ದೇಶದಲ್ಲಿಯೇ ಭರವಸೆಗಳ ಈಡೇರಿಸಿದ ಸರ್ಕಾರ ಕಾಂಗ್ರೆಸ್‌: ಟಿ.ಬಿ.ಜಯಚಂದ್ರ

ದೇಶದಲ್ಲಿಯೇ ಕೊಟ್ಟ ಭರವಸೆಗಳನ್ನು ಈಡೇರಿಸಿದ ಸರ್ಕಾರವೆಂದರೆ ಅದು ಕಾಂಗ್ರೆಸ್‌ ಸರ್ಕಾರ. ಬಡ, ಮಧ್ಯಮ ವರ್ಗದ ಕುಟುಂಬದ ಅರ್ಥಿಕ ಹೊರೆ ಕಡಿಮೆ ಮಾಡಲು ಗೃಹಜ್ಯೋತಿ ಸಹಕಾರಿಯಾಗಲಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

MLA TB Jayachandra Talks Over Congress Govt At Sira gvd

ಶಿರಾ (ಆ.06): ದೇಶದಲ್ಲಿಯೇ ಕೊಟ್ಟ ಭರವಸೆಗಳನ್ನು ಈಡೇರಿಸಿದ ಸರ್ಕಾರವೆಂದರೆ ಅದು ಕಾಂಗ್ರೆಸ್‌ ಸರ್ಕಾರ. ಬಡ, ಮಧ್ಯಮ ವರ್ಗದ ಕುಟುಂಬದ ಅರ್ಥಿಕ ಹೊರೆ ಕಡಿಮೆ ಮಾಡಲು ಗೃಹಜ್ಯೋತಿ ಸಹಕಾರಿಯಾಗಲಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ. ಅಲ್ಲದೆ ಸೌರ ವಿದ್ಯುತ್‌ ಉತ್ಪಾದನೆ ಮೂಲಕ ಇಡೀ ದೇಶದಲ್ಲಿ ಮಾದರಿ ರಾಜ್ಯವಾಗಿದೆ. 

ಗೃಹ ಜ್ಯೋತಿ ಯೋಜನೆಯಡಿ ಶಿರಾ ತಾಲೂಕಿನ 77000 ಜನ ಫಲಾನುಭವಿಗಳಾಗಿದ್ದಾರೆ. ಶಿರಾ ನಗರದಲ್ಲಿ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾದಲ್ಲಿ ಬೆಸ್ಕಾಂ ವಿಭಾಗ ಆರಂಭಿಸಲಾಗುವುದು. ಜೊತೆಗೆ ಪಟ್ಟನಾಯಕನಹಳ್ಳಿಯಲ್ಲಿಯೂ ಬೆಸ್ಕಾಂ ಉಪ ವಿಭಾಗ ಆರಂಭಿಸಲಾಗುವುದು ಎಂದರು. ಶಿರಾ ತಾಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಆಗಸ್ಟ್‌ ತಿಂಗಳ ಕೊನೆಯಲ್ಲಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು. ಟಾಟಾ ಕಂಪನಿ ಸೇರಿದಂತೆ ಹೆಸರಾಂತ ಕಂಪನಿಗಳು ಭಾಗವಹಿಸಲಿವೆ. 

ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಿರಿ: ರೈತರಿಗೆ ಸಚಿವ ವೆಂಕಟೇಶ್‌ ಸಲಹೆ

ಈ ಉದ್ಯೋಗ ಮೇಳದಲ್ಲಿ ಸುಮಾರು 2000 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಆದ್ದರಿಂದ ಎಲ್ಲಾ ಇಲಾಖೆಯವರು ಇದಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು. ಮಧುಗಿರಿ ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್‌ ಜಗದೀಶ್‌ ಮಾತನಾಡಿ, ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ 200 ಗರಿಷ್ಠ ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ಇಲಾಖೆಯು ಕಾರ್ಯಪ್ರವೃತ್ತವಾಗಿದೆ. ಯಾವುದೇ ರೀತಿಯ ತೊಂದರೆ ಎದುರಾದರೆ ಬೆಸ್ಕಾಂ ಸಹಾಯವಾಣಿ ಸಂಪರ್ಕಿಸುವಂತೆ ತಿಳಿಸಿದರು.

Mandya: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುಗಡೆ

ಕಾರ್ಯಕ್ರಮದಲ್ಲಿ ನಗರಸಭಾ ನೂತನ ಅಧ್ಯಕ್ಷೆ ಪೂಜಾ ಪೆದ್ದರಾಜು, ತಹಸೀಲ್ದಾರ್‌ ಮುರಳೀಧರ್‌, ತಾ.ಪಂ.ಇಓ ಅನಂತರಾಜು, ಬೆಸ್ಕಾಂ ಎಇಇ ಶಾಂತರಾಜು, ಮಾಜಿ ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್‌, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌.ಗುರುಮೂರ್ತಿ ಗೌಡ, ಸೂಡಾ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು,ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರ್‌ ಗೌಡ, ಮುಖಂಡರಾದ ಭಾನುಪ್ರಕಾಶ್‌, ಗುಳಿಗೇನಹಳ್ಳಿ ನಾಗರಾಜ್‌, ಬಾಂಬೆ ರಾಜಣ್ಣ, ಹಾಲೇನಹಳ್ಳಿ ಶಶಿಧರ್‌, ರೂಪೇಶ್‌ ಕೃಷ್ಣಯ್ಯ, ಎಸ್‌.ಆರ್‌.ಹರೀಶ್‌, ಗೋವಿಂದರಾಜು, ಬೆಸ್ಕಾಂ ಶಾಖಾಧಿಕಾರಿಗಳಾದ ಮುರುಳೀಧರ್‌, ಭಾನುಪ್ರಕಾಶ್‌, ಹನುಮಂತರಾಜು, ವಿರೂಪಾಕ್ಷ ಸೇರಿದಂತೆ ಹಲವರು ಹಾಜರಿದ್ದರು.

Latest Videos
Follow Us:
Download App:
  • android
  • ios