ಕಾಂಗ್ರೆಸ್ ಹಿರಿಯ ನಾಯಕರ ಬೇಗುದಿಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತುಪ್ಪ ಸುರಿದ ರಾಹುಲ್ ಗಾಂಧಿ!

ಗುಜರಾತ್ ಬಿಜೆಪಿಯನ್ನು ಸೋಲಿಸುವ ಎಲ್ಲಾ ಅವಕಾಶ ನಮಗಿದೆ

ಯುವಕರ ಮೇಲೆ ಹೆಚ್ಚಾಗಿ ಗಮನ ನೀಡಿ ಎಂದ ರಾಹುಲ್ ಗಾಂಧಿ

ರಾಹುಲ್ ಮಾತಿಗೆ ಕಾಂಗ್ರೆಸ್ ಹಿರಿಯ ನಾಯಕರ ಕಿಡಿ

more focus on youth rahul gandhi talk in the CWC meeting that would have made G23 leaders feel chilly san

ನವದೆಹಲಿ (ಮಾ.15): ಪಂಚರಾಜ್ಯಗಳ ಚುನಾವಣೆಯಲ್ಲಿ (Five State Elections) ಕಾಂಗ್ರೆಸ್ (Congress) ಪಕ್ಷದ ದಯನೀಯ ಸೋಲು ಕಂಡ ಕುರಿತಾಗಿ ಭಾನುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ (Congress Working Committee Meet) ರಾಹುಲ್ ಗಾಂಧಿ (Rahul Gandhi) ಆಡಿರುವ ಮಾತುಗಳು, ಹಿರಿಯ ನಾಯಕರ ಬೇಗುದಿಗೆ ತುಪ್ಪ ಸುರಿದಂತಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಾದಲ್ಲಿ ಯುವಜನಾಂಗದತ್ತ ನಾವು ಹೆಚ್ಚು ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಪಕ್ಷದಲ್ಲಿ ಹಿರಿಯ ನಾಯಕರಿಗೆ ಹೆಚ್ಚಿನ ಮನ್ನಣೆ ಇಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಚುನಾವಣಾ ಸೋಲಿನ ಜೊತೆಗೆ ಪಕ್ಷದ ಮುಂದಿರುವ ಸವಾಲುಗಳೇನು ಎಂಬ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್ ಗಾಂಧಿ, ಪಕ್ಷವು ಭವಿಷ್ಯದಲ್ಲಿ ಯುವಕರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದರು. ದೇಶದ ಜನಸಂಖ್ಯಾ ವಿವರವನ್ನು ಉಲ್ಲೇಖಿಸಿದ ಅವರು, ಪಕ್ಷವು ಮುಂದುವರಿಯಲು ಇದೇ ಮಾರ್ಗವಾಗಿದೆ ಎಂದು ಹೇಳಿದರು. ಪಕ್ಷದ ಉನ್ನತ ನಾಯಕತ್ವದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿರುವ ಪಕ್ಷದೊಳಗಿನ ಅತೃಪ್ತ ನಾಯಕರ ಜಿ-23 ಗುಂಪಿನಲ್ಲಿ(G-23 Group) ರಾಹುಲ್ ಗಾಂಧಿಯವರ ಈ ಹೇಳಿಕೆಯನ್ನು ಭಿನ್ನವಾಗಿ ಅರ್ಥ ಮಾಡಲಾಗಿದೆ.

ಗುಜರಾತ್ ನಲ್ಲಿ ಬಿಜೆಪಿಯನ್ನು ಸೋಲಿಸಬಹುದು:  ಪಕ್ಷಕ್ಕೆ ಹೊಸ ಶಕ್ತಿ ನೀಡಲು ಯುವಕರತ್ತ ಗಮನ ಹರಿಸುವುದು ಅಗತ್ಯ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಹೇಳಿದರು. ಇತ್ತೀಚಿನ ಐದು ರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಸಭೆಯಲ್ಲಿ ಮಾತನಾಡುವ ವೇಳೆ ಜೈರಾಮ್ ರಮೇಶ್ ಹೇಳಿಕೆಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra),  ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷವು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಗೆ 60% ಟಿಕೆಟ್ ನೀಡಿತ್ತು ಎಂದರು. ಮೂಲಗಳ ಪ್ರಕಾರ ಜೈರಾಮ್ ರಮೇಶ್ ಅವರ ವಾದಕ್ಕೆ ರಾಹುಲ್ ಗಾಂಧಿ ಸಹಮತ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ಯುವಜನತೆಯತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ. ಉತ್ತಮ ತಂತ್ರಗಾರಿಕೆಯೊಂದಿಗೆ ಮುನ್ನಡೆದರೆ ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ಹೇಳಿದರು.

