* ರಾಜ್ಯ ಬಿಜೆಪಿಯಲ್ಲಿ ನಾಯಕರ ಮಧ್ಯೆ ಮುಸುಕಿನ ಗುದ್ದಾಟ* ಬಿಜೆಪಿ ನಡೆಗೆ ಕಿಡಿಕಾರಿದ ಸ್ವಪಕ್ಷದ ನಾಯಕ*  ನನಗೆ ಆದಂಗೆ, ರಮೇಶ್ ಜಾರಕಿಹೊಳಿ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನೆ

ಹಾಸನ, (ಡಿ.16): ರಾಜ್ಯದಲ್ಲಿ ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ 11 ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸಹ 11 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಜೆಡಿಎಸ್ 2 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ಅದರಲ್ಲೂ ಬೆಳಗಾವಿಯಲ್ಲಿ ಸರಳವಾಗಿ ಗೆಲ್ಲಬೇಕಿದ್ದ ಬಿಜೆಪಿ, ರಮೇಶ್ ಜಾರಿಹೊಳಿ ಅವರ ಓವರ್ ಕಾನ್ಫಿಡೆನ್ಸ್‌ನಿಂದ ಸೋಲುಕಂಡಿದೆ. ಸ್ವಪ್ರತಿಷ್ಠೆಗೆ ಹೋಗಿ ಸ್ವಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದು, ಬಿಜೆಪಿ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಅಲ್ಲದೇ ಇದು ಬಿಜೆಪಿ ನಾಯಕರಲ್ಲೇ ಕಿತ್ತಾಟಕ್ಕೆ ಕಾರಣವಾಗಿದೆ.

ಹೌದು.....ಬಿಜೆಪಿ ನಾಯಕ ಎ.ಮಂಜು ಅವರು ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಏಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Karnataka Politics: ಮಗನಿಗೆ ಕಾಂಗ್ರೆಸ್ ಟಿಕೆಟ್, ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್

ಇಂದು (ಗುರುವಾರ) ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಮಾತಾನಾಡಿದ ಬಿಜೆಪಿ ನಾಯಕ ಎ. ಮಂಜು, ರಮೇಶ್ ಜಾರಕಿಹೊಳಿ ಶಾಸಕ ಎಂದು ಕ್ರಮ ಕೈಗೊಂಡಿಲ್ಲವೇ?. ಅಲ್ಲಿ ಅವನ ಸಹೋದರ ಗೆದ್ದ, ಇಲ್ಲಿ ನಾನು ಮಾಜಿ ಎಂಎಲ್‌ಎ ಅಂತ ಕ್ರಮ ತಗೆದುಕೊಂಡರು. ಹಾಸನದಲ್ಲಿ ಎಷ್ಟು ಓಟು ತಗೆದುಕೊಂಡರು ಎಂದು ಹಾಸನ ಎಂಎಲ್‌ಎ ಹೇಳಬೇಕು. ಎಸ್. ಟಿ. ಸೋಮಶೇಖರ್ ಮಂತ್ರಿ, ಅವರ ಓಎಸ್‌ಡಿ ಅವತ್ತು ಸಾಯಂಕಾಲದವರೆಗೂ ಮಂತ್ರಿ ಜೊತೆ ಇದ್ದ, ಮಾರನೇ ದಿನ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟಿದ್ದಾರೆ, ಅವನ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತದಾರರು ಬಿಜೆಪಿ ಕೈ ಹಿಡಿದಿಲ್ಲ‌
ಸರ್ಕಾರ ಯಾವುದು? ಇರುತ್ತೋ ಆ ಪಕ್ಷ ಹೆಚ್ಚು ಸೀಟುಗಳನ್ನು ಗೆಲ್ಲುತ್ತಿತ್ತು, ಬಿಜೆಪಿ ಪಕ್ಷ ಹನ್ನೊಂದು ಸ್ಥಾನ ಗೆದ್ದಿದೆ ಅಂತ ಹೇಳಕೊಳ್ಳೋದು ಬಿಟ್ಟರೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಹೇಳುವುದು ಸಮಜಾಯಿಸಿ ಅಲ್ಲಾ. ಮತದಾರರು ಬಿಜೆಪಿ ಕೈ ಹಿಡಿದಿಲ್ಲ‌ ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಹೇಳಿದರು.

