ಬೆಂಗಳೂರು, (ಮೇ.13): ಜೂನ್ 20 ರೊಳಗೆ ಖಾಲಿಯಾಗಲಿರುವ ವಿಧಾನಪರಿಷತ್ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ. ಚುನಾವಣೆ ಅಂದರೆ, ಜನರಿಂದ ಆಯ್ಕೆ ಮಾಡಬೇಕಾಗಿರುವುದಲ್ಲ. ಇವು ವಿಧಾನಸಭೆಯ ಶಾಸಕರಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಗಬೇಕಾಗಿರುವ ಆಯ್ಕೆಗಳು. 

ಇದೇ ಜೂನ್ 20 ರೊಳಗೆ 12 ಸ್ಥಾನಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈಗೆ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ವಿಧಾನಪರಿಷತ್‌ ನನಗೆ ಬೇಕು, ನಿನಗೆ ಬೇಕೆನ್ನುವವರ ಪಟ್ಟಿ  ಬಿಜೆಪಿಯಲ್ಲಿ ಹನುಮಂತನ ಬಾಲದಂತೆ ಬೆಳೆದಿದೆ.

ಕೊರೋನಾ ಭೀತಿ ನಡುವೆ ರಾಜಕೀಯ ಕ್ರಾಂತಿ: ಎಚ್‌ಡಿಕೆ, ಡಿಕೆಶಿ ಹಣಿಯಲು ಗೇಮ್ ಪ್ಲಾನ್

12ರ ಪೈಕಿ 7 ಸ್ಥಾನಗಳಿಗೆ ಚುನಾವಣೆ
 ಒಟ್ಟು 12 ಸ್ಥಾನಗಳ ಪೈಕಿ 7 ಸ್ಥಾನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಉಳಿದ 5 ಸ್ಥಾನಗಳಿಗೆ ಸರ್ಕಾರದ ವತಿಯಿಂದ ನಾಮನಿರ್ದೇಶನ ಸದಸ್ಯರ ಆಯ್ಕೆ ನಡೆಯಲಿದೆ. ಇದಕ್ಕೆ 5 ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರಾಜ್ಯಪಾಲರ ಶಿಫಾರಸ್ಸಿಗೆ ಸರ್ಕಾರ ಕಳುಹಿಸಬೇಕಿದೆ. ಬಾಕಿ 7 ಸ್ಥಾನಗಳಿಗೆ ಚುನಾವಣೆ ನಡೆಸಬೇಕು.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ..?
 12 ಸ್ಥಾನಗಳ ಪೈಕಿ ಚುನಾವಣಾ ಪ್ರಕ್ರಿಯೆ ನಡೆಯಲಿರುವ  ಈ 7 ಸ್ಥಾನಗಳಲ್ಲಿ ಬಿಜೆಪಿಗೆ 4 ಸ್ಥಾನ, 2 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 1 ಸ್ಥಾನದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ರಾಜ್ಯ ಸರ್ಕಾರ ಈ 12 ಸ್ಥಾನಗಳಿಗೂ ಆಯ್ಕೆ ಪ್ರಕ್ರಿಯೆಯನ್ನು ಜೂನ್ 20 ರೊಳಗೆ ನಡೆಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ.

ಕೊರೋನಾ ಭೀತಿ ನಡುವೆ ರಾಜಕೀಯ ಕ್ರಾಂತಿ
ಹೌದು.... ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊರೋನಾ ಭೀತಿಯ ನಡುವೆಯೂ ರಾಜ್ಯ ರಾಜಕಾರಣ ಗರಿಗೆದರಲಿದೆ. ಯಾರನ್ನ ವಿಧಾನಪರಿಷತ್ ಆಯ್ಕೆ ಮಾಡ್ಬೇಕು? ಯಾರನ್ನು ಬಿಡಬೇಕು? ಅಸಮಾಧಾನಿತರನ್ನು ಹೇಗೆ ಸಮಾಧಾನ ಪಡಿಸ್ಬೇಕು? ಅಂತೆಲ್ಲಾ ಲೆಕ್ಕಾಚಾರಗಳು ಪಕ್ಷದ ಮುಂದಿವೆ. ಇದರಿಂದ ಕೊರೋನಾ ವೈರಸ್‌ ನಡುವೆಯೂ ರಾಜ್ಯ ರಾಜಕಾರಣ ರಂಗೇರುವುದರಲ್ಲಿ ಅನುಮಾನವೇ ಬೇಡ.

ಎಲೆಕ್ಷನ್ ನಡೆದ್ರೂ ನಡೆಯಬಹುದು, ಇಲ್ಲಂದ್ರೆ ಇಲ್ಲ
 ಮೇ.17ರ ನಂತರ ನಾಲ್ಕನೇ ಹಂತದ ಹೊಸ ರೀತಿ ಲಾಕ್‌ಡೌನ್ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿ ವಿಧಾನಪರಿಷ್ ಚುನಾವಣೆ ನಡೆದ್ರೂ ನಡೆಯಬಹುದು. ಇಲ್ಲಂದ್ರೆ ಮುಂದೂಡಲೂಬಹುದು. ಒಂದು ವೇಳೆ ಮೇ17ರ ನಂತರ ವಿಧಾನಪರಿಷತ್ ಚುನಾವಣೆಯ ಕತೆ ತಿಳಿಯಲಿದೆ.

ಒಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳಿಗೆ ಕೊರೋನಾ ಜತೆಗೆ ಪರಿಷತ್ ಚುನಾವಣೆಯತ್ತ ಚಿತ್ತ ನೆಟ್ಟಿದೆ.