು ಒಬ್ಬರು ಒಕ್ಕಲಿಗ ಸ್ವಾಮೀಜಿ ಹೇಳಿರಬಹುದು. ಆದರೆ ಈ ರೀತಿ ಮಾತನಾಡುವ ಬಹಳಷ್ಟು ಸ್ವಾಮೀಜಿಗಳು ಇದ್ದಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಬೇಕೆಂಬ ಸ್ವಾಮೀಜಿಯೊಬ್ಬರ ಹೇಳಿಕೆ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಹೀಗೆ ಹೇಳುವ ಅನೇಕ ಸ್ವಾಮೀಜಿಗಳು ರಾಜ್ಯದಲ್ಲಿದ್ದಾರೆ. ರಾಜಕೀಯ ಮಾಡುವ ಸ್ವಾಮೀಜಿಗಳೇ ಹೆಚ್ಚಾಗಿದ್ದಾರೆ. ರಾಜಕೀಯ ಮತ್ತು ಧರ್ಮದ ನಡುವೆ ಅಂತರ ಇದ್ದರೆ ಒಳ್ಳೆಯದು ಎಂದರು.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲ್ಲ: ಸಚಿವ ಜಮೀರ್‌ ಅಹ್ಮದ್‌

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಅವರೇ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ. ಹೀಗಾಗಿ ಈ ಕುರಿತು ಚರ್ಚೆ ಅನಗತ್ಯ. ಈಗಾಗಲೇ ಹೈಕಮಾಂಡ್ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಅಷ್ಟಕ್ಕೂ ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಮಾತನಾಡುತ್ತಾರೆ ಎಂದು ಹೇಳಿದರು.