MLC Election: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಯಕ 6 ವರ್ಷ ಉಚ್ಚಾಟನೆ

ಕಾಂಗ್ರೆಸ್ ಪರ ಮತ ಹಾಕಿರುವುದು ನೋಡಿದರೆ ಕಾಂಗ್ರೆಸ್ ನಾಯಕರು ಹೇಳುವಂತೆ ಕಾಂಗ್ರೆಸ್ ಪರ ಅಲೆ ಇದೆ ಅಂಥಾ ಹೇಳುತ್ತಿರುವುದು ನಿಜ ಅನ್ನಿಸುತ್ತದೆ. ಮಗನ ಪರ ಕೆಲಸ ಮಾಡುತ್ತೇನೆ ಅಂತ ನನ್ನ ಮೇಲೆ‌ ಕ್ರಮ ತೆಗೆದುಕೊಂಡರು. ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

100ಕ್ಕೆ ನೂರರಷ್ಟು ನನ್ನನ್ನು ಟಾರ್ಗೆಟ್ ಮಾಡಿದರು. ಅದಕ್ಕೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಈ ಸ್ಥಿತಿ ಆಗಿರರೋದು. ಬಿಜೆಪಿಯವರು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಪ್ರಾಬಲ್ಯ ಮಾಡುವುದನ್ನು ಇಷ್ಟ ಪಡುತ್ತಿಲ್ಲ. ಅದಕ್ಕೆ ಜನ ಬಿಜೆಪಿಗೆ ತಕ್ಕ ಪಾಠ ಈಗ ಕಲಿಸಿದ್ದಾರೆ. ಒಬ್ಬ ಮಂತ್ರಿ ಇಟ್ಟುಕೊಂಡು ಮಂಡ್ಯದಲ್ಲಿ 50 ಓಟು ಬಂದಿದೆ. 600 ಓಟಿನಲ್ಲಿ 50 ಓಟು ಬಂದಿದೆ ನಾಚಿಕೆ ಆಗಲ್ವಾ? ಎಂದು ಚಾಟಿ ಬೀಸಿದರು.

ಸಿಎಂ ಆಗಿದ್ದ ಯಡಿಯೂರಪ್ಪ ಮಂಡ್ಯ ಜಿಲ್ಲೆಯವರು. ಪಾಪ ಅವರ ಸಂಬಂಧಿ ಬೂಕಳಿ ಮಂಜು ಕಣ್ಣೀರು ಹಾಕಿದರು. ನನಗೆ ಈ ರೀತಿ ಆಗುತ್ತಿದೆ ಎಂದು ಹೇಳಿಕೊಂಡರು. ಒಳ ಒಪ್ಪಂದದ ಏಟಿನಿಂದ ಬಿಜೆಪಿಗೆ ಲಾಸ್ ಆಗುತ್ತಿದೆ. ಉಸ್ತುವಾರಿ ಮಂತ್ರಿ ಇದ್ದರು ಮೈಸೂರಿನಲ್ಲಿ ಸೋತಿದ್ದಾರೆ. ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಅನ್ನೋದು ಪ್ರಶ್ನೆಯಾಗಿದೆ ಎಂದು ಎ. ಮಂಜು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜವಾಬ್ದಾರಿಯಿಂದ ಮಂಜುಗೆ ಕೊಕ್
ಯೆಸ್...ಪುತ್ರ ಕೊಡಗು ಕ್ಷೇತ್ರದಲ್ಲಿ ಮಂಥನಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಇತ್ತ ಎ ಮಂಜು‌ ಮೇಲೆ ಸಂಶಯ ವ್ಯಕ್ತಪಡಿಸಿರುವ ಬಿಜೆಪಿ, ವಹಿಸಲಾಗಿದ್ದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಈ ಬಗ್ಗೆ ಆದೇಶ ಹೊಡಿಸಿದ್ದು, ಮಂಡ್ಯ ಉಸ್ತುವಾರಿ ಸೇರಿದಂತೆ ಪಕ್ಷದ ಜವಾಬ್ದಾರಿಯನ್ನು ಮುಕ್ತಗೊಳಿಸಿದೆ ಎಂದು ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.