ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಅರಸೀಕೆರೆ (ಫೆ.13): ನನ್ನ ಪಾಡಿಗೆ ನಾನಿರ್ತೇನೆ, ನಿಮ್ಮ ಪಾಡಿಗೆ ನೀವಿರಿ ಅಷ್ಟೆ. ನಾನು ಏನೂ ಮಾತನಾಡಲ್ಲ, ನೀವು ಏನೂ ಮಾತಾಡಬೇಡಿ ಅಷ್ಟೆಎಂದು ಶಾಸಕ ಶಿವಲಿಂಗೇಗೌಡ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮೇಲಿನ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು ಅವರೇನಾದರೂ ಬಿಚ್ಚಿದ್ರೆ ನಾವೂ ಬಿಚ್ಚಬೇಕಾಗುತ್ತೆ. ಹಾಲು ಉತ್ಪಾದಕರ ಸಂಘದವರನ್ನು ಪಂಚರತ್ನ ಯಾತ್ರೆ ಸಭೆಗೆ ಕರೆದುಕೊಂಡು ಬರಲು ಯಾರು ಹೇಳಿದ್ದು? ಡಿಸಿಸಿ ಬ್ಯಾಂಕ್ ಸೂಪರ್ವೈಸರ್ ದುಡ್ಡು ಹಂಚಲೆಂದೇ ಇರೋದಾ? ಹೇಗೆ ಜನರನ್ನು ಕರೆದುಕೊಂಡು ಬಂದರು ಎಂದು ಹೇಳಲಾ ಎಂದು ಪ್ರಶ್ನಿಸಿದರು. ಯಾರು ಏನೇ ಹೇಳಿದರೂ ಅರಸೀಕೆರೆ ಕ್ಷೇತ್ರದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಅವರು ಏನು ಹೇಳುತ್ತಾರೋ ಅದೇ ರೀತಿ ನನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ನಾನು ಕಾಂಗ್ರೆಸ್ ಸೇರುತ್ತೇನೆಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಅವರ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ. ಇಷ್ಟೆಲ್ಲ ಆದ ಮೇಲೆ ನಾನು ಪಕ್ಷ ಬಿಡಬಹುದು ಎಂದು ಸ್ವಾಗತ ಮಾಡಿರಬಹುದು. ಅನಾರೋಗ್ಯ ಪೀಡಿತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ನೋಡಲು ಎರಡು ದಿನ ಹೋಗಿದ್ದೆ. ಫಿಜಿಯೋಥೆರಪಿಯಲ್ಲಿ ಇದ್ದ ಕಾರಣ ಸಿಗಲಿಲ್ಲ. ದೂರವಾಣಿ ಮೂಲಕ ಮಾತನಾಡಿದರು. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರ್ ಆಯ್ತು ಅಷ್ಟೆಅಂದೆ. ಎರಡ್ಮೂರು ಸಾರಿ ಅವರ ಬಳಿ ನೇರವಾಗಿ ಮಾತನಾಡಲು ಯತ್ನಿಸಿದೆ, ಆಗಲಿಲ್ಲ ಎಂದರು.
ಯಶ್, ರಿಷಬ್ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ
ನನ್ನನ್ನು ಪಕ್ಷದಿಂದ ಹೊರಕಳಿಸಲು ಜೆಡಿಎಸ್ ಸಂಚು: ನಾನಿನ್ನೂ ಜೆಡಿಎಸ್ ಪಕ್ಷದ ಶಾಸಕ. ಆದರೆ ಫೆ.9ರಂದು ಅರಸೀಕೆರೆಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದ್ದಾರೆ. ಆ ಸಭೆಗೆ ನನ್ನನ್ನೂ ಆಹ್ವಾನಿಸಿಲ್ಲ. ಜೊತೆಗೆ ಭಾನುವಾರ ಹಮ್ಮಿಕೊಳ್ಳಲಾಗಿರುವ ಸಭೆಗೂ ಆಹ್ವಾನ ನೀಡಿಲ್ಲ. ನಾನೇ ಪಕ್ಷದಿಂದ ಹೊರಹೋಗುವಂತೆ ಸಂಚು ರೂಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತುಕತೆ ನಡೆದದ್ದು ನಿಜ. ಹಲವು ಸನ್ನಿವೇಶ ಹಾಗೂ ನಿದರ್ಶನಗಳನ್ನು ನೀಡಿ ನಾನೇನಾದರೂ ಕಾಂಗ್ರೆಸ್ ಪಕ್ಷಕ್ಕೆ ಹೋದಲ್ಲಿ ಕನಿಷ್ಠ ಸಾಂಪ್ರದಾಯಿಕ ಮತಗಳು ಮತ್ತು ನಮ್ಮ ಅಭಿವೃದ್ಧಿ ಕಾರ‍್ಯಗಳಿಗೆ ಮೆಚ್ಚಿ ಮತ ಬೀಳುತ್ತದೆಂದು ಹೇಳಿದ್ದೆ.
ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್.ಡಿ.ಕುಮಾರಸ್ವಾಮಿ
ಎಂದೋ ಹಿತೈಷಿಗಳೊಂದಿಗೆ ಮಾತನಾಡಿದ ಆ ವಿಚಾರವನ್ನು ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅರಸೀಕೆರೆಯಲ್ಲಿ ರಾಜಕೀಯ ಗೊಂದಲ ಎಬ್ಬಿಸಲಾಗುತ್ತಿದೆ. ನಾನು ನನ್ನ ಅಭಿಮಾನಿಗಳ ಸಭೆ ಕರೆದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದೆ. ಆದರೆ ಕ್ಷೇತ್ರದಲ್ಲಿ 6 ತಿಂಗಳ ಹಿಂದಿನಿಂದಲೇ ಸ್ವಯಂಘೋಷಿತ ಅಭ್ಯರ್ಥಿಯೊಬ್ಬ ಪ್ರಚಾರ ಆರಂಭಿಸಿದ್ದಾರೆ. ಆತ ಕಾಂಗ್ರೆಸ್‌ನಲ್ಲಿದ್ದು, ಅದ್ಯಾವಾಗ ನನಗೆ ತಿಳಿಯದೆ ಜೆಡಿಎಸ್‌ಗೆ ಸೇರ್ಪಡೆಯಾದ ಎಂಬುದೇ ನನಗೆ ಅಚ್ಚರಿ. ನಾನು ಇನ್ನೂ ಜೆಡಿಎಸ್ ಪಕ್ಷದಲ್ಲಿದ್ದೇನೆ, ಶಾಸಕನಾಗಿದ್ದೇನೆ. ಅವರ ಪಕ್ಷ ಅವರಿಗೆ ಯಾರು ಇಷ್ಟವೋ ಅವರನ್ನು ಅಭ್ಯರ್ಥಿ ಮಾಡುತ್ತಾರೆ. ನಾನು ನನ್ನ ಕಾರ್ಯಕರ್ತರು ನೀಡುವ ಸೂಚನೆ ಮೇರೆಗೆ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ತಿಳಿಸಿದರು.
