Karnataka Politics : ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರು

  • ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ರಾಜಕೀಯದಲ್ಲಿ ಬಹಳ ಪ್ರಬಲ
  • ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಈಗ ವಿಧಾನ ಪರಿಷತ್‌ಗೆ ಆಯ್ಕೆ
MLC Election  Jarkiholis brother defeats BJP candidate in Belagavi snr

ಬೆಳಗಾವಿ (ಡಿ.15):  ಬೆಳಗಾವಿಯಲ್ಲಿ (Belagavi) ಜಾರಕಿಹೊಳಿ (Jarkiholi) ಕುಟುಂಬ ರಾಜಕೀಯದಲ್ಲಿ ಬಹಳ ಪ್ರಬಲ ಮತ್ತು ಬಲಿಷ್ಠವಾಗಿದೆ. ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಈಗ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ರಾಜಕೀಯ (Politics) ಪ್ರವೇಶಿಸಿದ್ದಾರೆ. ಇದರೊಂದಿಗೆ ಜಾರಕಿಹೊಳಿ ಕುಟುಂಬದ ನಾಲ್ವರು ಶಾಸಕರಾದಂತೆ ಆಗಿದೆ. ಈ ಹಿಂದೆ ಗೋಕಾಕ ವಿಧಾನಸಭೆ (Assembly) ಉಪ ಚುನಾವಣೆಯಲ್ಲಿ ಅಣ್ಣನ ವಿರುದ್ಧವೇ ಸ್ಪರ್ಧೆ ಮಾಡುವ ಮೂಲಕ ಸೋಲು ಕಂಡಿದ್ದ ಉದ್ಯಮಿ ಲಖನ್‌ ಜಾರಕಿಹೊಳಿಯನ್ನು ವಿಧಾನ ಪರಿಷತ್‌ಗೆ (MLC) ಪ್ರವೇಶ ಪಡೆದಿದ್ದಾರೆ. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಈಗಾಗಲೇ ಶಾಸಕರಾಗಿದ್ದಾರೆ.

ಸೋತ ಅಣ್ಣನೇ ಈಗ ಗೆಲ್ಲಿಸಿದ!

ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarkiholi) ಕಾಂಗ್ರೆಸ್‌ಗೆ (Congress) ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದರು. ಈ ವೇಳೆ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದರು. ಆಗ ರಮೇಶ ಜಾರಕಿಹೊಳಿ ಗೆಲುವು ಸಾಧಿಸಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿಯೇ ತನ್ನ ತಮ್ಮನ ಗೆಲುವಿನ ರೂವಾರಿಯಾಗಿದ್ದಾರೆ.

ರಾಜಕೀಯ ಕುಟುಂಬಗಳಿಗೆ ಗೆಲುವು

ವಿಧಾನ ಪರಿಷತ್‌ ದ್ವಿ ಸದಸ್ಯತ್ವ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳು ವಿಜಯ ಶಾಲಿಯಾಗಿದ್ದಾರೆ. ಗೆದ್ದಿರುವ ಇಬ್ಬರೂ ರಾಜಕೀಯ (Politics) ಕುಟುಂಬದವರೇ ಎನ್ನುವುದು ವಿಶೇಷ. ಕಾಂಗ್ರೆಸ್‌ (Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರರ ಸಹೋದರರಾದರೆ, ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರ ಸಹೋದರರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮೂವರು ಶಾಸಕರಾಗಿದ್ದಾರೆ.

ಪಕ್ಷೇತರರಿಗೆ ಮತ್ತೆ ಮಣೆ ಹಾಕಿದ ಮತದಾರ

2015ರ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿವೇಕ ರಾವ್‌ ಪಾಟೀಲ್‌ ಅವರು ಸುಲಭವಾಗಿ ಗೆಲವು ಸಾಧಿಸಿದ್ದರು. ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವ ಮೂಲಕ ಮತದಾರರ ಪಕ್ಷೇತರ ಅಭ್ಯರ್ಥಿಗೆ ಆದ್ಯತೆ ನೀಡಿದ್ದ. ಅದರಂತೆಯೇ 2021ರ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶದಲ್ಲಿಯೂ ಮತದಾರ ಮತ್ತೆ ಪಕ್ಷೇತರ ಅಭ್ಯರ್ಥಿಗೆ ಆದ್ಯತೆ ನೀಡಿದ್ದಾನೆ. ಪ್ರಸಕ್ತ ಬಾರಿ ಗೋಕಾಕ ಉದ್ಯಮಿ ಲಖನ್‌ ಜಾರಕಿಹೊಳಿರನ್ನು ಆಯ್ಕೆ ಮಾಡಿದ್ದಾನೆ.

ಕ್ರಮಕ್ಕೆ ಮುಂದಾದ ಮುಖಂಡರು  :  ಮೇಶ್‌ ಜಾರಕಿಹೊಳಿ ಮೇಲೆ ಕ್ರಮಕೈಗೊಳ್ಳುವ ಕುರಿತು ಪಕ್ಷದ ಮುಖಂಡರೊಂಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ತಿಳಿಸಿದರು. ಬೆಳಗಾವಿ(Belagavi) ವಿಧಾನ ಪರಿಷತ್‌ ಚುನಾವಣೆಯಲ್ಲಿ(MLC Elecion Result) ಬಿಜೆಪಿ ಅಭ್ಯರ್ಥಿ ಸೋಲು ಕಂಡಿರುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಹಜವಾಗಿ ರಮೇಶ್‌ ಜಾರಕಿಹೊಳಿ(Ramesh Jarkiholi), ಬಾಲಚಂದ್ರ ಜಾರಕಿಹೊಳಿ ಒಂದೇ ಪಕ್ಷದವರು. ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿಗಳ ಕುರಿತು ಕ್ರಮಕೈಗೊಳ್ಳಲು ಅವಸರ ಮಾಡುವುದಿಲ್ಲ. ಕುಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದು ಮೇಲೆ ಕಿಡಿ: 
ವಿಪಕ್ಷ ನಾಯಕ ಸಿದ್ದರಾಮಯ್ಯನವರ(siddaramaiah) ಧಮ್‌ ಬಗ್ಗೆ ನಮಗೆ ಗೊತ್ತಿದೆ. ಅವರ ಮುಖ್ಯಮಂತ್ರಿ ಸ್ಥಾನನೇ ಉಳಿಸಿಕೊಳ್ಳಲು ಆಗಲಿಲ್ಲ. ಅವರ ಮುಖ್ಯಮಂತ್ರಿ ನೇತೃತ್ವದಲ್ಲಿಯೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ ಎಂದು ಬೊಮ್ಮಾಯಿ ಕಿಡಿಕಾರಿದರು.

MLC Poll Result: ಬಿಜೆಪಿ ವಿರುದ್ಧ ತಿರುಗಿಬಿದ್ದ ಜಾರಕಿಹೊಳಿ, ಸೋಲಿಗೆ ಸ್ಫೋಟಕ ಕಾರಣ ಕೊಟ್ರು

ನಮ್ಮ ಮತಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಇದರ ಬಗ್ಗೆಯೂ ನಾವು ಕೂಲಂಕಷ ಪರಿಶೀಲನೆ ಮಾಡುತ್ತೇವೆ ಎಂದರು. ಬೆಳಗಾವಿಯ ಬಗ್ಗೆ ಪರಿಶೀಲನೆ ಮಾಡಬೇಕು. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ಇತ್ತು. ಯಾಕೆ ಸೋಲು ಕಂಡರು ಎಂದು ಪರಿಶೀಲನೆ ಮಾಡುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಉತ್ತರಿಸಿದರು.

ಫಲಿತಾಂಶ ಖಂಡಿತವಾಗಿ ತೃಪ್ತಿ ತಂದಿದೆ. ರಾಜ್ಯದಲ್ಲಿ ಬಿಜೆಪಿ(BJP) ವಿಧಾನ ಪರಿಷತ್‌ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದೇವೆ. 13 ಅಥವಾ 14 ಸ್ಥಾನ ನಿರೀಕ್ಷೆ ಇಟ್ಟುಕೊಂಡಿದ್ದೇವು. ಸ್ವಲ್ಪದರಲ್ಲಿ ಹೆಚ್ಚು-ಕಡಿಮೆಯಾಗಿದೆ. ಕಳೆದ ಬಾರಿ ವಿಧಾನ ಪರಿಷತ್‌ನಲ್ಲಿ 6 ಸ್ಥಾನ ಇತ್ತು. ಈ ಬಾರಿ 5 ಹೆಚ್ಚಿಗೆ ಆಗಿದೆ ಎಂದರು.

Latest Videos
Follow Us:
Download App:
  • android
  • ios