Asianet Suvarna News Asianet Suvarna News

2024ರಲ್ಲೂ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ: ಮಾಜಿ ಸಚಿವ ಕಳಕಪ್ಪ ಬಂಡಿ

ಐತಿಹಾಸಿಕ ನಿರ್ಧಾರಗಳ ಜತೆಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರವು ಮುಂಬರುವ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಬರಲಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

Modi led government at center in 2024 too Says Kalakappa Bandi gvd
Author
First Published Aug 26, 2023, 1:57 PM IST

ಗಜೇಂದ್ರಗಡ (ಆ.26): ಐತಿಹಾಸಿಕ ನಿರ್ಧಾರಗಳ ಜತೆಗೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರವು ಮುಂಬರುವ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರ ಬರಲಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ರೋಣ ಮಂಡಲದಿಂದ ನಡೆದ ಶಂಖನಾದ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದಲ್ಲಿ ಪಾರದರ್ಶಕ ಆಡಳಿತ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು, ವಿಶ್ವ ಮಟ್ಟದಲ್ಲಿ ಭಾರತದ ಸಾಧನೆ ಅಗ್ರ ಗಣ್ಯವಾಗಿದೆ. ಆದರೆ ಕಾಂಗ್ರೆಸ್ ಕೆಲ ಪಕ್ಷಗಳನ್ನು ಕೂಡಿಸಿ ಅಧಿಕಾರಕ್ಕಾಗಿ ಒಕ್ಕೂಟ ಕಟ್ಟಿಕೊಂಡಿದ್ದು, ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಆದರೆ ದೇಶದ ಜನತೆ ಪ್ರಧಾನಿ ಮೋದಿ ಅವರ ಆಡಳಿತ ಮೆಚ್ಚಿಕೊಂಡಿದ್ದಾರೆ. ಜನತೆಗೆ ಪಾರದರ್ಶಕ ಹಾಗೂ ಬಲಿಷ್ಠ ನಾಯಕತ್ವಬೇಕಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಜನತೆಯ ಆಶೀರ್ವಾದ ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಅವರಿಗೆ ಬಹುಮತದ ಸರ್ಕಾರ ರಚನೆಗೆ ಐತಿಹಾಸಿಕ ಗೆಲುವು ನೀಡುವ ಮೂಲಕ ವಿಪಕ್ಷ ರಹಿತ ಕೇಂದ್ರ ಸರ್ಕಾರ ರಚಿಸಲಿದ್ದಾರೆ ಎಂದರು.

ಲೋಕಸಭೆ ಚುನಾವಣೆ: ಪ್ರಲ್ಹಾದ್‌ ಜೋಶಿಗೆ ಟಕ್ಕರ್ ಕೊಡಲು ಸಜ್ಜಾಗುತ್ತಿದ್ದಾರಾ ವಿನಯ ಕುಲಕರ್ಣಿ ಪತ್ನಿ

ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಂತೋಷ ಅಕ್ಕಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗಾಗಲೇ ೦೯ ವರ್ಷಗಳಲ್ಲಿ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.ಇಂತಹ ಮೈಲಿಗಲ್ಲು ಹಾಗೂ ಸಾಧನೆಗಳನ್ನು ಜನತೆಗೆ ತಿಳಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ವತಿಯಿಂದ ದೇಶಾದ್ಯಂತ ಶಂಖನಾದ ಅಭಿಯಾನ ನಡೆಯಲಿದೆ. ಮೋದಿ ಸರ್ಕಾರದ ಎಲ್ಲ ಸಾಧನೆಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಆಪರೇಷನ್ ಹಸ್ತ ಯಶಸ್ವಿಯಾಗುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೆಣಸಗಿ, ಮುತ್ತಣ್ಣ ಕಡಗದ, ಉಮೇಶ ಮಲ್ಲಾಪುರ ಮಾತನಾಡಿದರು. ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ರಾಜೇಶ ಅರಕಲ್, ರೋಣ ಮಂಡಲ ಸಂಚಾಲಕ ಉಮೇಶ ಚನ್ನು ಪಾಟೀಲ್, ಶಂಕರ ಇಂಜನಿ, ಬಾಳಾಜಿರಾವ್ ಭೋಸಲೆ, ಮಲ್ಲು ಮಾದರ, ಅನುರಾಗ್ ಚಿನಿವಾಲರ, ಅರುಣ ಮಠದ ಸೇರಿ ಇತರರು ಇದ್ದರು.

Follow Us:
Download App:
  • android
  • ios