ಬರೀ ಟ್ವೀಟ್‌ ಮಾಡಿದ್ರೆ ಪಕ್ಷ ಉದ್ಧಾರವಾಗಲ್ಲ: ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ
ರಾಹುಲ್ ಗಾಂಧಿ ಹೇಳಿರುವ ಮಾತನ್ನು ಸಿಡಬ್ಲ್ಯುಸಿಯಲ್ಲೇ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ಇದು ರಾಹುಲ್ ಗಾಂಧಿ ಎತ್ತಿರುವ ನಿಜವಾದ ಸವಾಲು ಎಂಬುದು ಒಂದೆಡೆ ಗಾಂಧಿ ಕುಟುಂಬದ ನಿಕಟವರ್ತಿಗಳ ಅಭಿಪ್ರಾಯ. ಅದೇ ಸಮಯದಲ್ಲಿ, ಇದು ಜಿ -23 ರ ನಾಯಕರ ಮೇಲಿನ ವ್ಯಂಗ್ಯ ಎಂದು ಕೆಲವು ನಾಯಕರು ಭಾವಿಸಿದ್ದಾರೆ.

ಜಿ-23ರ ನಾಯಕರ ಕಾಳಜಿ ಮತ್ತು ಸಲಹೆಗಳನ್ನು ಒಂದು ರೀತಿಯಲ್ಲಿ ಅಲ್ಲಗಳೆಯುತ್ತಲೇ ರಾಹುಲ್ ಗಾಂಧಿ ಬಂದಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯು ಪಕ್ಷದೊಳಗಿನ ಅತೃಪ್ತ ನಾಯಕರ ಗುಂಪಿನ ಮೇಲೆ ನೇರ ದಾಳಿ ಎಂದು ಹೇಳಲಾಗಿದೆ. ಜಿ-23 ಅಲ್ಲಿರುವ ಹೆಚ್ಚಿನ ಸದಸ್ಯರು ವಯಸ್ಸಾದವರು, ಅವರ ಕಡೆಗೆ ರಾಹಲ್ ಹೂಡಿದ ಬಾಣ ಇದಾಗಿದೆ.

Election Result ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್, ಸಿಧು ಸೇರಿ 5 ರಾಜ್ಯ ಅಧ್ಯಕ್ಷರ ವಜಾಗೊಳಿಸಿದ ಸೋನಿಯಾ ಗಾಂಧಿ!
ಕಾಂಗ್ರೆಸ್ ನಾಯಕತ್ವದ ಬಗ್ಗೆ ಹಿರಿಯ ನಾಯಕರ ಟೀಕೆ
ಇನ್ನೊಂದೆಡೆ ಸಭೆಯಲ್ಲಿ ಗಾಂಧಿ ಕುಟುಂಬ ವಾದಿಸಿದ್ದಕ್ಕೆ ವ್ಯತಿರಿಕ್ತವಾಗಿ, ಸಿಡಬ್ಲ್ಯೂಸಿಯಲ್ಲಿ ಜಿ-23 ಸದಸ್ಯರು ಪಕ್ಷದ ನಾಯಕತ್ವದ ಶೈಲಿ ಮತ್ತು ಸಮಾಲೋಚನೆ ಮತ್ತು ಪರಿಗಣನೆಯಿಲ್ಲದೆ ತೆಗೆದುಕೊಂಡ ನಿರ್ಧಾರಗಳ ವಿಷಯವನ್ನು ಪ್ರಸ್ತಾಪಿಸಿದರು. 2020 ರಲ್ಲಿ ಸೋನಿಯಾ ಗಾಂಧಿಗೆ ಬರೆದ ವಿವಾದಾತ್ಮಕ ಪತ್ರದಲ್ಲಿ ಅವರು ಪ್ರಸ್ತಾಪಿಸಿದ ಅದೇ ವಿಷಯಗಳು ಇದರಲ್ಲಿ ಒಳಗೊಂಡಿವೆ. ಈ ಸಭೆಯಲ್ಲಿ ಕೆಲವು ಹಿರಿಯ ನಾಯಕರು,  ರಾಹುಲ್ ಗಾಂಧಿಗೆ ಅವರು ಹೆಚ್ಚು ಸುಲಭವಾಗಿ ಮತ್ತು ನಿಯಮಿತವಾಗಿ ನಾಯಕರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಲು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios