Asianet Suvarna News Asianet Suvarna News

Belagavi MLC Election: ಕಾಂಗ್ರೆಸ್‌ ಪ್ರಚಾರಕ್ಕೆ ಬೆಂಗಳೂರು ಗೂಂಡಾಗಳು: ಜಾರಕಿಹೊಳಿ

*   ಕಾಂಗ್ರೆಸ್‌ ಸೋಲಿಸಲು ಲಖನ್‌ ಕಣಕ್ಕೆ
*   ಶೀಘ್ರದಲ್ಲಿಯೇ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ
*   ವಿವೇಕರಾವ್‌ ಪಾಟೀಲಗೆ ಅವಮಾನಿಸಿದ ಕಾಂಗ್ರೆಸ್ 

Bengaluru Goons for Congress Campaign Says Ramesh Jarkiholi grg
Author
Bengaluru, First Published Dec 3, 2021, 6:46 AM IST
  • Facebook
  • Twitter
  • Whatsapp

ಬೆಳಗಾವಿ(ಡಿ.03):  ಈ ಭಾಗದ ರೈತರ ಪ್ರಮುಖ ಬೇಡಿಕೆಯಾಗಿರುವ ಬಸವೇಶ್ವರ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಶೀಘ್ರದಲ್ಲಿಯೇ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ(Ramesh Jarkiholi) ಹೇಳಿದರು.

ಅಥಣಿ(Athani) ಪಟ್ಟಣದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ(Election Campaign) ಗುರುವಾರ ಮಾತನಾಡಿದ ಅವರು, ಅಥಣಿ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುಖ್ಯಮಂತ್ರಿಯಾಗಿದ್ದರೂ ನಾನೇ ಮುಖ್ಯಮಂತ್ರಿಯಾದಂತೆ. ಅಷ್ಟೊಂದು ಅವಿನಾಭಾವ ಸಂಬಂಧ ನಾವು ಹೊಂದಿದ್ದೇವೆ ಎಂದು ಹೇಳಿದರು.

ಲಖನ್‌ ಜಾರಕಿಹೊಳಿ(Lakhan Jarkiholi) ಅವರು ಪಕ್ಷೇತರರಾಗಿ ಈ ಚುನಾವಣೆಯನ್ನು(Election) ಎದುರಿಸುತ್ತಿದ್ದಾರೆ. ನಾವಂತೂ ಲಖನ್‌ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡುವುದರ ಬಗ್ಗೆ ಯೋಚಿಸಿರಲೇ ಇಲ್ಲ. ಕೆಲ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌(Congress) ಅನ್ನು ಸೋಲಿಸಲೇಬೇಕಾದ ಅನಿವಾರ್ಯತೆಯಿಂದ ಲಖನ್‌ ಅವರು ಕಣಕ್ಕಿಳಿದಿದ್ದಾರೆ ಎಂದು ರಮೇಶ ಜಾರಕಿಹೊಳಿ ಹೇಳಿದರು.

Karnataka Politics: ಡಿಕೆಶಿ ವ್ಯಕ್ತಿತ್ವ ಏನೆಂದು ಹೇಳ್ತೀನಿ, ಸಂಚಲನ ಮೂಡಿಸಿದ ಜಾರಕಿಹೊಳಿ ಹೇಳಿಕೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಬಿಜೆಪಿ(BJP) ಅಭ್ಯರ್ಥಿಯನ್ನು ಗೆಲ್ಲಿಸಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಬೇಕು. ಈ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕು. ಮಾತ್ರವಲ್ಲ, ದುರಹಂಕಾರ ಮತ್ತು ಗೂಂಡಾಗಿರಿ ದರ್ಪದಿಂದ ಮೆರೆಯುತ್ತಿರುವ ಡಿ.ಕೆ.ಶಿವಕುಮಾರ(DK Shivakumar) ಅವರಿಗೆ ಪಾಠ ಕಲಿಸುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಅಥಣಿ ಭಾಗದ ಶಕ್ತಿಯಿಂದ ರಾಜ್ಯದಲ್ಲಿ ನಾನಿಂದು ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ್ದೇನೆ. ಅಷ್ಟೊಂದು ಪ್ರೀತಿ, ವಿಶ್ವಾಸ ಹಾಗೂ ಶಕ್ತಿಯನ್ನು ಈ ಭಾಗದ ಜನರು ನೀಡಿದ್ದಾರೆ. ಡಿ.10 ರಂದು ನಡೆಯುವ ವಿಪ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು. ಇನ್ನು ಎರಡನೇ ಪ್ರಾಶಸ್ತ್ಯದ ಮತವನ್ನು ಯಾರಿಗೆ ನೀಡಬೇಕೆಂಬುದು ಇನ್ನೂ ವರಿಷ್ಠರಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಇದರ ಸಂಬಂಧ ವರಿಷ್ಠರೊಂದಿಗೆ ಶೀಘ್ರ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ನಾನು ಸೇರಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi), ಶಾಸಕ ಮಹೇಶ ಕುಮಠಳ್ಳಿ ಎಲ್ಲರೂ ಬಿಜೆಪಿಯವರೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತವಾಗಿದೆ. ನಾವು ಹೇಳಿದವರಿಗೆ ಮತವನ್ನು ನೀಡಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ಕಾಂಗ್ರೆಸ್‌ ಅನ್ನು ಸೋಲಿಸೋಣ ಎಂದು ತಿಳಿಸಿದರು.

ವಿವೇಕರಾವ್‌ ಪಾಟೀಲಗೆ ಅವಮಾನಿಸಿದ ಕಾಂಗ್ರೆಸ್‌:

ವಿಧಾನ ಪರಿಷತ್‌ ಸದಸ್ಯರಾಗಿದ್ದ ವಿವೇಕರಾವ್‌ ಪಾಟೀಲ ಅವರು ಕಾಂಗ್ರೆಸ್‌ ಪಕ್ಷದಲ್ಲಿ ದುಡಿದರೂ ಅವರಿಗೆ ವಿಪ ಟಿಕೆಟ್‌ ನೀಡಲಿಲ್ಲ. ಹಾಲಿ ವಿಧಾನಪರಿಷತ್‌ ಸದಸ್ಯರಾಗಿದ್ದರೂ ಕಾಂಗ್ರೆಸ್‌ ಪಕ್ಷ ಅವರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಅವಮಾನಿಸಿದೆ. ಹೀಗಾಗಿ ಬೇಸತ್ತು ವಿವೇಕರಾವ್‌ ಅವರು ನಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಅಭ್ಯರ್ಥಿ ಪರ ಮತಯಾಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.

Karnataka Politics: ನನಗೆ ಥೂ... ಥೂ... ಅಂತಾರೆ. ನಾನೇನು ಮಾಡಿದ್ದೇನೆ?: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಳಗಾವಿಯಲ್ಲಿ ಜಾರಕಿಹೊಳಿ ತಂತ್ರಕ್ಕೆ ಡಿಕೆಶಿ ಪ್ರತಿತಂತ್ರ, ಗೆಲುವಿಗೆ ಕಸರತ್ತು

ಡಿ. 10 ರಂದು ನಡೆಯಲಿರುವ ಪರಿಷತ್ ಚುನಾವಣೆಗೆ (MLC Elections) ಚುನಾವಣಾ ಅಖಾಡ ರಂಗೇರಿದೆ. ಬೆಳಗಾವಿಯಲ್ಲಿ (Belagavi) ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ, ಬಿಜೆಪಿಯಿಂದ ಮಹಾಂತೇಶ್ ಕವಟಗಿಮಠ್, ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪರ ಡಿಕೆಶಿ ಪ್ರಚಾರಕ್ಕಿಳಿದಿದ್ದಾರೆ. ಬೆಳಗಾವಿಯಲ್ಲಿ ಬಲಾಬಲ ನೋಡಿದರೆ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಪಕ್ಕಾ ಎನ್ನಲಾಗುತ್ತಿದೆ. ಗೆಲುವಿಗಾಗಿ ಕಾಂಗ್ರೆಸ್ ನಾನಾ ಕಸರತ್ತು ನಡೆಸುತ್ತಿದೆ. 
 

Follow Us:
Download App:
  • android
  • ios