ಒಂದೇ ದಿನ 2 ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಂಕರ ಪಾಟೀಲ್ ಮುನೇನಕೊಪ್ಪ


* ಸಚಿವರಾಗಿ ಎರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ಶಂಕರ್  ಪಾಟೀಲ್ ಮುನೇನಕೊಪ್ಪ 
*  ತಪ್ಪಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಎರಡನೇ ಬಾರಿ ಗೌಪ್ಯತಾ ಪ್ರಮಾಣ ವಿಧಿ ಸ್ವೀಕಾರ 
* ಇದೇ ಮೊದಲ ಬಾರಿಗೆ ಸಚಿವರಾಗಿರುವ ಶಂಕರ್ ಪಾಟೀಲ್ ಮುನೇನಕೊಪ್ಪ 

MLA Shankar Patil Munenakoppa take Oath for second time as Minister rbj

ಬೆಂಗಳೂರು, (ಆ.04):  ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಸಚಿವರಾಗಿ ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿರುವ ಪ್ರಸಂಗ ನಡೆದಿದೆ.

ಹೌದು....ಕರ್ನಾಟಕ ನೂತನ ಸಚಿವ ಸಂಪುಟ ಪ್ರಮಾಣವಚನ ಸಮಾರಂಭದಲ್ಲಿ ತಮ್ಮ ಪ್ರಮಾಣ ಸ್ವೀಕಾರ ವೇಳೆ ಕೊಂಚ ತಪ್ಪಾಗಿದೆ. ಬಳಿಕ ಅವರು ಶಂಕರ ಪಾಟೀಲ್ ಮುನೇನಕೊಪ್ಪ ಅವರು ರಾಜ್ಯಪಾಲರ ಕಚೇರಿಗೆ ಹೋಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಶಂಕರ ಪಾಟೀಲ್ ಮುನೇನಕೊಪ್ಪ 2ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ರಾಜಭವನದಲ್ಲಿ ರಾಜ್ಯಪಾಲರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ವೇಳೆ ತಾಂತ್ರಿಕ ದೋಷ ಉಂಟಾಗಿತ್ತು. ಮುನೇನಕೊಪ್ಪ, ಅಧಿಕಾರ ಪ್ರಮಾಣವನ್ನೇ ಎರಡು ಬಾರಿ ಓದಿದ್ದರು. ಗೌಪ್ಯತಾ ಪ್ರಮಾಣ ವಿಧಿ ಪೂರೈಸಿರಲಿಲ್ಲ.

ಬಳಿಕ ಸಚಿವ ಮುನೇನಕೊಪ್ಪ ರಾಜಭವನ ಸಂಪರ್ಕ ಮಾಡಿದ್ದರು. ಬಳಿಕ, ಶಂಕರ ಪಾಟೀಲ್ ರಾಜ್ಯಪಾಲರೆದುರು ಗೌಪ್ಯತಾ ಪ್ರಮಾಣ ವಿಧಿ ಸ್ವೀಕಾರ ಮಾಡಿದ್ದಾರೆ. ಈ ವೇಳೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.

ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಜಗದೀಶ್ ಶೆಟ್ಟರ್ ಅವರು ಹಿಂದೆ ಸರಿದು ಇವರ ಪರ ಬ್ಯಾಟಿಂಗ್ ಮಾಡಿದ್ದರಿಂದ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮಂತ್ರಿಭಾಗ್ಯ ಸಿಕ್ಕಿದೆ. 

Latest Videos
Follow Us:
Download App:
  • android
  • ios